ಕೊವಿಡ್ನಿಂದಾಗಿ ಅನೇಕ ಜೀವಗಳು ಬಲಿಯಾದವು. ಅಂತಹ ಸಂದರ್ಭಗಳಲ್ಲಿಯೂ ನಮ್ಮ ಕೇಂದ್ರ, ರಾಜ್ಯಗಳು, ವೈದ್ಯರು, ದಾದಿಯರು, ವಿಜ್ಞಾನಿಗಳು, ನಮ್ಮ ಆರೋಗ್ಯ ಕಾರ್ಯಕರ್ತರು ತಂಡವಾಗಿ ಕೆಲಸ ಮಾಡಿದರು. ನಮ್ಮ ಆರೋಗ್ಯ ರಕ್ಷಣೆ ಮತ್ತು ಮುಂಚೂಣಿಯ ಕಾರ್ಯಕರ್ತರಿಗೆ ನಾನು ಕೃತಜ್ಞನಾಗಿದ್ದೇನೆ.
ಸಂಸತ್ತನಲ್ಲಿ ಇಂದಿನಿಂದ ಬಜೆಟ್ ಅಧಿವೇಶನ ಆರಂಭವಾದ ಹಿನ್ನೆಲೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದರು. ಸರ್ಕಾರವು ನಾಗರಿಕರ ಸಬಲೀಕರಣಕ್ಕೆ ಜನ್ ಧನ್-ಆಧಾರ್-ಮೊಬೈಲ್,ಜೆಎಎಂ ಟ್ರಿನಿಟಿಯನ್ನು ಲಿಂಕ್ ಮಾಡಿದ ವಿಧಾನದ ಪರಿಣಾಮವನ್ನು ನಾವು ನೋಡಬಹುದು. ಸಾಂಕ್ರಾಮಿಕ ಸಮಯದಲ್ಲಿ 44 ಕೋಟಿ ಬಡ ನಾಗರಿಕರನ್ನು ಬ್ಯಾಂಕಿಂಗ್ ವ್ಯವಸ್ಥೆಗೆ ಲಿಂಕ್ ಮಾಡುವ ಮೂಲಕ ಕೋಟಿಗಟ್ಟಲೆ ಫಲಾನುಭವಿಗಳು ನೇರ ನಗದು ವರ್ಗಾವಣೆಯ ಪ್ರಯೋಜನಗಳನ್ನು ಪಡೆದರು. ಬೀದಿಬದಿ ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ಪ್ರಧಾನಮಂತ್ರಿ ಸ್ವಾನಿಧಿ ಯೋಜನೆಯನ್ನೂ ನನ್ನ ಸರ್ಕಾರ ನಡೆಸುತ್ತಿದೆ. ಇಲ್ಲಿಯವರೆಗೆ 28 ಲಕ್ಷ ಬೀದಿಬದಿ ವ್ಯಾಪಾರಿಗಳು 2900 ಕೋಟಿ ರೂ.ಗಳ ವಿತ್ತೀಯ ಬೆಂಬಲವನ್ನು ಪಡೆದಿದ್ದಾರೆ. ಸರ್ಕಾರ ಈಗ ಈ ಮಾರಾಟಗಾರರನ್ನು ಆನ್ಲೈನ್ ಕಂಪನಿಗಳೊಂದಿಗೆ ಸಂಪರ್ಕಿಸುತ್ತಿದೆ ಎಂದರು.
ತಮ್ಮ ಕರ್ತವ್ಯಗಳಿಗೆ ಆದ್ಯತೆ ನೀಡಿ ಭಾರತದ ಹಕ್ಕುಗಳನ್ನು ಪಡೆಯಲು ಸಹಾಯ ಮಾಡಿದ ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರಿಗೆ ನಾನು ತಲೆಬಾಗುತ್ತೇನೆ. ಸ್ವಾತಂತ್ರ್ಯದ 75 ವರ್ಷಗಳಲ್ಲಿ ಭಾರತದ ಅಭಿವೃದ್ಧಿ ಪಯಣಕ್ಕೆ ಕೊಡುಗೆ ನೀಡಿದ ವ್ಯಕ್ತಿಗಳನ್ನು ನಾನು ಗೌರವದಿಂದ ಸ್ಮರಿಸುತ್ತೇನೆ. ಈ ವರ್ಷದಿಂದ ಸರ್ಕಾರವು ನೇತಾಜಿ ಅವರ ಜನ್ಮದಿನವಾದ ಜನವರಿ 23ರಿಂದ ಗಣರಾಜ್ಯೋತ್ಸವವನ್ನು ಪ್ರಾರಂಭಿಸಿದೆ. ದೇಶದ ಸುರಕ್ಷಿತ ಭವಿಷ್ಯಕ್ಕಾಗಿ ಹಿಂದಿನದನ್ನು ನೆನಪಿಟ್ಟುಕೊಳ್ಳುವುದು ಮತ್ತು ಅದರಿಂದ ಕಲಿಯುವುದು ಬಹಳ ಮುಖ್ಯ ಎಂದು ನನ್ನ ಸರ್ಕಾರ ನಂಬುತ್ತದೆ ಎಂದಿದ್ದಾರೆ ರಾಷ್ಟ್ರಪತಿ. ಕೊವಿಡ್-19 ಸಾಂಕ್ರಾಮಿಕ ರೋಗಕ್ಕೆ ಮೋದಿ ಸರ್ಕಾರದ ಪ್ರತಿಕ್ರಿಯೆಯನ್ನು ರಾಷ್ಟ್ರಪತಿಯವರು ತಮ್ಮ ಭಾಷಣದಲ್ಲಿ ಶ್ಲಾಘಿಸಿದರು. ಲಸಿಕೆಗಳು ವೈರಸ್ನಿಂದ ಕೋಟ್ಯಂತರ ಜೀವಗಳನ್ನು ಉಳಿಸಿವೆ ಎಂದು ಅವರು ಹೇಳಿದರು. ಆಯುμÁ್ಮನ್ ಭಾರತ್– ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಬಡವರಿಗೆ ಆರೋಗ್ಯ ಸೇವೆಯನ್ನು ತ್ವರಿತವಾಗಿ ಪಡೆಯಲು ಸಹಾಯ ಮಾಡಿದೆ ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಅವರ ಆದರ್ಶ ಸಮಾಜವು ಸ್ವಾತಂತ್ರ್ಯ, ಸಮಾನತೆ ಮತ್ತು ಸೌಹಾರ್ದತೆಯನ್ನು ಆಧರಿಸಿದ ಸಮಾಜವಾಗಿದೆ. ಪ್ರಜಾಪ್ರಭುತ್ವವು ಕೇವಲ ಸರ್ಕಾರದ ಒಂದು ರೂಪವಲ್ಲ, ಪ್ರಜಾಪ್ರಭುತ್ವದ ಮೂಲವು ಜನರನ್ನು ಗೌರವಿಸುವ ಭಾವನೆಯಾಗಿದೆ. ನನ್ನ ಸರ್ಕಾರ ಬಾಬಾಸಾಹೇಬರ ಆದರ್ಶಗಳನ್ನು ತನ್ನ ಮಾರ್ಗದರ್ಶಿ ತತ್ವವೆಂದು ಪರಿಗಣಿಸುತ್ತದೆ. ಕೊವಿಡ್-19 ವಿರುದ್ಧದ ಹೋರಾಟದಲ್ಲಿ ಭಾರತದ ಸಾಮಥ್ರ್ಯವು ಲಸಿಕೆ ಕಾರ್ಯಕ್ರಮದಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ. ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ, ನಾವು 150 ಕೋಟಿ ಡೋಸ್ಗಳ ಲಸಿಕೆಯನ್ನು ನೀಡಿದ ದಾಖಲೆಯನ್ನು ಮಾಡಿದ್ದೇವೆ. ಇಂದು, ಗರಿಷ್ಠ ಸಂಖ್ಯೆಯ ಡೋಸ್ಗಳನ್ನು ನೀಡುವ ವಿಷಯದಲ್ಲಿ ನಾವು ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿದ್ದೇವೆ ಎಂದು ರಾಷ್ಟ್ರಪತಿಗಳು ವಿಶ್ವಾಸ ವ್ಯಕ್ತಪಡಿಸಿದರು.