Chikkodi

ಸ್ವತಃ ಅಣ್ಣನನ್ನೆ ಮಾರಾಕಾಸ್ರ್ತಗಳಿಂದ ಕೊಚ್ಚಿ ಕೊಲೆ ಮಾಡಿದ ತಮ್ಮ

Share

ಸ್ವತಃ ಅಣ್ಣನನ್ನೆ ತಮ್ಮ ಮಾರಾಕಾಸ್ರ್ತಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದ ನಿಪ್ಪಾಣಿ-ಮುಧೋಳ ರಸ್ತೆಯಲ್ಲಿ ನಡೆದಿದೆ…

ಅಕ್ಬರ ಶೇಖ(೪೦) ಕೊಲೆಯಾದ ವ್ಯಕ್ತಿ ಎಂದು ತಿಳಿದು ಬಂದಿದೆ.ಚಿಕ್ಕೋಡಿ ಪಟ್ಟಣದ ಡಂಬಲ ಕೂಟ ನಿವಾಸಿ.ಮೃತ ಅಕ್ಬರ್ ಶೇಖ್ ಕಬ್ಬೂರ ಗ್ರಾಮದಿಂದ ಚಿಕ್ಕೋಡಿಗೆ ದ್ವಿಚಕ್ರವಾಹನದ ಮೇಲೆ ಬರುತ್ತಿರುವ ವೇಳೆ ಕಾರುಯೊಂದು ಹಿಂಬಾಲಿಸಿಕೊಂಡು ಬಂದು ಮಾರಾಕಾಸ್ರ್ತಗಳಿಂದ ಕೊಚ್ಚಿ ಬರ್ಬರವಾಗಿ‌ ಕೊಲೆ ಮಾಡಲಾಗಿದೆ.ಕೊಲೆ ಮಾಡಿದ ವ್ಯಕ್ತಿ ಸ್ವತಃ ತಮ್ಮ ಅಮಜಾದ್ ಶೇಖ್ ಎಂದು ತಿಳಿದು ಬಂದಿದೆ.

.ಹಳೆಯ ವೈಷಮ್ಯ ಹಿನ್ನಲೆಯಲ್ಲಿ ಈ ಕೊಲೆ ನಡೆದಿದೆ ಎಂದು ಮೇಲ್ನೋಟಕ್ಕೆ ‌ತಿಳಿದು ಬಂದಿದೆ.ಘಟನಾ ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಭೇಟಿಯನ್ನು ನೀಡಿ ಪ್ರಕರಣದ ಕುರಿತು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.

Tags: