ಹುಕ್ಕೇರಿ ಕೋರ್ಟ್ ಸರ್ಕಲ್ ಹತ್ತಿರ ಜನಬಿಡದಿ ಸ್ಥಳದಲ್ಲಿ ಕಳೆದ ನಾಲ್ಕು ವರ್ಷಗಳ ಹಿಂದೆ ಇಂದಿರಾ ಕ್ಯಾಂಟೀನ್ ಸಕಲ ಸಲಕರಣೆಯೊಂದಿಗೆ ತಲೆ ಎತ್ತಿ ನಿಂತಿದೆ ಆದರೆ ಇಲ್ಲಿಯ ವರಗೆ ಪ್ರಾರಂಭವಾಗದೆ ಅನಾಥ ಕಟ್ಟಡವಾಗಿದೆ, ಕಿಡಗೇಡಿಗಳು ಕಟ್ಟಡದ ಕಿಡಕಿ , ಬಾಗಿಲು ಮುರಿದು ಒಳಗೆ ಇರುವ ಪೀಠೋಪಕರಣಗಳನ್ನು ಹಾಳು ಮಾಡಿದ್ದಾರೆ ಅಲ್ಲದೆ ಗುಟಕಾ ತಿಂದು ಉಗುಳಿ ,ಸಾರಾಯಿ ಬಾಟಲಿ ಬಿಸಾಡಿ ಗಲಿಜು ಮಾಡಿದ್ದಾರೆ ಒಟ್ಟರೆಯಾಗಿ ಅನ್ಯತಿಕ ಚಟುವಟಿಕೆಯ ತಾಣವಾಗಿದೆ.
ಈ ಕುರಿತು ಇನ್ ನ್ಯೂಜ ಜೋತೆ ಮಾತನಾಡಿದ ಹುಕ್ಕೇರಿ ತಾಲೂಕಾ ಕಾಂಗ್ರೆಸ್ ಅಲ್ಪ ಸಂಖ್ಯಾಂತರ ಘಟಕದ ಅದ್ಯಕ್ಷ ಶಾನೂಲ ತಹಸಿಲ್ದಾರ ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ ನವರ ಸರ್ಕಾರ ಯಾವದೇ ವ್ಯಕ್ತಿ ಹಸಿವಿನಿಂದ ಬಳಲಬಾರದು ಎಂದು ರಾಜ್ಯಾದ್ಯಾಂತ ಇಂದಿರಾ ಕ್ಯಾಂಟಿನ ತೆರೆಯುವ ಮೂಲಕ ಕಡಿಮೇ ದರದಲ್ಲಿ ಉಪಹಾರ ಮತ್ತು ಊಟ ನೀಡುವ ಇಂದಿರಾ ಕ್ಯಾಂಟಿನ ಪ್ರಾರಂಭಿಸಲಾಗದೆ, ಆದರೆ ಹುಕ್ಕೇರಿ ತಾಲೂಕಾ ಕೇಂದ್ರದಲ್ಲಿ ಸುಸಜ್ಜಿತ ಇಂದಿರಾ ಕ್ಯಾಂಟಿನ ಕಟ್ಟಡ ಹಾಗೂ ಪೀಠೋಪಕರಣಗಳನ್ನು ಒದಗಿಸಿದರೂ ಇನ್ನೂವರೆಗೆ ಪ್ರಾರಂಭವಾಗಿಲ್ಲಾ ಈ ಕುರಿತು ಅಧಿಕಾರಿಗಳಿಗೆ ಕೇಳಿದರೆ ಹಾರಿಕೆ ಉತ್ತರ ನೀಡುತ್ತಿದ್ದಾರೆ, ಇದಕ್ಕೆ ಕಾರಣ ರಾಜಕೀಯ ಇಲ್ಲಿಯ ಬಿ ಜೆ ಪಿ ಶಾಸಕರು ಮಂತ್ರಿಯಾಗಿದ್ದಾರೆ ಕೂಡಲೆ ಬಡವರ ಪಾಲಿನ ಯೋಜನೆಗೆ ಚಾಲನೆ ನೀಡಬೇಕು ಇಲ್ಲವಾದರೆ ಕಾಂಗ್ರೆಸ್ ನಾಯಕರ ಮಾರ್ಗದರ್ಶನದಲ್ಲಿ ಹೋರಾಟ ಮಾಡಲಾಗುವದು ಎಂದರು ,
ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಘಟಕದ ಕಾರ್ಯದರ್ಶಿ ರಾಜು ಶಿದ್ನಾಳ ಮಾತನಾಡಿ ಸಿದ್ದರಾಮಯ್ಯ ಸರ್ಕಾರದ ಬಡವರ ಹೋಟ್ಟೆ ತುಂಬಿಸುವ ಇಂದಿರಾ ಕ್ಯಾಂಟೀನ್ ಯೋಜನೆ ಹುಕ್ಕೇರಿ ನಗರದಲ್ಲಿ ಪ್ರಾರಂಭವಾಗದೆ ಸರ್ಕಾರದ ಹಣ ವ್ಯರ್ಥವಾಗಿದೆ ಗ್ರಾಮಿಣ ಭಾಗದಿಂದ ಬರುವ ಜನ ಹಾಗೂ ಕೂಲಿ ಕಾರ್ಮಿಕರು,ರಿಕ್ಷಾ ಚಾಲಕರು ಮೊದಲಾದವರಿಗೆ ಕೇವಲ 10 ರೂಪಾಯಿಗೆ ಹೋಟ್ಟೆಗೆ ಅನ್ನ ನೀಡುವ ಯೋಜನೆ ರಾಜಕೀಯ ಉದ್ದೇಶದಿಂದ ಪಕ್ಷಪಾತ ಮಾಡುತ್ತಿದ್ದಾರೆ ,
ಅಧಿಕಾರಿಗಳು ಕಟ್ಟಡ ಮತ್ತು ಅಡುಗೆ ಸಾಮಗ್ರಿಗಳು ಹಾಳಾಗದಂತೆ ಕ್ರಮ ಜರುಗಿಸ ಬೇಕು ಮುಂಬರುವ 2023 ರಲ್ಲಿ ರಾಜ್ಯದಲ್ಲಿ ನಮ್ಮದೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಈ ಕ್ಯಾಂಟೀನ್ ಪ್ರಾರಂಬಿಸಲಾಗುವದು ಎಂದರು ,
ಈ ಸಂದರ್ಭದಲ್ಲಿ ಚಿದಾನಂದ ಕರಡಿ, ಸುಲ್ತಾನ ಅಮ್ಮಣಗಿ, ಮಲ್ಲಪ್ಪ ಚಿಕ್ಕಾಲಗುಡ್ಡ ಮೊದಲಾದವರು ಉಪಸ್ಥಿತರಿದ್ದರು.