ರಾಶಿ ಮಷಿನ್‌ಗೆ ಸಿಲುಕಿ ಮಹಿಳೆ ಅಸುನೀಗಿರುವ ಘಟನೆ ವಿಜಯಪುರ ಜಿಲ್ಲೆಯ
ಬಸವನ ಬಾಗೇವಾಡಿ ತಾಲ್ಲೂಕಿನ ದೇಗಿನಾಳ ಗ್ರಾಮದಲ್ಲಿ ಬುಧವಾರ ನಡೆದಿದೆ.
ಭೀಮವ್ವ ಸಾಬು ಉಕ್ಕಲಿ ಸಾವನ್ನಪ್ಪಿದ ದುರ್ದೈವಿ. ಕೆಲಸಕ್ಕೆ ಹೋದ ವೇಳೆ
ಮೆಕ್ಕೆ ಜೋಳದ ರಾಶಿ ಮಾಡುವಾಗ ಆಯತಪ್ಪಿ ಮಷಿನ್‌ಗೆ ಬಿದ್ದು ಮಹಿಳೆ ಸಾವನ್ನಪ್ಪಿದ್ದಾಳೆ.
ಮುನ್ನಾ ಡೋಣುರ ಎಂಬುವವರು ತೋಟದಲ್ಲಿ ಕೆಲಸ ಮಾಡುವಾಗ ಮಷಿನ್‌ಗೆ ಬಿದ್ದಿದ್ದಾಳೆ.
ಘಟನಾ ಸ್ಥಳಕ್ಕೆ ಮನಗೂಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮನಗೂಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.