ಣೇಶನಿಗೆ ಸ್ವಾಗತ ಕೋರಲು ಹಾಗೂ ವಿದಾಯ ಹೇಳಲು ಡಿಜೆ ಸೌಂಡ್ ಇರಲೇಬೇಕು ಎಂಬಂತಾಗಿದೆ. ಡಿಜೆ ಶಬ್ದಕ್ಕೆ ಕೈ ಕಾಲು ಆಡಿಸಿ ಕುಣಿಯುವರೇ ಹೆಚ್ಚು. ಈ ಹಿಂದೆಲ್ಲಾ ಡಿಜೆ ಗದ್ದಲವಿಲ್ಲದಿದ್ದಾಗ ನಮ್ಮ ಸಂಸ್ಕೃತಿ ಸಂಪ್ರದಾಯ ಪ್ರಕಾರ ಭಕ್ತಿಯ ಹಾಡಿಗೆ ಕುಣಿತದ ಮೂಲಕ ತರುತ್ತಿದ್ದರು. ಆದ್ರೆ ಈಗ ಕಾಲ ಬದಲಾಗಿದೆ. ಡಿಜೆ ಬಂದಾಗಿನಿಂದ ಈ ಸಂಸ್ಕೃತಿ ಮರೆಯಾಗುತ್ತಿದೆ. ಆದ್ರೆ ಬಸವನಾಡು ವಿಜಯಪುರದಲ್ಲಿ ಮತ್ತೆ ಈ ಸಂಸ್ಕೃತಿ ಮರಳಿ ತರಲು ಗಣೇಶ ಮಂಡಳಿ ಶ್ರಮಿಸುತ್ತಿದೆ.
ಹೌದು ವಿಜಯಪುರ ನಗರದ ಶ್ರೀ ಶಂಕರಲಿಂಗ ಗಜಾನನ ಮಂಡಳಿ” ಸಂಕಲ್ಪ ಸಿದ್ಧಿ” ಗಣಪತಿ ಮಂಡಳದ ವತಿಯಿಂದ ನೂರಾರು ಮಹಿಳೆಯರು ನೆರೆಯ ಮಹಾರಾಷ್ಟ್ರದ ಫಂಡರಪೂರ ವಿಠ್ಠಲನ ಭಕ್ತರಾದ ವಾರಕರಿ ನೃತ್ಯವನ್ನು ಮಾಡೊ ಮೂಲಕ ನಮ್ಮ ಸಂಪ್ರದಾಯವನ್ನು ಎತ್ತಿ ಹಿಡಿದು ಯುವ ಪೀಳಿಗೆಗೆ ಮಾದರಿ ಯಾಗುತ್ತಿದ್ದಾರೆ. ನಗರದಲ್ಲಿ ಏಳನೇ ದಿನದಂದು ಗಣೇಶ ವಿಸರ್ಜನೆ ನಡೆಯುತ್ತದೆ. ಈ ದಿನದಂದು ಈ ಮಹಿಳೆಯರು ರಸ್ತೆಯುದ್ದಕ್ಕೂ ವಾರಕರಿ ನೃತ್ಯ ಮಾಡಲಿದ್ದಾರೆ. ಪ್ರತಿನಿತ್ಯ ಸಂಜೆ ಆರು ಗಂಟೆಗೆ ಯುವತಿಯರಿಂದ ಹಿಡಿದು 55 ವಯಸ್ಸಿನ ಮಹಿಳೆಯರು ಹುಮ್ಮಸ್ಸಿನಿಂದ ನೃತ್ಯಾಭ್ಯಾಸದಲ್ಲಿ ತೊಡಗಿದ್ದಾರೆ. ಮಹಾನಗರ ಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟ ಪ್ರೋತ್ಸಾಹದೊಂದಿಗೆ ಕೈಯಲ್ಲಿ ಚಳ್ಳಂ ತಾಳಕ್ಕೆ ವಿಠ್ಠಲ ವಿಠ್ಠಲ ಹರಿ ಓಂ ವಿಠ್ಠಲ ಹಾಗೂ ಜೈ ಗಣೇಶ ಎಂಬ ಹಾಡಿಗೆ ನೃತ್ಯ ಮಾಡುತ್ತಿದ್ದಾರೆ. ಡಿಜೆ ನಮ್ಮ ಸಂಪ್ರದಾಯ ವಲ್ಲ, ಭಕ್ತಿಯಿಂದ ಆಚರಿಸಬೇಕೆಂದು ಕರೆ ನೀಡುತ್ತಿದ್ದಾರೆ.
ಇನ್ನೂ ವಾರಕರಿ ನೃತ್ಯ ಒಂದು ಕಡೆಯಾದರೆ ಇನ್ನೊಂದು ಕಡೆ ಚಿಕ್ಕ ಮಕ್ಕಳು ಹಾಗೂ ಯುವಕ ಯುವತಿಯರು ನಾವೇನೂ ಕಡಿಮೆ ಇಲ್ಲಾ ನಾವೂ ನಮ್ಮ ಸಂಪ್ರದಾಯ ಪಾಲಿಸ್ತಿವಿ ಅಂತಾ ಲೇಜಿಮ್ ಪ್ರ್ಯಾಕ್ಟೀಸ್ ಮಾಡುತ್ತಿದ್ದಾರೆ. ಈ ಮಂಡಳಿಯು ಕಳೆದ ಮೂರು ವರ್ಷಗಳಿಂದ ಲೇಜಿಮ್ ನೃತ್ಯದ ಮೂಲಕ ಗಣೇಶನಿಗೆ ಸ್ವಾಗತ ಹಾಗೂ ವಿದಾಯ ಹೇಳುತ್ತಿದೆ. ಸನಾತನ ಧರ್ಮವನ್ನು ಪಾಲಿಸೋಣ, ನಮ್ಮ ಪರಂಪರೆಯನ್ನು ಮರೆಯಬಾರದು, ಪಾಲಿಸಿ,ಬೆಳೆಸಿ ಪೋಷಿಸಿ ಮುಂದಿನ ಪೀಳಿಗೆಗೆ ತಿಳಿ ಹೇಳುವ ಕೆಲಸ ಮಾಡುತ್ತಿದ್ದಾರೆ
ಒಟ್ನಲ್ಲಿ ಭಾರತೀಯ ಸಂಸ್ಕೃತಿಯ, ಪರಂಪರೆಯನ್ನು ಉಳಿಸಲು ಗಜಾನನ ಮಂಡಳಿ ಮಾಡುತ್ತಿರುವ ಈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
ವಿಜಯಕುಮಾರ ಸಾರವಾಡ
ಇನ್ ನ್ಯೂಸ್
ವಿಜಯಪುರ…