ವಿಜಯಪುರ: ಲೋಕೋಪಯೋಗಿ ಇಲಾಖೆ ವತಿಯಿಂದ ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬ ಹಾಗೂ ಪರಿವರ್ತಕಗಳನ್ನು ಸ್ಥಳಾಂತರಿಸುವ ಕಾಮಗಾರಿ ಕೈಗೊಳ್ಳುವುದರಿಂದ ನಗರದ ವಿವಿಧ ಬಡಾವಣೆಗಳಲ್ಲಿ ಡಿ.19 ರಂದು ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ವಿಜಯಪುರ ನಗರದ ಬೊಂಬಾಳ ಅಗಸಿ, ಎಪಿಎಂಸಿ, ರಜಪೂತ ಗಲ್ಲಿ, ಮಿನಿ ಮಾದರ ಓಣಿ, ಸಂಜಯ ಗಾಂಧಿ ನಗರ, ಕೋರಿ ಚೌಕ, ಎಸ್.ಎಸ್.ಫ್ರಂಟ್ ರಸ್ತೆ, ಗಣಪತಿ ಚೌಕ, ಲಾಲ ಬಹಾದ್ದೂರ ಶಾಸ್ತ್ರೀ ಮಾರುಕಟ್ಟೆ, ಬಸವೇಶ್ವರ ಸರ್ಕಲ್ ಹಾಗೂ ಬಾರಾಕಮಾನ್ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು,
ಸಾರ್ವಜನಿಕರು ಸಹಕರಿಸುವಂತೆ ವಿಜಯಪುರ ಹೆಸ್ಕಾಂ ಕಾರ್ಯನಿವಾಹಕ ಅಭಿಯಂತರರು ಕೋರಿದ್ದಾರೆ.