ಕುದುರೆಮನಿಯಲ್ಲಿ ತಲ್ವಾರ್ ಹಿಡಿದು ಅಕ್ಕಸಾಲಿಗನಿಂದ 6ಲಕ್ಷ ಮೌಲ್ಯದ ಚಿನ್ನಾಭರಣ ಹೋಚಿದ ಪರಾರಿಯಾದ ದುಷ್ಕರ್ಮಿಗಳು.
ಚಿನ್ನಾಭರಣ ಅಂಗಡಿ ಮುಚ್ಚಿ ಬೆಳಗುಂದಿಗೆ ಬರುತ್ತಿದ್ದ ಅಕ್ಕಸಾಲಿಗನನ್ನು ನಾಲ್ವರು ಕಳ್ಳರು ಕೈಯ್ಯಲ್ಲಿ ತಲ್ವಾರ್ ಹಿಡಿದು ಅಕ್ಕಸಾಲಿಗನನ್ನು ಬೆದರಿಸಿ ದರೋಡೆ ಮಾಡಿದ್ದಾರೆ. ಬೆಳಗಾವಿ ತಾಲೂಕಿನ ಕುದುರೆಮನಿಯಲ್ಲಿ ಸೋಮವಾರ ರಾತ್ರಿ ಈ ಘಟನೆ ನಡೆದಿದೆ. ಅಂಗಡಿಯಿಂದ ಮನೆಗೆ ತೆಗೆದುಕೊಂಡು ಹೋಗುತ್ತಿದ್ದ ಸುಮಾರು 6 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಕಳ್ಳರು ದೋಚಿದ್ದಾರೆ ಎಂದು ತಿಳಿದು ಬಂದಿದೆ.
ಬೆಳಗುಂದಿ ನಿವಾಸಿ ಸುಭಾಷ ವಾಮನ್ ಕಕ್ತಿಕರ್ ಕುದುರೆಮನಿಯಲ್ಲಿ ಚಿನ್ನದಂಗಡಿ ಹೊಂದಿದ್ದಾರೆ ಎಂದು ತಿಳಿದು ಬಂದಿದೆ. ನಿತ್ಯ ರಾತ್ರಿ 8 ಗಂಟೆಗೆ ಅಂಗಡಿ ಮುಚ್ಚಿ ಬೆಳಗುಂದಿಗೆ ಬರುವ ಇವರು ಸೋಮವಾರ ರಾತ್ರಿಯೂ ಅಂಗಡಿಗಳನ್ನು ಬಂದ್ ಮಾಡಿದ್ದಾರೆ. ಈತನನ್ನು ಸೊನೋಳಿ ಮಾರ್ಗವಾಗಿ ಬೆಳಗುಂದಿಗೆ ತೆರಳುತ್ತಿದ್ದಾಗ ತಲ್ವಾರ್ ಹಿಡಿದ ಇಬ್ಬರು ದ್ವಿಚಕ್ರವಾಹನ ಸವಾರರು ಹಿಂಬಾಲಿಸಿದ್ದಾರೆ. ದ್ವಿಚಕ್ರವಾಹನ ಸವಾರ ಸುಭಾಷ್ ಅವರ ಮೇಲೂ ಹಲ್ಲೆ ನಡೆಸಿದ್ದಾರೆ. ಸುಭಾಷ್ ತಲೆಗೆ ಹೆಲ್ಮೆಟ್ ಇದ್ದ ಕಾರಣ ಕಳ್ಳರು ತಪ್ಪಿಸಿಕೊಂಡಿದ್ದಾರೆ. ನಂತರ ಕಳ್ಳರು ಸುಭಾಷ್ ಅವರ ಬ್ಯಾಗನ್ನು ಕಸಿದುಕೊಂಡು ದ್ವಿಚಕ್ರವಾಹನದಲ್ಲಿ ಪರಾರಿಯಾಗಿದ್ದಾರೆ. ಬ್ಯಾಗ್ ನಲ್ಲಿ ಸುಮಾರು ಆರು ಲಕ್ಷ ಮೌಲ್ಯದ ಚಿನ್ನಾಭರಣಗಳಿದ್ದವು ಎಂದು ಸುಭಾಷ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಕಾಕತಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.