hubbali

ಬಸ್ ಯಾತ್ರೆ ಮಾಡೇ ಮಾಡತ್ತೇವೆ : ಡಿ.ಕೆ ಶಿವಕುಮಾರ

Share

ಕೊರೋನಾ ಹೆಸರಿನಲ್ಲಿ ಸರ್ಕಾರ ರಾಜ್ಯದ ಜನರನ್ನು ಭಯದ ವಾತಾವರಣದಲ್ಲಿ ತಳ್ಳಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಬಸ್ ಯಾತ್ರೆ ಮಾಡೇ ಮಾಡತ್ತೇವೆ. ಯಾರು ಹೇಳಿದ್ರು ಬಿಟ್ರು. ಆದರೆ ಈಗಾಗಲೇ ರಾಜ್ಯದ ಜನರು ಕೊರೋನಾ ಶಾಕ್ ನಿಂದ ಹೊರಬಂದು ಜೀವನ ಸಾಗಿಸುತ್ತಿದ್ದಾರೆ. ಈ ಹಿಂದೆ ಜನರಿಗೆ ಸಹಕಾರ ಕೊಡಬೇಕಿದ್ದಾಗ ಸರ್ಕಾರ ಕೊಡಲಿಲ್ಲ. ಸುಖಾಸುಮ್ಮನೆ ಜನಕ್ಕೆ ಭಯ ಹುಟ್ಟಿಸಬಾರದು. ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ತಮ್ಮ ಜವಾಬ್ದಾರಿ ನಿಭಾಯಿಸಲಿ ಎಂದರು.

ಮಹಾರಾಷ್ಟ್ರದ ಒಂದು ಹಳ್ಳಿ ನಮಗೆ ಬೇಡಾ:

ಬೆಳಗಾವಿ, ಕಾರವಾರ, ನಿಪ್ಪಾಣಿಯನ್ನು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಘೋಷಣೆ ಮಾಡಬೇಕೆಂಬ ಮಹಾರಾಷ್ಟ್ರದವರ ಹೇಳಿಕೆಗೆ ಪ್ರತಿಕ್ರಿಯಿಸಿ ಡಿ.ಕೆ.ಶಿವಕುಮಾರ್ ಮಹಾರಾಷ್ಟ್ರ- ಬೆಳಗಾವಿ ಗಡಿಯಲ್ಲಿ ರಾಜ್ಯಗಳ ಗಡಿಗಳು ಗುರುತು ಆಗಿವೆ. ಹೀಗಾಗಿ ನಮಗೆ ಮಹಾರಾಷ್ಟ್ರದ ಒಂದು ಹಳ್ಳಿ ನಮಗೆ ಬೇಡಾ. ನಮ್ಮ ಹಳ್ಳಿ ಅವರಿಗೆ ಬೇಡಾ. ಇದೀಗ ಜನರು ನೆಮ್ಮದಿಯಿಂದ ಇದ್ದಾರೆ. ಮುಂದೆ ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತೆ. ಅವಾಗ ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ಪ್ಯಾಕೇಜ್ ಘೋಷಣೆ ಮಾಡಿ. ಈ ಭಾಗದಲ್ಲಿ ಉದ್ಯೋಗಾವಕಾಶ ಸೃಷ್ಟಿಗೆ ಮುಂದಾಗುತ್ತೇವೆ ಎಂದರು.

ಈಗಾಗಲೇ ಕೇಂದ್ರದ ಗೃಹ ಸಚಿವರು ಎರಡು ರಾಜ್ಯಗಳ ಸಿಎಂಗಳೊಂದಿಗೆ ಸಭೆ ಮಾಡಿದ್ದಾರೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ. ಇದರಿಂದ ಸಭೆಗೆ ಕಿಮ್ಮತ್ತು ಇಲ್ಲದಾಯಿತು. ಇದೆಲ್ಲ ಬಿಜೆಪಿಯವರ ತಂತ್ರಗಾರಿಕೆ ಎಂದು ಕಿಡಿಕಾರಿದರು.

ಜನಾರ್ದನ ರೆಡ್ಡಿ ಪಕ್ಷ ಉದಯವಾಗಲಿ:

ಜನಾರ್ದನ ರೆಡ್ಡಿ ಅವರ ಪಕ್ಷ ಉದಯವಾಗಲಿ. ಇದೀಗ ರೆಡ್ಡಿ ಪಕ್ಷ ಹುಟ್ಟಿದೆ. ಅದಕ್ಕೆ ನಾಮಕರಣ ಆಗಿದೆ. ಮುಂದೆ ಚಿಹ್ನೆ ಬರಲಿ. ಕೇವಲ ಒಂದು ಪತ್ರಿಕಾಗೋಷ್ಠಿ ಮಾಡಿದರೇ ನಾನು ಅದನ್ನು ಗಂಭೀರವಾಗಿ ಪರಿಗಣಿಸಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

Tags: