Uncategorized

ಇಂದು ಗಾಂಧೀಜಿ ಪುಣ್ಯಸ್ಮರಣೆ: ರಾಷ್ಟ್ರಪಿತನ ಪುತ್ಥಳಿಗೆ ಸಿಎಂ ಬೊಮ್ಮಾಯಿ ಪುಷ್ಪನಮನ

Share

ಇಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಪುಣ್ಯಸ್ಮರಣೆ ಹಿನ್ನೆಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ವಿಧಾನಸೌಧ ಹಾಗೂ ವಿಕಾಸ ಸೌಧದ ನಡುವೆ ಇರುವ ಮಹಾತ್ಮ ಗಾಂಧೀಜಿ ಪ್ರತಿಮೆಗೆ ಸಿಎಂ ಬೊಮ್ಮಾಯಿ ಪುಷ್ಪನಮನ ಸಲ್ಲಿಸಿದರು. ಇದೇ ವೇಳೆ ಗಾಂಧೀಜಿ ಪ್ರತಿಮೆಯ ಬಳಿ 2 ನಿಮಿಷ ಮೌನಾಚರಣೆ ಮಾಡಿದರು. ಈ ಸಂದರ್ಭದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವ ಆರ್.ಅಶೋಕ್, ಶಾಸಕ ರಾಜ್‍ಕುಮಾರ್ ತೇಲ್ಕೂರ್, ಎಂಎಲ್‍ಸಿ ಎನ್.ರವಿಕುಮಾರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್, ಎಸಿಎಸ್ ರಾಕೇಶ್ ಸಿಂಗ್ ಮತ್ತು ಇತರರು ಉಪಸ್ಥಿತರಿದ್ದರು.
ಇನ್ನು ಇದೇ ವೇಳೆ ಮಾತನಾಡಿದ ಸಿಎಂ ಬೊಮ್ಮಾಯಿ ಜನವರಿ 30 ಗಾಂಧೀಜಿ ಅವರ ಬಲಿದಾನ ದಿನ. ಮಹಾತ್ಮ ಗಾಂಧಿ ವಿಶ್ವದ ನಾಯಕರು. ಅಹಿಂಸೆ ಸಿದ್ದಾಂತದಲ್ಲಿ ಜೀವನ ನಡೆಸಿದರು. ನನ್ನ ಜೀವನವೇ ಒಂದು ಸಂದೇಶ ಎಂದು ಹೇಳಿದ್ರು. ನಮಗೆ ಆದರ್ಶಪ್ರಿಯರಾಗಿದ್ದಾರೆ. ಅವರ ಬದುಕು, ವಿಚಾರ ನಮಗೆ ದಾರಿ ದೀಪ. ಭಾರತದ ಗಣತಂತ್ರ ಆಧಾರಸ್ತಂಭ. ಗಾಂಧಿಯವರ ಜೊತೆ ಸುಭಾಸ್ ಚಂದ್ರ್ ಬೋಸ್, ಭಗತ್ ಸಿಂಗ್ ಅವರು ಹುತಾತ್ಮರು. ಇವರುಗಳು ಜೊತೆ ಅನೇಕ ಜನ ಹುತಾತ್ಮರಾಗಿದ್ದಾರೆ. ಅವರಿಗೆಲ್ಲ ನಾನು ನಮನ ಸಲ್ಲಿಸುತ್ತೇನೆ. ದೇಶದ ಸ್ವಾತಂತ್ರ್ಯ ಸುಲಭವಾಗಿ ಬಂದಿಲ್ಲ ಎಂದು ಅವಲೋಕನ ಮಾಡಿದ್ದೇವೆ. ಹಲವಾರು ರಂಗದಲ್ಲಿ ನಾವು ಸಾಧನೆ ಮಾಡಿದ್ದೇವೆ. 75 ವರ್ಷಗಳಲ್ಲಿ ನಾವು ಮತ್ತಷ್ಟು ಸಾಧನೆ ಮಾಡಬಹುದಿತ್ತು. ಈ ಬಗ್ಗೆ ಅವಲೋಕನ ಮಾಡಲಾಗಿದೆ. ನಮ್ಮ ಪ್ರಧಾನಿ ನರೇಂದ್ರ ಮೋದಿ ಆತ್ಮನಿರ್ಭರ ಜಾರಿ ಮಾಡಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಒಟ್ಟಿನಲ್ಲಿ ಮಹಾತ್ಮಾ ಗಾಂಧೀಜಿ ಇಂದು ಹಂತಕನ ಗುಂಡಿಗೆ ಬಲಿಯಾದ ದಿನ. ಹೀಗಾಗಿ ಇಡೀ ದೇಶಾಧ್ಯಂತ ಇಂದು ರಾಷ್ಟ್ರಪಿತನಿಗೆ ಗೌರವ ಸಲ್ಲಿಸುವ ಕೆಲಸ ಮಾಡಲಾಗುತ್ತಿದೆ.

 

Tags: