ಬೆಳಗಾವಿಯ ನರಗುಂದಕರ್ ಭಾವೆ ವೃತ್ತದಲ್ಲಿರುವ ಭಗವಾನ್ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಸಂತ ಜಲರಾಮ್ ಪ್ರತಿಷ್ಠಾನದ ವತಿಯಿಂದ ಇಂದು ಬೆಳಗ್ಗೆ ಸಂತ ಜಲರಾಮಪ್ಪನವರ 224ನೇ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಆರಂಭದಲ್ಲಿ ಜಲರಾಮ್ ಅವರ ಪೂಜೆಯನ್ನ ಮಾಡಲಾಯಿತು ಬಳಿಕ ಜಲರಾಮ್ ಅವರ ಆರತಿ ಕಾರ್ಯಕ್ರಮ ನಡೆಯಿತು. ಸಂತ ಶ್ರೀ ಜಲರಾಮ್ ಪ್ರತಿಷ್ಠಾನದ ಕಾರ್ಯಕರ್ತರು ಭಾಗವಹಿಸಿದ್ದರು ಆರತಿಯ ನಂತರ ಪ್ರಸಾದಕ್ಕೆ ಬೂಂದಿ ಮತ್ತು ಶುದ್ಧ ತುಪ್ಪದ ಉಂಡೆಗಳನ್ನು ವಿತರಿಸಲಾಯಿತು. ಗುಜರಾತಿನ ರಾಜ್‌ಕೋಟ್ ಬಳಿಯ ವೀರಪುರ ಗ್ರಾಮದಲ್ಲಿ ಸಂತ ಶ್ರೀ ಜಲರಾಮ್ ಬಪ್ಪನ ದೇವಸ್ಥಾನವಿದೆ. ಇದು ಎಲ್ಲಾ ಜಾತಿ ಮತ್ತು ಪಂಗಡಗಳ ಜನರ ಆರಾಧನೆಯ ಸ್ಥಳವಾಗಿದೆ. ಅಲ್ಲಿ ಪೂಜ್ಯ ಜಲರಾಮ್ ಬಪ್ಪಾ ಅವರ ಪತ್ನಿ ಪೂಜ್ಯ ವೀರಬಾಯಿ ಮಾ ಅವರು ಪ್ರಸಾದ ಭವನವನ್ನು ಪ್ರಾರಂಭಿಸಿದರು. ಪ್ರಸಾದ ಭವನವನ್ನ ಇಂದಿಗೆ 203 ವರ್ಷಗಳನ್ನು ಪೂರೈಸುತ್ತಿದೆ. ಈ ದೇವಸ್ಥಾನ ಮತ್ತು ಪ್ರಸಾದ ಭವನವಕ್ಕೆ ಯಾವುದೇ ರೀತಿಯ ದೇಣಿಗೆ ತೆಗೆದುಕೊಳ್ಳದೆ ಇರುವುದು ವಿಶೇಷವಾಗಿದೆ
ಸಂತ ಶ್ರೀ ಜಲರಾಮ್ ಫೌಂಡೇಶನ್‌ನ ಅಘ್ಯಕ್ಷ ಕಾನುಭಾಯಿ ಠಕ್ಕರ್, ಕೋಕಿಲಾಬೆನ್ ಠಕ್ಕರ್ ಅಂದರೆ ಪೂಜ್ಯ ಜಲರಾಮ್ ಬಪ್ಪಾ ಆರತಿ ಮಾಡಿದರು. ಈ ಸಂದರ್ಭದಲ್ಲಿ ಬಿಪಿನ್ ಭಾಯಿ ಸೋಮಯ್ಯ, ಅಮಿತ್ ಭಾಯ್ ಠಕ್ಕರ್, ಸಾಗರ್ ಠಕ್ಕರ್, ಸಂಜಯ್ ದೇವಾನಿ, ಮಿಲಿಂದ್ ಠಕ್ಕರ್, ರಾಜೇಶ್ ಭಾಟಿಯಾ, ದೀಪೇನ್ ಠಕ್ಕರ್, ಅವಧೂತ್ ಮಹಾರಾಜ್, ಪ್ರಕಾಶ್ ಕುಲಕರ್ಣಿ ಮೊದಲಾದವರು ಜಲರಾಮ್ ಜಯಂತಿ ಆಚರಣೆಯಲ್ಲಿ ಭಾಗವಹಿಸಿದ್ದರು.