ಮೃತಪಟ್ಟಿದ್ದ ಜಾನುವಾರಗಳನ್ನು ಫೇಸ್ ಬುಕ್ ಫ್ರೆಂಡ್ ಸರ್ಕಲನ ಯುವಕರು ಅಂತ್ಯ ಸಂಸ್ಕಾರ ಮಾಡಿದ್ದಾರೆ
ಸಾಮಾಜಿಕ ಸೇವೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿಯೇ ಅತ್ಯಂತ ಕ್ರೀಯಾಶೀಲವಾಗಿರುವ ಈ ಗೆಳೆಯರ ಬಳಗ ಭಿಕ್ಷುಕರಿಗೆ ಚಳಿಯಲ್ಲಿ ರಗ್ಗು, ಬೀದಿ ವ್ಯಾಪಾರಿಗಳಿಗೆ ಛತ್ರಿ,ಬೀದಿ ವ್ಯಾಪಾರಿಗಳ ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹ ಮತ್ತು ಸಹಾಯ,ನಿರ್ಗತಿಕರಿಗೆ ಚಿಕಿತ್ಸೆ ಹೀಗೆ ಹತ್ತು ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುವ ಫೇಸ್ ಬುಕ್ ಫ್ರೆಂಡ್ ಸರ್ಕಲ್ ಇವತ್ತು ನಗರದಲ್ಲಿ ಮೃತಪಟ್ಟಿದ್ದ ಎರಡು ಜಾನುವಾರಗಳನ್ನು ಅಂತ್ಯ ಸಂಸ್ಕಾರ ಮಾಡಲು ಶಹಾಪೂರದಲ್ಲಿ ಇರುವ ಜಾನುವಾರುಗಳ ಸ್ಮಶಾನ ಭೂಮಿಗೆ ಹೋದ ಸಂಧರ್ಭದಲ್ಲಿ ಜಾನುವಾರಗಳ ಅಂತ್ಯಕ್ರಿಯೆ ಮಾಡುವ ಸ್ಮಶಾನ ಭೂಮಿಯು ಕಸದ ತೊಟ್ಟಿಯಾಗಿರುವ ವಿಚಾರವನ್ನು ಬೆಳಗಾವಿ ಜಿಲ್ಲಾಧಿಕಾರಿ ಹಾಗೂ ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಅವರ ಗಮನಕ್ಕೆ ತಂದಿದ್ದಾರೆ.
ಬೆಳಗಾವಿ ಜಿಲ್ಲಾಧಿಕಾರಿ,ಹಾಗೂ ಪಾಲಿಕೆ ಆಯುಕ್ತರಿಗೆ ಈ ವಿಚಾರ ಗೊತ್ತಾದ ಹತ್ತು ನಿಮಿಷದಲ್ಲೇ ಜೆಸಿಬಿ ಕಳುಹಿಸಿ ಜಾನುವಾರಗಳನ್ನು ಮಣ್ಣುಕೊಡುವ ಆ ಸ್ಥಳವನ್ನು ಸ್ವಚ್ಛ ಗೊಳಿಸಿದ್ದಾರೆ.ಕೆಲವೇ ಗಂಟೆಗಳಲ್ಲಿ ಈ ಸ್ಮಶಾನ ಭೂಮಿ ಸ್ವಚ್ಛವಾಗಿದೆ.
ಸಾರ್ವಜನಿಕರ ಸಮಸ್ಯಗೆ ಅತ್ಯಂತ ತ್ವರಿತವಾಗಿ ಸ್ಪಂದಿಸಿದ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹಾಗೂ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಅವರು ನಿಭಾಯಿಸಿರುವ ಕರ್ತವ್ಯ ನಿಜಕ್ಕೂ ಶ್ಲಾಘನೀಯ ವಾಗಿದೆ.