ರಾಯಚೂರಿನಲ್ಲಿ ಗಣರಾಜ್ಯೋತ್ಸವ ದಿನ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರ ತೆಗೆಯುವವರೆಗೆ ನಾನು ಕಾರ್ಯಕ್ರಮಕ್ಕೆ ಬರುವದಿಲ್ಲ ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ ಘಟನೆಯನ್ನ ಖಂಡಿಸಿ ಇಂದು ಹುಕ್ಕೇರಿ ನಗರದಲ್ಲಿ ವಿವಿಧ ದಲಿತ ಪರ ಸಂಘಟನೆಗಳು ಪ್ರತಿಭಟನೆ ಜರುಗಿಸಿ ತಹಸಿಲ್ದಾರ ಮುಖಾಂತರ ಮನವಿ ಸಲ್ಲಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಮಾವಣೆಗೊಂಡ ವಿವಿಧ ದಲಿತಪರ ಸಂಘಟನೆಯ ಕಾರ್ಯಕರ್ತರು ಮೆಲಿಂದ ಮೇಲೆ ದಲಿತರ ಮೇಲೆ ದೌರ್ಜನ್ಯ ಸೇರಿದಂತೆ ವಿವಿಧ ರೀತಿಯಲ್ಲಿ ನಮ್ಮ ಒಗ್ಗಟ್ಟನ್ನು ವಡೆಯುವ ಹುನ್ನಾರಗಳು ನಡೆಯುತ್ತಿವೆ ಕಾರಣ ಎಲ್ಲಾ ಸಂಘಟನೆಗಳು ಒಗ್ಗಟ್ಟಾಗಿ ನಮ್ಮ ಹಕ್ಕುಗಳ ಮತ್ತು ಸಂವಿಧಾನ ಕಾಪಾಡುವ ಉದ್ದೇಶದಿಂದ ನಾವೆಲ್ಲರೂ ಇಂದು ಒಗ್ಗಟ್ಟಾಗಿ ಹೋರಾಟ ಮಾಡಬೇಕಾಗಿದೆ ಎಂದು ಉದಯ ಹುಕ್ಕೇರಿ ಅಭಿಪ್ರಾಯ ಪಟ್ಟರು.
ನಂತರ ಪ್ರತಿಭಟನಾ ಮೆರವಣಿಗೆ ಮೂಲಕ ಆಡಳಿತ ಭವನಕ್ಕೆ ತೇರಳಿ ತಹಸಿಲ್ದಾರ ಮುಖಾಂತರ ಮನವಿ ಸಲ್ಲಿಸಿದರು.
ಮಾದ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾ ಪರಿಶಿಷ್ಟ ಜಾತಿ ಪಂಗಡಗಳ ದೌರ್ಜನ್ಯ ಸಮಿತಿ ಸದಸ್ಯ ಸುರೇಶ ತಳವಾರ ರಾಯಚೂರಿನಲ್ಲಿ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರು ಒಬ್ಬ ನ್ಯಾಯ ಕೊಡುವಂಥ ವ್ಯಕ್ತಿಯಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ತೆಗೆಯುವವರೆಗೆ ಕಾರ್ಯಕ್ರಮಕ್ಕೆ ಬರುವದಿಲ್ಲ ಎಂದು ಹೇಳಿ ಡಾ.ಬಾಬಾಸಾಹೇಬರಿಗೆ ಅವಮಾನ ಮಾಡಿದ್ದಾರೆ ಕೂಡಲೇ ಅವರನ್ನ ಅವರ ಸ್ಥಾನದಿಂದ ವಜಾಮಾಡಬೇಕು ಅಷ್ಟೇ ಅಲ್ಲದೇ ಅವರ ಮೇಲೆ ಅಟ್ರಾಸಿಟಿ ಕೇಸ್ ಹಾಕಿ ದೇಶ ದ್ರೋಹದ ಮೇಲೆ ಗಡಿಪಾರು ಮಾಡಬೇಕು ಅವರನ್ನ ವಜಾ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಎಲ್ಲ ಸಂಘಟನೆಗಳು ಸೇರಿ ಬೃಹತ್ ಪ್ರಮಾಣ ಪ್ರತಿಭಟನೆ ಮಾಡಲಾಗುವದು ಎಂದರು .
ನಂತರ ಮಾತನಾಡಿದ ಸಂಕೇಶ್ವರ ಪುರಸಭೆ ಸದಸ್ಯ ದೀಲಿಪ ಹೋಸಮನಿ ಗಣರಾಜ್ಯೋತ್ಸವದ ದಿನ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಮಾಡುವ ನಿಯಮವನ್ನು ಸರ್ಕಾರದ ಸುತ್ತೋಲೆ ಇದ್ದರೂ ಕೂಡ ರಾಯಚೂರು ಜಿಲ್ಲಾ ನ್ಯಾಯಾದೀಶರು ಡಾ.ಬಿ.ಅರ್.ಅಂಬೇಡ್ಕರ್ ಅವರ ಭಾವಚಿತ್ರ ತೆಗೆಯುವವರೆಗೂ ನಾನು ಧ್ವಜಾರೋಹಣ ಕಾರ್ಯಕ್ರಮಕ್ಕೆ ಬರುವದಿಲ್ಲ ಎಂದು ಉದ್ದಟತನವನ್ನು ಮಾಡಿದ್ದಾರೆ ಕೂಡಲೇ ಅವರನ್ನ ವಜಾಗೊಳಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದರು ,
ಈ ಸಂದರ್ಭದಲ್ಲಿ ವಿವಿಧ ದಲಿತ ಪರ ಸಂಘಟನೆಗಳ ಮುಖಂಡರಾದ ಪ್ರಕಾಶ ಮೇಲಾಖೆ, ಮಲ್ಲಿಕಾರ್ಜುನ ರಾಶಿಂಗೆ, ಬಾಹುಸಾಹೇಬ ಪಾಂಡ್ರೆ, ಬಿ ಕೆ ಕಾಂಬಳೆ, ಕೆಂಪಣ್ಣಾ ಶಿರಹಟ್ಟಿ, ವಿಕ್ರಂ ಕರನಿಂಗ, ಆನಂದ ಕೆಳಗಡೆ, ಕಲ್ಲಪ್ಪಾ ಕಟ್ಟಿ, ಗುಡೆನ್ನವರ, ಮಾರುತಿ ತಳವಾರ, ಶಂಕರ ತಿಪ್ಪನಾಯ್ಕ, ವಿಠ್ಠಲ ಅವರಗೋಳ, ಪ್ರಮೋದ ಕೂಗೆ ಮೊದಲಾದವರು ಉಪಸ್ಥಿತರಿದ್ದರು.