ಕರ್ನಾಟಕ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆ ವಿಭಾಗ ಮಟ್ಟದ ಲಿಪಿಕ, ವಾಹನ ಚಾಲಕ ಹಾಗೂ ಗ್ರೂಪ್ ಡಿ ನೌಕರರ ಸಂಘದ ವತಿಯಿಂದ 2022ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.
ಬೆಳಗಾವಿಯ ಸರಕಾರಿ ಬಿಎಡ್ ಕಾಲೇಜು ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲಿದ್ದ ಗಣ್ಯರು ದೀಪ ಬೆಳಗಿಸುವ ಮೂಲಕ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ 2022ನೇ ಸಾಲಿನ ಕ್ಯಾಲೆಂಡರ್ನ್ನು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಸಿ.ಟಿ.ಇ ಸಹ ನಿರ್ದೇಶಕ ಹಾಗೂ ಪ್ರಾಚಾರ್ಯರಾದ ರಾಜೀವ್ ನಾಯಕ್ ಮಾತನಾಡಿ, ಈ ಸಂಘದ ವತಿಯಿಂದ ಇಂದು ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅಲ್ಲದೇ ಈ ಸಂಘದ ವತಿಯಿಂದ ಇನ್ನು ಒಳ್ಳೊಳ್ಳೆ ಕಾರ್ಯಗಳನ್ನು ಮಾಡುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಇನ್ನು ಆರೋಗ್ಯ ಸೇರಿದಂತೆ ಇನ್ನು ಅನೇಕ ಕಾರ್ಯಗಳು ಆಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಯದರ್ಶಿಗಳಾದ ವಾಲ್ಟರ್ ಎಚ್.ಡಿ.ಮೆಲ್ಲೊ ಈ ಕ್ಯಾಳೆಂಡರ್ ನಮ್ಮ ದೈನಂದಿನ ದಿನನಿತ್ಯದ ಕಾರ್ಯಚಟುವಟಿಕೆಗಳನ್ನು ನಿರ್ಧರಿಸುವ ಮಾನದಂಡವಾಗಿದೆ. ಈ ಮೂಲಕ ವರ್ಷವಿಡೀ ನಡೆಯಬೇಕಾದ ಕಾರ್ಯ ಚಟುವಟಿಕೆಗಳನ್ನು ನಾವು ನಿರ್ಧರಿಸಬಹುದಾಗಿದೆ. ಅದರಂತೆ ಸಂಘವೂ ಕೂಡ ನೌಕರರ ಜೀವನ ಮಟ್ಟ ಸುಧಾರಿಸುವ ಬನಿಟ್ಟಿನಲ್ಲಿ ಸಂಘಟನೆ ಕಾರ್ಯ ಮಾಡುವಲ್ಲಿ ಇನ್ನಷ್ಟು ಬಲಯುತವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಡಯಟ್ ಉಪನಿರ್ದೇಶಕರಾದ ಸಿಂಧೂರ್ ಎಂ.ಎಂ, ಉಪನಿರ್ದೇಶಕರಾದ ಬಿ.ಎಂ.ನಾಲವತವಾಡ, ಬಿ.ಇಒ ಆರ್.ಪಿ.ಜುಟ್ಟಣ್ಣವರ್, ಹಾಗೂ ರವಿ ಭಜಂತ್ರಿ, ಹಿರಿಯ ಸಹಾಯಕ ನಿರ್ದೇಶಕರಾದ ಎ.ಎಸ್ ಪಾಟೀಲ್ ಮೊದಲಾದವರು ಉಪಸ್ಥಿತರಿದ್ದರು.