ರಾಜ್ಯ ಸಚಿವರ ವಿರುದ್ಧ ರೇಣುಕಾಚಾರ್ಯರ ದೂರು ವಿಚಾರಕ್ಕೆ ಸಂಬಂಧಿಸಿದಂತೆ ವಿಜಯಪುರದಲ್ಲಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರತಿಕ್ರಿಯಿಸಿದ್ದು ರೇಣುಕಾಚಾರ್ಯರ ಹೈಕಮಾಂಡ್ ಗೆ ದೂರು ಕೊಟ್ಟರೇ ಅದು ಅವರ ವಯಕ್ತಿಕ, ನನಗು ಅದಕ್ಕು ಸಂಬಂಧ ಇಲ್ಲ ಎಂದರು.
ನಾನು ಯಾವ ಸಚಿವರ ವಿರುದ್ಧವು ದೂರು ಕೊಡಲ್ಲ ಎಂದು ಹೇಳಿದರು. ನನ್ನ ಜೊತೆಗೆ ಎಲ್ಲ ಸಚಿವರು ಚೆನ್ನಾಗಿದ್ದಾರೆ. ಸಚಿವರು ಸಹಕಾರ ನೀಡಿದ್ದಾರೆ, ಅವರ ಬಳಿ ಹೋದಾಗ ಗೌರವ ಕೊಟ್ಟಿದ್ದಾರೆ. ನಾ ಹೇಳಿದಾಗ ಆದಷ್ಟು ಒಳ್ಳೆಯ ಕೆಲಸ ಮಾಡಿದ್ದಾರೆ. ಯಾವ ಸಚಿವರ ಬಗ್ಗೆಯೂ ನನ್ನ ಆರೋಪ, ದೂರು ಇಲ್ಲ ಎಂದರು. ಸಭೆಯಲ್ಲಿ ಸಚಿವರಿಗೆ ಸಲಹೆ ಕೊಡುವ ಅಧಿಕಾರ ಶಾಸಕರಿಗಿದೆ.
125 ಕೋಟಿ ಅನುದಾನ ವಾಪಾಸ್ ಪಡೆದಾಗ ನಾನೇ ಯಡಿಯೂರಪ್ಪ ನವರ ವಿರುದ್ಧ ಮಾತನಾಡಿದ್ದೆ, ಅಭಿವೃದ್ಧಿ ವಿಚಾರದಲ್ಲಿ ಮಾತನಾಡೋದು ಅದು ಬೇರೆ, ಅಭಿವೃದ್ಧಿ ಕೆಲಸಗಳಿಗೆ ನ್ಯಾಯ ಸಿಗದೇ ಇದ್ದಾಗ ಹೋರಾಟ ಮಾಡ್ತೇವೆ ಎಂದರಲ್ಲದೇ ಈಗ ಯಾವ ಸಚಿವರ ಬಗ್ಗೆಯೂ ನನ್ನ ಆರೋಪವಿಲ್ಲ, ಸಚಿವ ಸಂಪುಟ ಆದಷ್ಟು ಬೇಗನೆ ಪುನರಚನೆ ಆಗುತ್ತೆ ಅನ್ನೋ ವಿಶ್ವಾಸವಿದೆ ಎಂದರು.