Uncategorized

ಸಿದ್ಧರಾಮಯ್ಯ, ಡಿಕೆಶಿ ಎಣ್ಣೆ ನೀರು ಇದ್ದಂತೆ: ಅವು ಎಂದೂ ಸೇರಲ್ಲ: ಗೋವಿಂದ ಕಾರಜೋಳ ಲೇವಡಿ..!

Share

ಸಿದ್ಧರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರಿಬ್ಬರು ಎಣ್ಣೆ, ನೀರು ಇದ್ದಂತೆ ಅವು ಎಂದಿಗೂ ಸೇರುವುದಿಲ್ಲ. ಅವರಲ್ಲಿಯೇ ಸಾಕಷ್ಟು ಒಡಕುಗಳಿವೆ ಜಲಸಂಪನ್ಮೂಲ ಇಲಾಖೆ ಸಚಿವ ಗೋವಿಂದ ಕಾರಜೋಳ ಲೇವಡಿ ಮಾಡಿದ್ದಾರೆ.

ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಗೋವಿಂದ ಕಾರಜೋಳ ಕಾಂಗ್ರೆಸ್ ಪಕ್ಷದಲ್ಲಿ ಮೂರು ಗುಂಪುಗಳಿವೆ. ಖರ್ಗೆ, ಪರಮೇಶ್ವರ್ ಹಾಗೂ ಶಾಮನೂರು ಶಿವಶಂಕರಪ್ಪ ಅವರದೊಂದ್ದು ಗುಂಪು ಸೇರಿ ಒಟ್ಟಾರೆ ಮೂರು ಗುಂಪು ಇದೆ ಎಂದು ಛೇಡಿಸಿದರು. ಇನ್ನು ಯೋಜನೆಗಳಿಗೆ ಹೆಸರು ಬದಲಿಸಿದ್ದೇ ಬಿಜೆಪಿಯ ಸಾಧನೆ ಎಂದ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಜನ ಹೀನಾಯವಾಗಿ ಸೋಲಿಸಿದರು. ಇದನ್ನು ಸಿದ್ದರಾಮಯ್ಯನವರು ಅರ್ಥ ಮಾಡಿಕೊಳ್ಳಬೇಕು. ಸಿದ್ದರಾಮಯ್ಯ ಕಾಲದಲ್ಲಿ ಕೊರೊನಾ, ಪ್ರವಾಹ ಇರಲಿಲ್ಲ. ಆದರೂ ಅವರು ಯಾವುದೇ ಅಭಿವೃದ್ಧಿ ಕೆಲಸ ಮಾಡಲಿಲ್ಲ. ಕೆಲಸ ಮಾಡಿಲ್ಲವೆಂದು ಜನ ಅವರನ್ನು ತಿರಸ್ಕರಿಸಿದ್ದಾರೆ ಅμÉ್ಟೀ ಎಂದು ಟಾಂಗ್ ಕೊಟ್ಟರು.

ಇನ್ನು ಕಾಂಗ್ರೆಸ್ ಪಕ್ಷ ಮುಳುಗುವ ಹಡಗು. ಅಂತಹ ಪಕ್ಷಕ್ಕೆ ಬಿಜೆಪಿ ಶಾಸಕರು ಹೋಗುವುದಿಲ್ಲ. ಇನ್ನೂ ಬಿಜೆಪಿಯಲ್ಲಿ ವಲಸೆ ಶಾಸಕರು ಎಂದು ಯಾರೂ ಇಲ್ಲ. ಬಿಜೆಪಿಗೆ ಬಂದ ಬಳಿಕ ಅವರು ಪ್ರಾಥಮಿಕ ಸದಸ್ಯತ್ವ ಪಡೆದಿರುತ್ತಾರೆ. ಸಾಯುವವರೆಗೆ ಬಿಜೆಪಿಯಲ್ಲೇ ಇರುತ್ತೇವೆ ಎಂದಿದ್ದಾರೆ ಶಾಸಕರು. ಬೆಳಗಾವಿ ಜಿಲ್ಲೆಯ ಬಿಜೆಪಿಯಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಸಮರ್ಥಿಸಿಕೊಂಡರು.

ಇನ್ನು ಟೀ ಕುಡಿಯಲು ಸೇರಿದರೂ ನೀವು ಭಿನ್ನಮತ ಸ್ಪೋಟ ಎಂದು ಹೇಳುತ್ತೀರಾ. ಭಿನ್ನಮತ ಇದೆ ಎನ್ನುವುದು ಮಾಧ್ಯಮಗಳ ಸೃಷ್ಟಿ. ಬೆಳಗಾವಿಯ ಬಿಜೆಪಿಯಲ್ಲಿ ಭಿನ್ನಾಭಿಪ್ರಾಯ ಇಲ್ಲ. ಕತ್ತಿ ಅವರ ಮನೆಯಲ್ಲಿ ರಮೇಶ್ ಜಾರಕಿಹೊಳಿ ಅವರಿಗೆ ಆಹ್ವಾನ ಇರಲಿಲ್ಲ ಅಂತ ಅಲ್ಲ ಎಂದು ಗೋವಿಂದ ಕಾರಜೋಳ ಸಮಜಾಯಿಷಿ ನೀಡಿದರು.

ಒಟ್ಟಿನಲ್ಲಿ ಮುಳಗುತ್ತಿರುವ ಹಡಗು ಕಾಂಗ್ರೆಸ್ ಪಕ್ಷಕ್ಕೆ ಯಾವೊಬ್ಬ ಬಿಜೆಪಿ ಶಾಸಕರು ಹೋಗುವುದಿಲ್ಲ ಎಂದು ಸಚಿವ ಗೋವಿಂದ ಕಾರಜೋಳ ವಿಶ್ವಾಸ ವ್ಯಕ್ತಪಡಿಸಿದರು.

Tags: