ವಾಹನ ಚಾಲಕರಿಗೆ ಮತ್ತು ಸಾರ್ವಜನಿಕರಿಗೆ ಯಾರಿಗೂ ತೊಂದರೆ ಆಗದಂತೆ ಏನು ಬದಲಾವಣೆ ಮಾಡಲು ಸಾಧ್ಯವಿದೆಯೋ ಎಲ್ಲವನ್ನು ಮಾಡಲು ಸೂಚನೆ ಕೊಡುತ್ತೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಬೆಂಗಳೂರಿನ ಆರ್ಟಿ ನಗರ ನಿವಾಸದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಿಎಂ ಬೊಮ್ಮಾಯಿ ಅವರು ಇವತ್ತು ಕೆಲ ಉದ್ಘಾಟನೆ ಕಾರ್ಯಕ್ರಮಗಳಿವೆ, ಅಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಸಾಯಂಕಾಲ ಬೇರೆ ಮಿಟಿಂಗ್ಗಳಿವೆ. ಅದಾದ ಮೇಲೆ ಟೋಯಿಂಗ್ ಬಗ್ಗೆ ಬೆಂಗಳೂರು ಪೊಲೀಸ್ ಕಮಿಷನರ್, ಮತ್ತು ಟ್ರಾಫಿಕ್ನವರನ್ನು ಕರೆಸಿ ಎಲ್ಲವನ್ನೂ ವಿಚಾರಿಸುತ್ತೇನೆ. ವಾಹನ ಚಾಲಕರಿಗೆ ಮತ್ತು ಸಾರ್ವಜನಿಕರಿಗೆ ಯಾರಿಗೂ ತೊಂದರೆ ಆಗದಂತೆ ಏನು ಬದಲಾವಣೆ ಮಾಡಲು ಸಾಧ್ಯವಿದೆಯೋ ಎಲ್ಲವನ್ನು ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.