Uncategorized

ಶಾರ್ಟ್ ಸರ್ಕ್ಯೂಟ್ ನಿಂದಾಗಿ 7_8 ಮನೆಗಳಿಗೆ ಬೆಂಕಿ,ಅಂಕಲಿ ಗ್ರಾಮದಲ್ಲಿ ದುರಂತ

Share

ಚಿಕ್ಕೋಡಿ: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬಿದರಿನ ಅಂಗಡಿಗೆ ಬೆಂಕಿ ತಗುಲಿದ ಪರಿಣಾಮ ಅಂಗಡಿಯ ಪಕ್ಕದಲ್ಲಿರುವ 7-8 ಮನೆಗಳು ಸುಟ್ಟುಕರಕಲಾದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ನಡೆದಿದೆ.

ನಿನ್ನೆ ರಾತ್ರಿ 12 ಗಂಟೆಗೆಯ ಸುಮಾರಿಗೆ ಈ ಘಟನೆ ನಡೆದಿದೆ.ಅರುಣ ಮೇದಾರ ಸೇರಿದ ಬಿದರಿನ ಅಂಗಡಿಗೆ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ತಗುಲ ಅಂಗಡಿಯು ಧಗಧಗನೇ ಹೊತ್ತಿ ಉರಿದು ಅಂಗಡಿಯು ಸುಟ್ಟು ಕರಕಲಾಗಿದೆ.ಪರಿಣಾಮ ಅಕ್ಕಪಕ್ಕದ ಸುಮಾರು 7_8 ಮನೆಗಳಿಗೆ ಬೆಂಕಿ ತಗುಲಿದೆ‌.ಇದರಿಂದಾಗಿ ಲಕ್ಷಾಂತರ ರೂಪಾಯಿ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.ಸದಲಗಾ ಅಗ್ನಿಶಾಮಕದಳದಿಂದ ಬೆಂಕಿ ನಂದಿಸುವ ಕಾರ್ಯ ನಡೆಯಿತು.ಆದ್ರೂ ಕೂಡಾ ಅಂಗಡಿಯು ಸಂಪೂರ್ಣವಾಗಿ ಸುಟ್ಟಕರಲಾಯಿತು.ಘಟನಾ ಸ್ಥಳಕ್ಕೆ ಡಿವೈಎಸ್ಪಿ ಗೋಪಾಲಕೃಷ್ಣ ಗೌಡರ,ಸಿಪಿಐಗಳಾದ ವಿಶ್ವನಾಥ ಚೌಗಲಾ,ಬಿ.ಎಸ್.ತಳವಾರ,ಪಿಎಸ್ಐ ಕೆ.ಬಿ.ಜಕ್ಕನವರ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಅಂಕಲಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ

Tags: