Uncategorized

ಸಾಹಿತ್ಯ ರತ್ನ ಅಣ್ಣಾರಾಯರ 48ನೇ ಪುಣ್ಯ ಸ್ಮರಣೆ

Share

ಕನ್ನಡ ಸಾಹಿತ್ಯ ರತ್ನ ಮಿರ್ಜಿ ಅಣ್ಣಾರಾಯ ಇವರು ರಚಿಸಿದ 67 ಕೃತಿಗಳ ಪೈಕಿ 3 ಕೃತಿಗಳು ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಪಠ್ಯದಲ್ಲಿ ಅಧ್ಯಯನೆಗಾಗಿ ಜಾರಿಗೊಳಿಸಲಾಗಿದೆ. ಇವರು ಗಡಿಭಾಗದಲ್ಲಿ ಕನ್ನಡ ಉಳಿಸಿ ಬೆಳೆಸಿದ ಕರ್ನಾಟಕ ರಾಜ್ಯದ ಸಾಹಿತ್ಯ ರತ್ನರು ಎಂದು ಹುಲಕೋಟಿಯ ಕೆ.ಎಚ್.ಪಾಟೀಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ಅಪ್ಪಣ್ಣ.ಎನ್.ಹಂಜೆ ಇವರು ಹೇಳಿದರು.
ಅಪ್ಪಾಸಾಹೇಬ್ ಪಾಟೀಲ್ ಸಭಾಭವನದಲ್ಲಿ ಸಾಹಿತ್ಯ ರತ್ನ ಅಣ್ಣಾರಾಯ ಮಿರ್ಜಿ ಇವರ 48ನೇ ಪುಣ್ಯ ಸ್ಮರಣೆ ಕಾರ್ಯಕ್ರಮ ಜರಗಿತು. ಸಮಾರಂಭದ ಉಪನ್ಯಾಸಕರಾಗಿ ಡಾಕ್ಟರ್ ಅಪ್ಪಣ್ಣ ಹಂಜೆ ಉಪನ್ಯಾಸ್ ನೀಡಿದರು.

ಜ್ಞಾನಪೀಠ ಪ್ರಶಸ್ತಿ ಪಡೆದ ಸಾಹಿತಿಗಳು ಸಮನವಾಗಿರುವ ಮುಲ್ಕಿ ವರೆಗೆ ಓದಿರುವ ಕನ್ನಡ ಶಾಲೆಯ ಶಿಕ್ಷಕರಾದ ಸಾಹಿತ್ಯ ರತ್ನ ಮಿರ್ಜಿ ಅಣ್ಣಾರಾಯ ಇವರು ಸಾಹಿತ್ಯ ಕ್ಷೇತ್ರದಲ್ಲಿ ಮಾಡಿರುವ ಅಪಾರ ಸಾಧನೆ ಮತ್ತು ಅವರು ರಚಿಸಿದ 67 ಕೃತಿಗಳ ಪೈಕಿ ಅಶೋಕ ಚಕ್ರ, ಸಿದ್ದಚಕ್ರ, ನಿಸರ್ಗ ಈ 3 ಕಾದಂಬರಿಗಳು ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳಲ್ಲಿ ಜಾರಿ ಮಾಡಿದ್ದಾರೆ. ಇಂತಹ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಹಿತ್ಯ ರತ್ನ ಅವರ ಬಗ್ಗೆ ರಾಜ್ಯ ಸರ್ಕಾರ ಯಾವುದೇ ಕಾಳಜಿ ವಹಿಸಿಲ್ಲಾ, ಎಂದು ಡಾಕ್ಟರ್ ಅಪ್ಪಣ್ಣ ಹಂಜೆ ಹೇಳಿದರು.

ತಾಳಿಕೊಟೆ ತಾಲೂಕಿನ ಎಸ್.ಕೆ.ಜೂನಿಯರ್ ಕಾಲೇಜಿನ ಸಹ ಶಿಕ್ಷಕರಾದ ಅನಿಲ್ಕುರಮಾರ್ ಮಾತನಾಡಿ, ರಾಜ್ಯದ ಗಡಿಭಾಗದಲ್ಲಿರುವ ಶೇಡಬಾಳ ಪಟ್ಟಣದಲ್ಲಿ ಬಡ ರೈತ ಕುಟುಂಬದಲ್ಲಿ ಜನಿಸಿರುವ ಮಿರ್ಜಿ ಅಣ್ಣಾರಾಯ ಬಹಳಷ್ಟ ಕಷ್ಟಪಟ್ಟು 67 ಸಾಹಿತ್ಯ ಕೃತಿಗಳು, ಕಾದಂಬರಿಗಳು ರಚಿಸಿದ್ದಾರೆ.ಎಂದರು.

ಅಶೋಕ್ ಪಾಟೀಲ್ ಮಾತನಾಡಿ, ಅಣ್ಣಾರಾಯ ಮಿರ್ಜಿ ಇವರು ನಮ್ಮ ಶೇಡಬಾಳದ ರತ್ನ. ಇವರು ಮಾಡಿರುವ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಇಡೀ ವಿಶ್ವದಲ್ಲಿ ಖ್ಯಾತಿ ಪಡೆದಿದೆ. ನಮಗೆ ಯಾರು ಸಹಕಾರ ನೀಡದೆ ಹೋದರು, ನಿರಂತರವಾಗಿ ಅವರ ಕಾರ್ಯ ಸಮಾಜದಲ್ಲಿ ಪಸರಿಸುವ ಕಾರ್ಯಕ್ರಮ ಮಾಡುತ್ತೇವೆ ಎಂದು ಹೇಳಿದರು.

ಶ್ರೀ ಕೃಷ್ಣ ಶಿಕ್ಷಣ ಅಭಿವೃದ್ಧಿ ಸಮಿತಿ ವತಿಯಿಂದ, ಮಿರ್ಜಿ ಅಣ್ಣಾರಾಯರ ಬಗ್ಗೆ ಲೇಖನ ಸ್ಪರ್ಧೆಗಳು ಏರ್ಪಡಿಸಿದರು. ಇದರಲ್ಲಿಯ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಿದರು.

Tags: