ಡಿಸೆಂಬರ್ 21_22 ರಂದು 15 ನೇ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಚಿಕ್ಕೋಡಿ ಪಟ್ಟಣದ ಸಿ ಎಲ್ ಇ ಸಂಸ್ಥೆಯ ಆವರಣದಲ್ಲಿ ಜರುಗಲಿದೆ ಎಂದು ರಾಜ್ಯ ಸಹಕಾರಿ ಮಹಾಮಂಡಳದ ಉಪಾಧ್ಯಕ್ಷ ಜಗದೀಶ ಕವಟಗಿಮಠ ಹೇಳಿದರು.
ಚಿಕ್ಕೋಡಿ ಪಟ್ಟಣದ ಸಾಯಿ ಕ್ರೆಡಿಟ್ ಸೌಹಾರ್ದ ಸಂಸ್ಥೆಯ ಸಭಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು ಗಡಿಭಾಗದಲ್ಲಿ ಕನ್ನಡ ಭಾಷೆ,ನಾಡು,ನುಡಿ ಉಳಿಸುವ ನಿಟ್ಟಿನಲ್ಲಿ ಚಿಕ್ಕೋಡಿಯಲ್ಲಿ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಂಡಿರುವುದು ಹೆಮ್ಮೆಯ ಸಂಗತಿ. ಈ ಸಾಹಿತ್ಯ ಸಮ್ಮೇಳನಕ್ಕೆ ಚಿಂಚಲಿಯ ಕನ್ನಡದ ಸ್ವಾಮಿಗಳು ಎಂದೇ ಪ್ರಸಿದ್ದಿಯನ್ನು ಪಡೆದಿರುವ ಅಲ್ಲಮಪ್ರಭು ಮಹಾಸ್ವಾಮಿಗಳು ಸಮ್ಮೇಳನಾಧ್ಯಕ್ಷರಾಗಲಿದ್ದಾರೆ. ಬುಧವಾರ ಡಿಸೆಂಬರ್ 21 ರಂದು ಮುಂಜಾನೆ 8 ಗಂಟೆಗೆ ರಾಷ್ಟ್ರಧ್ವಜಾರೋಹಣವನ್ನು ನಿವೃತ್ತ ಯೋಧರಾದ ಬಾಳಾಸಾಹೇಬ ಸಂಗ್ರೋಳಿ, ಪರಿಷತ್ತಿನ ಧ್ವಜಾರೋಹಣವನ್ನು ಕ.ಸಾ.ಪ ಜಿಲ್ಲಾಧ್ಯಕ್ಷರಾದ ಮಂಗಲಾ ಮೆಟಗುಡ್ಡ ಹಾಗೂ ನಾಡಧ್ವಜಾರೋಹಣವನ್ನು ಕ.ಸಾ.ಪ ತಾಲೂಕಾಧ್ಯಕ್ಷರಾದ ಡಾ! ಸುರೇಶ ಉಕ್ಕಲಿಯವರು ನೇರವರಿಸಲಿದ್ದಾರೆ.
ಕೋಶಾಧ್ಯಕ್ಷರಾದ ಚಂದ್ರಶೇಖರ ಅರಭಾಂವಿ ಧ್ವಜಾರೋಹಣ ಕಾರ್ಯಕ್ರಮ ನಿರೂಪಿಸಿದ್ದಾರೆ. ಮಹಾಂತೇಶ ಪೂಜಾರಿ ,ತಮ್ಮಣ್ಣಾ ಅಕ್ಕೇನ್ನವರ ಸಂಯೋಜಿಸಲಿದ್ದಾರೆ.9 ಗಂಟೆಗೆ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಹಯೋಗದೊಂದಿಗೆ ಸಮ್ಮೇಳನದ ಅಧ್ಯಕ್ಷರ ನೇತ್ರತ್ವದಲ್ಲಿ ಕನ್ನಡ ಮಾತೆ ಭುವನೇಶ್ವರಿದೇವಿಯ ಮೇರವಣಿಗೆ ನಡೆಯಲಿದ್ದು,ಈ ಮೇರವಣಿಯನ್ನು ಪುರಸಭೆಯ ಅಧ್ಯಕ್ಷರಾದ ಪ್ರವೀಣ ಕಾಂಬಳೆ ಹಾಗೂ ಉಪಾಧ್ಯಕ್ಷರಾದ ಸಂಜಯ ಕವಟಗಿಮಠ ಉದ್ಘಾಟನೆ ನೇರವರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನವದೆಹಲಿಯ ಅಲ್ಪಸಂಖ್ಯಾತ ಆಯೋಗದ ಸದಸ್ಯರಾದ ಧನ್ಯಕುಮಾರ ಗುಂಡೆ,ಉಪವಿಭಾಗಧಿಕಾರಿ ಮಾಧವ್ ಗಿಟ್ಟೆ ಸೇರಿದಂತೆ ಅತಿಥಿಗಳಾಗಿ ತಹಶಿಲ್ದಾರರ ಚಿದಂಬರ ಕುಲಕರ್ಣಿ ಸೇರಿದಂತೆ ತಾಲೂಕಾಡಳಿತ ಅಧಿಕಾರಿಗಳು ಈ ಮೆರವಣಿಗೆಯಲ್ಲಿ ಭಾಗಿಯಾಗಲಿದ್ದಾರೆ. 11 ಗಂಟೆಗೆ ಸಮ್ಮೇಳನದ ಉದ್ಘಾಟನೆ ಕಾರ್ಯಕ್ರಮವು ನಿಡಸೊಸಿ ಪಂಚಮಶಿವಲಿಂಗೇಶ್ವರ ಮಹಾಸ್ವಾಮೀಜಿ ಹಾಗೂ ಚಿಕ್ಕೋಡಿಯ ಸಂಪದನಾ ಮಹಾಸ್ವಾಮೀಜಿಯವರ ದಿವ್ಯಸಾನಿಧ್ಯದಲ್ಲಿ ನಡೆಯಲಿದೆ.
ಸಮ್ಮೇಳನಾಧ್ಯಕ್ಷರಾದ ಚಿಂಚಲಿ ಅಲ್ಲಪ್ರಭು ಮಹಾಸ್ವಾಮೀಜಿ,ನಿಕಟಪೂರ್ವ ಸಮ್ಮೇಳನಾಧ್ಯಕ್ಷರಾದ ಡಾ!ಪ್ರಭಾಕರ ಕೋರೆ,ಕ.ಸಾ.ಪ ರಾಜ್ಯಾಧ್ಯಕ್ಷರಾದ ನಾಡೋಜ ಡಾ!ಮಹೇಶ ಜೋಶಿ ಕಾರ್ಯಕ್ರಮವನ್ನು ಉದ್ಘಾಟಸಲಿದ್ದಾರೆ.ಕ.ಸಾ.ಪ ಜಿಲ್ಲಾಧ್ಯಕ್ಷರಾದ ಮಂಗಲಾ ಅಂಗಡಿ ಆಶಯ ಮಾತುಗಳನ್ನು ಆಡಲಿದ್ದಾರೆ.ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.ಸಚಿವೆ ಶಶಿಕಲಾ ಜೊಲ್ಲೆ,ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ,ಅನಂತಕುಮಾರ ಹೆಗಡೆ,ಚಂದ್ರಶೇಖರ ಅಕ್ಕಿ,ಮಹಾಂತೇಶ ಕವಟಗಿಮಠ,ಶಾಸಕ ಗಣೇಶ ಸೇರಿದಂತೆ ಇನ್ನಿತರರು ಜಿಲ್ಲೆ ಜನಪ್ರನಿಧಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಮಧ್ಯಾಹ್ನ 2 ಗಂಟೆಗೆ ಕನ್ನಡ ಚಿಂತನೆ ಸಾಯಂಕಾಲ 4 ಗಂಟೆಗೆ ಕೃಷಿ ಚಿಂತನೆಯ ಕುರಿತು ಗೋಷ್ಠಿಗಳು ನಡೆಯಲಿದೆ ಹಾಗೂ ಸಾಯಂಕಾಲ 6 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.ಗುರುವಾರ ಡಿಸೆಂಬರ್ 22 ರಂದು ಮುಂಜಾನೆ 9 ಗಂಟೆಗೆ ಸಾಹಿತಿ ಎಮ್.ಬಿ.ಹೂಗಾರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ಹಾಗೂ ಮಧ್ಯಾಹ್ನ 12 ಗಂಟೆಗೆ ಡಾ!ಗಂಗಾಂಬಿಕಾ ಚೌಗಲಾ ಅಧ್ಯಕ್ಷತೆಯಲ್ಲಿ ಮಹಿಳಾಗೋಷ್ಠಿ,ಮಧ್ಯಾಹ್ನ 2 ಗಂಟೆಗೆ ಸಾಹಿತಿ ಶಿರೀಪ ಜೋಶಿಯವರ ನೇತೃತ್ವದಲ್ಲಿ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ,ಸಾಯಂಕಾಲ 4 ಗಂಟೆಗೆ ಸಾಧಕರ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಹಾಗೂ ಸಾಯಂಕಾಲ 5 ಗಂಟೆಗೆ ಚರಮೂರ್ತಿ ಮಠದ ಸಂಪದನಾ ಸ್ವಾಮೀಜಿಯವರ ಸನ್ನಿಧಾನದಲ್ಲಿ ಸಮಾರೋಪ ಕಾರ್ಯಕ್ರಮ ನಡೆಯಲಿದೆ ಎಂದು ಜಗದೀಶ ಕವಟಗಿಮಠ ಹೇಳಿದರು.
ನಂತರ ಸಂಪದನಾ ಸ್ವಾಮೀಜಿಯವರು ಮಾತನಾಡಿ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ತನು,ಮನ,ಧನದಿಂದ ಎಲ್ಲರೂ ಸಹಾಯ ಮಾಡಿ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಕೈಜೋಡಿಸಿ,ನಾವು ಗಡಿಭಾಗದಲ್ಲಿ ಇರುವುದರಿಂದ ಈ ಸಾಹಿತ್ಯ ಸಮ್ಮೇಳನವು ಅತ್ಯಂತ ಅವಶ್ಯಕವಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪುರಸಭೆ ಅಧ್ಯಕ್ಷ ಪ್ರವೀಣ ಕಾಂಬಳೆ,ಉಪಾಧ್ಯಕ್ಷ ಸಂಜಯ ಕವಟಗಿಮಠ, ಸಿ.ಎಸ್.ವಂಟಮುತ್ತೆ,ಸುಭಾಷ್ ಕೌಲಾಪೂರೆ ಸೇರಿದಂತೆ ಪುರಸಭೆ ಸದಸ್ಯರು,ಕನ್ನಡಪರ ಸಂಘಟನೆಯ ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.