Uncategorized

ಜಾಬೇಗಾಳಿ ಗ್ರಾಮದಲ್ಲಿ ಸಿನಿಮೆಯ ರೀತಿಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿ ಗಳಿಂದ ರುಫೀಯಾತ್ ಕ್ಲಿನಿಕ್ ಮೇಲೆ ದಾಳಿ

Share

ಖಾನಾಪೂರ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಇರುವ ಜಾಬೇಗಾಳಿ ಗ್ರಾಮದಲ್ಲಿ ಸಿನಿಮೆಯ ರೀತಿಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ರುಫೀಯಾತ್ ಕ್ಲಿನಿಕ್ ಮೇಲೆ ದಾಳಿ ನಡೆಸಿದ ಘಟನೆ ನಡೆದಿದೆ.

ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿದೆ ಏನ್ನೆಂದರೆ ಜಾಬೇಗಾಳಿ ಗ್ರಾಮದಲ್ಲಿ ರುಫೀಯಾತ್ ಕ್ಲಿನಿಕ್ ಎಂಬ ಕ್ಲಿನಿಕ್ ಇದೆ ಆದರೆ ಆರೋಗ್ಯ ಇಲಾಖೆಯ ವತಿಯಿಂದ ಪರವಾನಿಗೆ ಪಡೆದು ಕೊಂಡು ಕ್ಲಿನಿಕ್ ನಡೆಸಲು ಪರವಾನಿಗೆ ಬಡೆದವರೇ ಬೇರೆ ಕ್ಲಿನಿಕ್ ನಡೆಸುತ್ತಿರುವವರೇ ಬೇರೆ ಎಂಬ ಅಂಶ ಬೆಳಕಿಗೆ ಬಂದಿದೆ. ಸುಮಾರು ರೋಗಿಗಳಿಂದ ತುಂಬಿರುವ ಈ ಕ್ಲಿನಿಕ್ ನಲ್ಲಿ ಹೊರಗಡೆಯಿಂದ ಕೀಲಿ ಕೈ ಹಾಕಿ ಒಳಗಡೆ ಬಹು ಸಂಖ್ಯೆಯಲ್ಲಿ ರೋಗಿಗಳು ಇದ್ದರು ಆರೋಗ್ಯ ಇಲಾಖೆಯ ವತಿಯಿಂದ ನಕಲಿ ವೈದ್ಯರ ಹಾವಳಿಯ ಬಗ್ಗೆ ಕಾರ್ಯಾಚರಣೆ ನಡೆಸಿದ್ದು ಇದರ ಹಿನ್ನೆಲೆಯಲ್ಲಿ ಈ ಕ್ಲಿನಿಕ್ ಹೊರಗಡೆ ಕೀಲಿ ಹಾಕಿ ಒಳಗಡೆ ರೋಗಿಗಳನ್ನು ವೈದ್ಯರೇ ಇಲ್ಲದವರು ಉಪಚರಿಸುವ ಕಾರ್ಯ ನಡೆದಿತ್ತು ಇದನ್ನು ಗಮನಿಸಿ

ಕೀಲಿ ಕೈ ತೆಗೆಯಲು ಪದೇ ಪದೇ ವಿನಂತಿ ಕೊಂಡರು ಕೂಡಾ ಯಾರೂ ಕೀಲಿ ತೆಗೆಯಲು ಮುಂದಾಗಲಿಲ್ಲ ಇದಕ್ಕಾಗಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಸಿನಿಮೆಯ ರೀತಿಯಲ್ಲಿ ಸಿಡಿಯಿಂದ ಮೇಲ್ಲಕ್ಕೆ ಹತ್ತಿ ಗ್ಯಾಲರಿ ಮೇಲೆಯಿಂದ ಕೀಲಿ ತೆಗೆಯಲು ಕೇಳಿಕೊಂಡರು ಆದರೂ ಕೂಡಾ ರೋಗಿಗಳು ಅಲ್ಲಿ, ಇಲ್ಲಿ ಮುಚ್ಚಿಕೊಳ್ಳಲು ಅಂತೂ ಇಂತೂ ಬಿಚ್ಚಿ ಕೊಂಡರು ನಂತರ ಹರಸಾಹಸ ಪಟ್ಟು ಕೀಲಿ ತೆಗೆಯಲು ಯಶಸ್ವಿಯಾದ್ರು ಅಲ್ಲಿ ನೋಡಿದರೆ ಬಹು ಸಂಖ್ಯೆಯಲ್ಲಿ ಔಷಧೀಯ ಸಂಗ್ರಹ ಮತ್ತು ಮಾನ್ಯತೆ ಪಡೆದ ವೈದ್ಯರೇ ಇಲ್ಲ ಬೇರೆಯವರು ಉಪಚರಿಸುವ ಕಾರ್ಯ ನಡೆದಿತ್ತು ಇದನ್ನು ನೋಡಿ ಆರೋಗ್ಯ ಇಲಾಖೆಯ ಅಧಿಕಾರಿಗಳು ದಿಗಪ್ರಮೇ ಗೊಂಡರು.

ಈ ನಕಲಿ ವೈದ್ಯರ ಹಾವಳಿಯ ಕಾರ್ಯಾಲಯದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾಕ್ಟರ್ ಮುನ್ಯಾಳ, ಜಿಲ್ಲಾ ಕೆಪಿಎಂಇ ನೋಡಲ್ ಅಧಿಕಾರಿ ಡಾಕ್ಟರ್ ಎಂ.ವಿ.ಕಿವಡಸನವರ್, ಜಿಲ್ಲಾ ಆಯುಷ್ ಅಧಿಕಾರಿ ಸುನದೊಳ್ಳಿ, ತಾಲೂಕಾ ಆರೋಗ್ಯಾಧಿಕಾರಿ ಡಾಕ್ಟರ್ ಸಂಜಯ್ ನಾಂದ್ರೇ ಸೇರಿದಂತೆ ಸಿಬಂದಿಗಳಾದ ಬಿರಪ್ಪ, ಶಿವಾನಂದ,ಸಚೀನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.ಇದರ ಬಗ್ಗೆ ಈಗ ಮಾನ್ಯತೆ ಪಡೆದು ಕೊಂಡು ಕ್ಲಿನಿಕ್ ನಡೆಸಲು ಪರವಾನಿಗೆ ಪಡೆದು ವೈದ್ಯರೇ ಇಲ್ಲದವರು ಕ್ಲಿನಿಕ್ ನಡೆಸುತ್ತಿರುವ ಮೇಲೆ ಕ್ರಮ ಯಾವ ರೀತಿಯಲ್ಲಿ ಜರುಗಿಸುತ್ತಾರೂ ಕಾದು ನೋಡಬೇಕು.

Tags: