Chikkodi

ಯಕ್ಸಂಬಾ ಪಟ್ಟಣದಲ್ಲಿ ‌ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಗಣೇಶ ಹುಕ್ಕೇರಿ

Share

ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ‌ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಗಣೇಶ ಹುಕ್ಕೇರಿ ಚಾಲನೆಯನ್ನು ನೀಡಿದರು..

ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಶಾಸಕ ಗಣೇಶ ಹುಕ್ಕೇರಿ ಅವರು, ಯಕ್ಸಂಬಾ-ಮಲೀಕವಾಡ ಮಾರ್ಗ ಮಧ್ಯದಲ್ಲಿ ಇರುವ ಹಳ್ಳಕ್ಕೆ 1 ಕೋಟಿ 50 ಲಕ್ಷ ರೂಪಾಯಿ ವೆಚ್ಚದಲ್ಲಿ ಸಿಡಿ ವರ್ಕ್ ಹಾಗೂ ಮಲಿಕವಾಡ-ದತ್ತವಾಡ ಬ್ರಿಡ್ಜ್ ವರೆಗೆ 3 ಕೋಟಿ 34 ಲಕ್ಷ ರೂಪಾಯಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ, 2 ಕೋಟಿ ರೂಪಾಯಿ ವೆಚ್ಚದಲ್ಲಿ ಯಕ್ಸಂಬಾ ಪಟ್ಟಣದ ಕರಾಳೆ ಪೆಟ್ರೋಲ್ ಬಂಕ್ ನಿಂದ ಚಿಕ್ಕೋಡಿ ಸದಲಗಾ ಮುಖ್ಯ ರಸ್ತೆ ಮಾರ್ಗವಾಗಿ ಸಂತೂಬಾಯಿ ತೋಟದ ರಸ್ತೆ, ಸಾಂಬ್ರೆ ತೋಟದ ರಸ್ತೆ, ಕರ್ನಾಟಕಕೋಡಿ ರಸ್ತೆ ಸುಧಾರಣೆಯ ಕಾಮಗಾರಿಗಳಿಗೆ ಚಾಲನೆ ನೀಡಿದರು.

ನಂತರ ಮಾಧ್ಯಮಗಳ ‌ಜೊತೆ ಮಾತನಾಡಿ ಶಾಸಕ ಗಣೇಶ ಹುಕ್ಕೇರಿ ಯಕ್ಸಂಬಾ ಪ.ಪಂ ಚುನಾವಣೆಯಲ್ಲಿ ಜನ ನಮಗೆ ಆಶಿವಾರ್ದ ಮಾಡಿದ್ದಾರೆ.ಈ‌ ನಿಟ್ಟಿನಲ್ಲಿ ಯಕ್ಸಂಬಾವನ್ನು ಹೈಟೆಕ್ ಪಟ್ಟವನ್ನಾಗಿ ಅಭಿವೃದ್ಧಿ ಪಡಿಸುತ್ತೇವೆ ಎಂದು ಶಾಸಕ ಗಣೇಶ ಹುಕ್ಕೇರಿ ತಿಳಿಸಿದರು..

ನಂತರ ಪ.ಪಂ ಸದಸ್ಯ ಪೋಪಟ್ ಸಪ್ತಸಾಗರೆ ಅವರು ಮಾತನಾಡಿ ಶಾಸಕ ಗಣೇಶ ಹುಕ್ಕೇರಿ ಹಾಗೂ ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಅವರ ನೇತೃತ್ವದಲ್ಲಿ ಯಕ್ಸಂಬಾ ಪ.ಪಂ ಚುನಾವಣೆಯಲ್ಲಿ ಜನ ನಮಗೆ ಆಶಿವಾರ್ದ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಜನರ ನಿರೀಕ್ಷೆಯಂತೆ ಯಕ್ಸಂಬಾ ಪಟ್ಟಣವನ್ನು ಒಳ್ಳೆಯ ರೀತಿಯಾಗಿ ಅಭಿವೃದ್ಧಿ ಪಡಿಸುತ್ತೇವೆ ಎಂದರು..

ಈ ಸಂದರ್ಭದಲ್ಲಿ ಗುತ್ತಿಗೆದಾರ ರವಿ ಮಾಳಿ, ರಾಜು ಒಂಟಮುತ್ತೆ, ಪಿಡಬ್ಲುಡಿ ಇಂಜಿನಿಯರ್ ಬಿ .ಬಿ ಬೇಡಕಿಹಾಳೆ, ನೀರಾವರಿ ಇಲಾಖೆಯ ಇಂಜಿನಿಯರ್ ಮುಕುಂದ ಸಿಂಧೆ, ಯಕ್ಸಂಬಾ ಪಟ್ಟಣ ಪಂಚಾಯತಿ ಸದಸ್ಯರಾದ ಶಿವಗೌಡ ಬಾವಚೆ, ಜಮನಶಾ ಮಕಾನದಾರ, ಉಮೇಶ ಸಾತ್ವಾರ, ಅಂಕುಶ ಖೋತ, ಮಾರುತಿ ಮಾನೆ, ಸುಭಾಷ ಕಲ್ಯಾಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags: