Uncategorized

ಪರಿಷತ್ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಅಭ್ಯರ್ಥಿ ಪರ ಹಣ ಹಂಚುತ್ತಿದ್ದ ಇಬ್ಬರ ವಶ

Share

ಖಡೆಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಬುರುಡ್ ಗಲ್ಲಿ ಯಲ್ಲಿ ಇಂದು ಸೋಮವಾರ 4 ಗಂಟೆ 20 ನಿ ಸುಮಾರಿಗೆ ಕಾಂಗ್ರೆಸ್ ಪಕ್ಷದ ಶಿಕ್ಷಣ ಕ್ಷೇತ್ರದ ಅಭ್ಯರ್ಥಿ ಪರ ದುಡ್ಡು ಹಂಚುತ್ತಿದ್ದ ಇಬ್ಬರ ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಧಿತರು ಪರಿಷತ್ ನ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಹಣ ಹಂಚುತ್ತಿದ್ದರು ಎಂದು ತಿಳಿದುಬಂದಿದೆ. ಬಂಧಿತರನ್ನು 57 ವರ್ಷದ ಗೋಪಾಲ್ ರಾಮು ಮಗದುಮ್ , 51 ವರ್ಷದ ಶರತ್ ಬಚ್ಚಾ ರಾಮ್ ಪಾಟೀಲ್ ಎನ್ನಲಾಗಿದೆ. ಇವರಿ  60ಸಾವಿರ ರೂಪಾಯಿ ಹಣವನ್ನು ವಶಕ್ಕೆ ಪಡೆದಿದ್ದಾರೆ.

Tags: