ಮನೆಯಲ್ಲಿ ಯಾರು ಇಲ್ಲದನ್ನು ನೋಡಿಕೊಂಡ ಕಳ್ಳರು, ಹಾಡು ಹಗಲೇ ಮನೆಯೊಂದಕ್ಕೆ ನುಗ್ಗಿ ಮನೆಯಲ್ಲಿದ ನಗದು ಹಾಗೂ ಚಿನ್ನಾಭರಣ ಕಳ್ಳತನ ಮಾಡಕೊಂಡು ಪರಾರಿಯಾಗಿರು ಘಟನೆ ಧಾರವಾಡದ ಚಾಲುಕ್ಯ ನಗರದಲ್ಲಿ ನಡೆದಿದೆ.
ನಗರದ ಶೆಟ್ಟರ್ ಕಾಲನಿಯ ಚಾಲುಕ್ಯ ನಗರದಲ್ಲಿ ಕಳ್ಳರು ವಿನಾಯಕ ಪಾಟೀಲರವರ ಮನೆಯಲ್ಲಿ ಚಾಲಾಕಿ ಕಳ್ಳರು ತಮ್ಮ ಕೈಚಳ ತೋರಿಸಿದ್ದಾರೆ. ಮುಂಜಾನೆಯ ಮನೆಯ ಸದಸ್ಯರೆಲ್ಲರು ಹೊರಗಡೆ ಕಾರ್ಯ ನಿಮಿತ್ಯ ತೆರಳಿದ್ದರು. ಮಧ್ಯಾಹ್ನದ ನಂತರ ಮನೆಗೆ ಮರಳಿದ್ದಾಗ, ಮನೆಯ ಮುಖ್ಯ ಧ್ವಾರದ ಲಾಕರ್ ತೆಗೆಯಲು ಮುಂದಾದಾಗ ಕಳ್ಳರ ಕೃತ್ಯ ತಿಳಿದು ಬಂದಿದೆ.
ಮನೆಯ ಒಳಗೆ ಹೋಗಿ ನೋಡಿದಾಗ ಟ್ರಜೂರಿಯ ಬೀಗ ಮುರಿದು, ಟ್ರಜೂರಿಯಲ್ಲಿದ್ದ ನಾಲ್ಕು ತ್ವಲೆ ಚಿನ್ನ, 1ಲಕ್ಷದಾ 50 ಸಾವಿರ ನಗದನ್ನು ಕಳ್ಳರು ಕದ್ದುಕೊಂಡು ಹೋಗಿದ್ದಾರೆ. ಕಳೆದೆರಡು ವರ್ಷಗಳಿಂದ ಮನೆಯನ್ನು ಲೀಸಿಗೆ ಪಡೆದುಕೊಂಡಿ ವಾಸ ಮಾಡುತ್ತಿದ್ದೇವೆ. ಇಲ್ಲಿಯವರೆಗೆ ಇಲ್ಲಿ ಯಾರೊಬ್ಬರ ಮನೆಯು ಕಳ್ಳತನವಾಗಿಲ್ಲ. ಈ ಓಣಿಯಲ್ಲಿ ನಮ್ಮ ಮನೆ ಕೊನೆಯದಾಗಿದ್ದು, ನಮ್ಮನ್ನು ಹತ್ತಿರದಿಂದ ನೋಡಿಕೊಂಡೇ ಕಳ್ಳರೇ ಈ ಕೃತ್ಯ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಇನ್ನೂ ಘಟನೆಯ ಕುರಿತು ವಿಧ್ಯಾಗಿರಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಮನೆಯ ಮಾಲೀಕರ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ವಿಧ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.