ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಬೆಳಗಾವಿ ಪಾಲಿಕೆಯ ಮೇಯರ್ ಸ್ಥಾನವನ್ನು ನಮ್ಮ ಸಮುದಾಯಕ್ಕೆ ನೀಡಬೇಕೆಂದು ಕೂಡಲ ಸಂಗಮ ಪೀಠದ ಜಯ ಮೃತ್ಯುಂಜಯ ಸ್ವಾಮಿಜಿ ಆಗ್ರಹಿಸಿದ್ದಾರೆ.
ಬೆಳಗಾವಿಯಲ್ಲಿ ಕಿತ್ತೂರು ಚೆನ್ನಮ್ಮಾ ಜ್ಯೋತಿ ಯಾತ್ರೆಗೆ ಚಾಲನೆ ನೀಡುವ ಉದ್ದೇಶದಿಂದ ಜಯಮೃತ್ಯುಂಜಯ ಸ್ವಾಮಿಜಿ ಬೆಳಗಾವಿಗೆ ಆಗಮಿಸಿದ್ದರು. ಈ ವೇಳೆ ಚೆನ್ನಮ್ಮಾ ವೃತ್ತದಲ್ಲಿರುವ ಚೆನ್ನಮ್ಮಾ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಚೆನ್ನಮ್ಮ ಲಿಂಗೈಕ್ಯ ಜ್ಯೋತಿ ಯಾತ್ರೆಗೆ ಚಾಲನೆ ನೀಡಿದರು.
ಈ ವೇಳೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಜಯಮೃತ್ಯುಂಜಯ ಸ್ವಾಮೀಜಿ, ಬೆಳಗಾವಿ ಮಹಾನಗರ ಪಾಲಿಕೆಗೆ ಮೇಯರ್ ಸ್ಥಾನ ಸಮಾನ್ಯ ಮಹಿಳೆಗೆ ಮೀಸಲು ನೀಡಲಾಗಿದೆ. ಇನ್ನು ಮೇಯರ್ ಹುದ್ದೆಯನ್ನು ನಮ್ಮ ಸಮಾಜಕ್ಕೆ ಕಲ್ಪಿಸಬೇಕು ಎನ್ನುವುದು ನಮ್ಮ ಬಯಕೆ. ಸಮಾಜಿಕ ನ್ಯಾಯದ ದೃಷ್ಟಿಯಿಂದ ಸರಕಾರ ನಮಗೆ ಅವಕಾಶ ಕೊಡಬೇಕು ಎಂದು ಮಾಧ್ಯಮದ ಮೂಲಕ ಸಂಬಂದ ಪಟ್ಟ ಪಕ್ಷದ ಮುಖಂಡರಿಗೆ ಮನವಿ ಮಾಡಿದರು.
ಪಂಚಮಸಾಲಿ ಸಮೂದಾಯಕ್ಕೆ 2ಎ ಮೀಸಲಾತಿ ಹೋರಾಟ ಕುರಿತಂತೆ ಮಾತನಾಡಿದ ಅವರು, ನಮ್ಮ ಸಮಾಜಕ್ಕೆ ಮೀಸಲಾತಿ ನೀಡುವ ಕುರಿತಂತೆ ವಿಳಂಬವಾಗಿದೆ. ಬೆಳಗಾವಿಯಲ್ಲಿ ನಾಳೆ ರಾಜ್ಯ ಕಾರ್ಯಕಾರಿಣಿ ಸಭೆ ಇದೆ. ಒಂದು ವರ್ಷದಿಂದ ಮೀಸಲಾತಿಗಾಗಿ ನಿರಂತರ ಹೋರಾಟ ಮಾಡಿತ್ತ ಬಂದಿದ್ದೇವೆ. ಮುಂದಿನ ಹೋರಾಟದ ಬಗ್ಗೆ ನಾಳೆ ಸ್ಪಷ್ಟ ನಿರ್ಧಾರ ಪ್ರಕಟಿಸಲಾಗುತ್ತದೆ. ಇನ್ನು ಮೀಸಲಾತಿ ವಿಚಾರದಲ್ಲಿ ಸರ್ಕಾರಕ್ಕೆ ಅನೇಕ ಸಲ ಗಡುವು ನೀಡಿದ್ದೇವೆ.ಅದಕ್ಕೆ ಪೂರಕವಾಗಿ ಸರ್ಕಾರ ವರ್ತನೆ ಮಾಡಿದ್ದಾರೆ. ಬೆಳಗಾವಿ, ದಾವಣಗೆರೆ ಗಳಲ್ಲಿ ಸರ್ವೆ ಕಾರ್ಯ ನಡೆಯುತ್ತಿದೆ. ಆಯೋಗದ ಅಧ್ಯಕ್ಷರಿಗೆ ಸಹ ಕೋವಿಡ್ ಪಾಸಿಟಿವ್ ಆಗಿದೆ. ಆದರೂ ಪ್ರಯತ್ನವನ್ನು ಮಾಡುತ್ತಿದ್ದಾರೆ. ಮಾರ್ಚ್ ಒಳಗಾಗಿ 2ಎ ಮೀಸಲಾತಿ ನೀಡಬೇಕು ಎಂದು ಗಡುವು ನೀಡಿದ್ದೇವೆ. ಅಷ್ಟರಲ್ಲಿಯೇ ಸಿಎಂ ಬಸವರಾಜ ಬೊಮ್ಮಾಯಿ ನೀಡುತ್ತಾರೆ ಎಂಬ ಭರವಸೆ ಇದೆ. ಕೋವಿಡ್ ಹಿನ್ನೆಲೆಯಲ್ಲಿ ಮೀಸಲಾತಿ ಹೋರಾಟಕ್ಕೆ ಬ್ರೇಕ್ ಹಾಕಿದ್ವಿ. ಮುಂದಿನ ಹೋರಾಟದ ಬಗ್ಗೆ ನಾಳೆ ಸ್ಪಷ್ಟ ನಿರ್ಧಾರ ಮಾಡಲಾಗುವುದು ಎಂದರು.
ಇನ್ನು ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಹೋರಾಟ ಮತ್ತೆ ತೀವೃತೆ ಪಡೆದುಕೊಂಡಿದೆ. ಇನ್ನು ನಾಳೆ ಹೋರಾಟ ಕುರಿತಂತೆ ಸ್ವಾಮಿಜಿ ಸ್ಪಸ್ಟ ನಿರ್ಧಾರ ತಿಳಿಸುತ್ತೇವೆ ಎಂದು ಹೇಳಿದ್ದಾರೆ. ಇನ್ನು ನಾಳೆ ಹೋರಾಟದ ರೂಪರೇಶೆ ಕುರಿತಂತೆ ಯಾವೆಲ್ಲ ನಿರ್ಧಾರ ತೆಗೆದುಕೊಳ್ಳುತ್ತಾರೆಂದು ಕಾದು ನೋಡಬೇಕಿದೆ.