Uncategorized

ಸಿದ್ದರಾಮಯ್ಯ ಹಾಗೂ ಸಿ.ಎಂ ಇಬ್ರಾಹಿಂ ಅವಳಿ ಜವಳಿ ಇದ್ದಂಗೆ-ಸಚಿವ ಕೆ.ಎಸ್. ಈಶ್ವರಪ್ಪ ಲೇವಡಿ

Share

ಮಾಜಿ ಸಿಎಂ ಸಿದ್ಧರಾಮಯ್ಯ ಹಾಗೂ ಸಿಎಂ ಇಬ್ರಾಹಿಂ ಅವಳಿ ಜವಳಿ ಇದ್ದಂತೆ. ಅವರಿಗೆ ಯಾವ ಪಕ್ಷದಲ್ಲಿ ಅಧಿಕಾರ ಸಿಗುತ್ತೋ ಆ ಪಕ್ಷಕ್ಕೆ ಸೇರುತ್ತಾರೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತಮನಾಡಿದ ಸಚಿವ ಕೆ.ಎಸ್. ಈಶ್ವರಪ್ಪ ಸಿದ್ದರಾಮಯ್ಯ ಹಾಗು ಸಿ.ಎಂ ಇಬ್ರಾಹಿಂ ಇಬ್ಬರೂ ಒಂದೆ. ಈಗ್ಯಾಕೆ ಸಿ.ಎಂ ಇಬ್ರಾಹಿಂ ಕಾಂಗ್ರೆಸ್ ಬಿಟ್ಟು ಜೆಡಿಎಸ್‍ಗೆ ಹೋಗುತ್ತಾರೆ… ವಿರೋಧ ಪಕ್ಷದ ನಾಯಕ ಸ್ಥಾನ ಸಿಗಲಿಲ್ಲ ಎಂದು ಕಾಂಗ್ರೆಸ್ ಬಿಟ್ಟು ಜೆಡಿಎಸ್‍ಗೆ ಹೋಗುತ್ತಿದ್ದಾರೆ. ಯಾವಾಗ ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಸ್ಥಾನ ಹಾಗೂ ವಿರೋಧ ಪಕ್ಷದ ನಾಯಕ ಸ್ಥಾನ ಸಿಗುವುದಿಲ್ಲ ಎಂದು ಗೊತ್ತಾಗುತ್ತೋ ಅಂದು ಅವರು ಕಾಂಗ್ರೆಸ್‍ನಲ್ಲಿಯೂ ಇರುವುದಿಲ್ಲ. ಸಿದ್ದರಾಮಯ್ಯ ಹಾಗೂ ಸಿ.ಎಂ ಇಬ್ರಾಹಿಂ ಇಬ್ಬರೂ ಅವಳಿ-ಜವಳಿ ಇದ್ದಂಗೆ. ಅವರಿಗೆ ಆ ಪಕ್ಷ ಈ ಪಕ್ಷ ಎಂದು ಬೇಧವಿಲ್ಲ. ಯಾವ ಪಕ್ಷದಲ್ಲಿ ಅಧಿಕಾರ ಸಿಗತ್ತೋ ಆಪಕ್ಷಕ್ಕೆ ಸೇರುತ್ತಾರೆ. ಹಾಗಾಗಿ ಸಿದ್ದರಾಮಯ್ಯ ಮತ್ತು ಸಿಎಂ ಇಬ್ರಾಹಿಂ ಯಾವ ಪಕ್ಷಕ್ಕೆ ಹೋಗುತ್ತಾರೆಂಬುದಕ್ಕೆ ಯಾವುದೇ ಮಹತ್ವ ಇಲ್ಲ. ಅವಕಾಶವಾದಿ ರಾಜಕಾರಣಕ್ಕೆ ಇನ್ನೊಂದು ಹೆಸರೇ ಸಿದ್ಧರಾಮಯ್ಯ ಹಾಗು ಸಿಎಂ ಇಬ್ರಾಹಿಂ.

Tags: