Dharwad

ಸನಾತನ ಧರ್ಮ ವಿರೋಧ ಮಾಡುವವರು ಪಾಕಿಸ್ತಾನದ ಏಜೆಂಟರು : ಶಾಸಕ ಬಸನಗೌಡ ಪಾಟೀಲ್ ಯತ್ನಾಳ

Share

ಸನಾತನ ಧರ್ಮ ವಿರೋಧ ಮಾಡುವವರು ಪಾಕಿಸ್ತಾನದ ಏಜೆಂಟರು, ಅವರು ಉದ್ದಾರ ಆಗೋದಿಲ್ಲ, ಅವರಿಗೆ ಏಡ್ಸ್ ಬರುತ್ತದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದ್ದರು
ಈದ್ಗಾ ಮೈದಾನದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದ ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ಹಿಂದೂಗಳ, ಸನಾತನ ಧರ್ಮವನ್ನು ಅವನತಿ ಮಾಡುತ್ತೇನೆ ಎಂದಿದ್ದರು. ಯಾರು ಸನಾತನ ಧರ್ಮದ ಬಗ್ಗೆ ಮಾತನಾಡಿದ್ದಾರೆ ಯಾರು ಉದ್ದಾರ ಆಗಿಲ್ಲ. ಹುಬ್ಬಳ್ಳಿಯ ಈದ್ಗಾ ಮೈದಾನ ಅಂಜುಮನ್ ಇಸ್ಲಾಂ ಸಂಸ್ಥೆಯ ಒಡೆತನದ ಆಸ್ತಿಯಲ್ಲ. ಇಲ್ಲಿ ಅಷ್ಟೇ ಅಲ್ಲಾ ಮುಂದಿನ 2024 ಕ್ಕೆ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗತ್ತಾರೆ. ಆಗ ಪಾಕಿಸ್ತಾನದ ಲಾಹೋರಿನಲ್ಲಿ ಗಣಪತಿ ಕೂಡಿಸೋಣ. ನಮ್ಮ ದೇಶದಲ್ಲಿ ರಾಷ್ಟ್ರಧ್ವಜ ಹಾರಿಸಲು ಯಾರ ಅನುಮತಿ ಬೇಕಾಗಿದೆ. ನಾವು ಚಂದ್ರನ ಮೇಲೆ ರಾಷ್ಟ್ರಧ್ವಜ ಹಾರಿಸಿ ಬಂದೀವಿ. ಚೆನ್ನಮ್ಮ ಮೈದಾನದಲ್ಲಿ ಹನುಮಾನ್ ಚಾಲೀಸಾ ಪಠಣ ಮಾಡ್ತೀವಿ. ಪಾಕಿಸ್ತಾನದಲ್ಲಿ ತಿನ್ನೋಕೆ ಅನ್ನಾ ಇಲ್ಲಾ, ಪಾಕಿಸ್ತಾನ್ ಜಿಂದಾಬಾದ್ ಅಂತಾರ.ಮೋದಿಯವರು ಇನ್ನೊಮ್ಮೆ ಪ್ರಧಾನಿ ಆಗ್ತಾರೆ, ಪಾಕಿಸ್ತಾನ ದಾಟಿ ಅಪ್ಘಾನಿಸ್ತಾನ್ ಬಾರ್ಡರ್‌ವರೆಗೆ ಹೋಗ್ತೀವಿ ಈದ್ಗಾ ಮೈದಾನ ಅಂದ್ರೆ ಸಾಬರಿಗೆ ಹುಟ್ಟಿದಂತೆ. ಈ ಮೈದಾನಕ್ಕೆ‌ ರಾಣಿ ಚೆನ್ನಮ್ಮ ಮೈದಾನ ಅನ್ಬೇಕು.

ಡಿಎಮ್‌ಕೆ ಮುಖಂಡ ಹೇಳ್ತಾನ, ಸನಾತನ ಧರ್ಮಕ್ಕೆ ರೋಗ ಅಂತಾನೆ. ಸನಾತನ ಧರ್ಮವನ್ನು ವಿರೋಧಿಸುವವರೆಲ್ಲರಿಗೆ ಏಡ್ಸ್ ಬರುತ್ತೆ. ನರೇಂದ್ರ ಮೋದಿಯವರನ್ನು ವಿರೋಧಿಸುವವರೆಲ್ಲಾ ದೇಶದ್ರೋಹಿಗಳು.ಮೋದಿಯವರು ಪ್ರಧಾನಿಯಾಗಿರುವ ಕಾರಣ ದೇಶ ಶಾಂತವಾಗಿದೆ. ವಿಘ್ನಗಳು ನಾಶವಾಗಲಿ ಅಂತಾನೇ ಗಣೇಶ ಹಬ್ಬದ ದಿನ ಹೊಸ ಸಂಸತ್ ಭವನದಲ್ಲಿ ಮೋದಿ ಅಧಿವೇಶನ ಮಾಡ್ತಿದ್ದಾರೆ. ಹುಬ್ಬಳ್ಳಿಯ ಈದ್ಗಾ ಮೈದಾನ ಯಾರಪ್ಪನ ಆಸ್ತಿ ಅಲ್ಲಾ. ಅಂಜುಮನ್ ಆಸ್ತಿ ಅಲ್ಲಾ, ಪಾಕಿಸ್ತಾನ ಆಸ್ತಿ ಅಲ್ಲ. ರಾಜ್ಯದ ವಕ್ಫ್ ಆಸ್ತಿ ಸರ್ಕಾರದ ವಶಕ್ಕೆ ಪಡೆಯಲು ಹೋರಾಡುತ್ತಿದ್ದೇವೆ

Tags: