Hukkeri

ಗಣರಾಜ್ಯೋತ್ಸವ ದಿನ ಬೈಕ್ ರ‍್ಯಾಲಿ ಮುಖಾಂತರ ಮುರುಡೇಶ್ವರಕ್ಕೆ ತೇರಳಿದ ಯುವಕರು

Share

ಹುಕ್ಕೇರಿ ಮತ್ತು ಘಟಪ್ರಭಾ ಮೂಡಲಗಿ ರಾಯಲ್ ಎಮ್‍ಫೀಲ್ಡ ಬೈಕ್ ಗ್ರುಪ್ ಮಾಡಿಕೊಂಡು ಯುವಕರು ಗಣರಾಜ್ಯೋತ್ಸವದ ದಿನ ಘಟಪ್ರಭಾದಿಂದ ಮುರುಡೇಶ್ವರ ದೇವಸ್ಥಾನಕ್ಕೆ ರ್ಯಾಲಿ ಮುಖಾಂತರ ತೇರಳಿ 73 ನೇ ಗಣರಾಜ್ಯೋತ್ಸವನ್ನು ಆಚರಿಸಿದರು.

ಸುಮಾರು 30 ಬೈಕ್ ಮೇಲೆ ತೆರಳುವ ಯುವಕರಿಗೆ ಮಾರ್ಗ ಮದ್ಯೆ ಹುಕ್ಕೇರಿ ನಗರದಲ್ಲಿ ಪುರಸಭೆ ಸದಸ್ಯರು ಮತ್ತು ಪೆÇೀಲಿಸ್ ಇನ್ಸ್ಪೆಕ್ಟರ್ ರಫೀಕ್ ತಹಶೀಲ್ದಾರ್ ಹೂ ಗುಚ್ಚ ನೀಡಿ ಸ್ವಾಗತಿಸಿ ಶುಭಾಶಯದೊಂದಿಗೆ ಟ್ರಾಫಿಕ್ ನಿಯಮಗಳನ್ನು ಪಾಲಿಸುವಂತೆ ಸೂಚಿಸಿ ಬಿಳ್ಕೋಟ್ಟರು.

ಬೈಕ್ ಸವಾರರು ಮಾದ್ಯಮಗಳೊಂದಿಗೆ ಮಾತನಾಡಿ ಪ್ರತಿ ವರ್ಷ ಗಣರಾಜ್ಯೋತ್ಸವ ದಿನ ಮೂಡಲಗಿ, ಗೋಕಾಕ, ಘಟಪ್ರಭಾದಲ್ಲಿ ಯುವಕರ ತಂಡವು ರಾಯಲ್ ಎನಫೀಲ್ಡ ಗ್ರುಪ್ ನ ಯುವಕರು ಮರ್ಡೆಶ್ವರಕ್ಕೆ ತೇರಳಿ ಪೂಜೆ ಮಾಡುತ್ತೆವೆ ಇಂದು ಮಾರ್ಗ ಮದ್ಯೆ ಹುಕ್ಕೇರಿ ನಗರದ ಪುರಸಭೆ ಸದಸ್ಯರು ಮತ್ತು ಪೆÇೀಲಿಸ್ ಅಧಿಕಾರಿಗಳು ನಮಗೆ ಶುಭ ಕೋರಿದ್ದಕ್ಕೆ ಅವರಿಗೆ ಧನ್ಯವಾದಗಳು ಹೇಳುತ್ತೆವೆ ಎಂದರು.

ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ಆನಂದ ಗಂಧ, ಸದಸ್ಯರಾದ ರಾಜು ಕುರಂದವಾಡೆ, ರಾಜು ಮುನ್ನೋಳ್ಳಿ, ಜಯಗೌಡಾ ಪಾಟೀಲ, ಮಧುಕರ ಕರನಿಂಗ, ಬಸವರಾಜ ಪಟ್ಟಣಶೇಟ್ಟಿ, ಗಜಬರ ಮುಲ್ಲಾ, ಅಮಿತ ಪಟ್ಟಣಶೆಟ್ಟಿ, ಅಮಿತ ಬಾಗಲಕೋಟಿ, ರಾಹುಲ ಮಲಗೌಡನ್ನವರ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

Tags: