Uncategorized

ಆರಡಿ ಮೂರಡಿ ಜಾಗಕ್ಕೂ ಪರದಾಡುತ್ತಿರುವ ಗ್ರಾಮಸ್ಥರು

Share

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮಂಗಾವತಿ ಗ್ರಾಮಸ್ಥರು ಊರಲ್ಲಿ ಸ್ಮಶಾನ ಭೂಮಿ ನಿರ್ಮಿಸವಂತೆ ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ

ಹೌದು ಊರ ಅಂದರೆ ದೇವಾಲಯ ವಿರಬೇಕು ಊರು ಅಂದರೆ ಸ್ಮಶಾನ ವಿರಲೇಬೇಕು ಆದರೆ ಇಲ್ಲೊಂದ ಗ್ರಾಮದಲ್ಲಿ ಸ್ಮಶಾನ‌ ಭೂಮಿ ಇಲ್ಲದಿರುವುದು ವಿಪರ್ಯಾಸವೇ ಸರಿ
ವಿಧಿ ಇಲ್ಲದೆ ರಸ್ತೆ ಬದಿಯಲ್ಲಿಯೇ ಶವ ಸಂಸ್ಕಾರ ಮಾಡುತ್ತಿರುವ ಮಂಗಾವತಿ ಗ್ರಾಮಸ್ಥರು ಸ್ಮಶಾನ‌ ಭೂಮಿ ನಿರ್ಮಿಸುವಂತೆ ಕಳೆದ ಒಂದು ವರ್ಷದಿಂದಲೂ ಗ್ರಾಮಸ್ಥರು ಪರದಾಡುತ್ತಿದ್ದಾರೆ .

ಗ್ರಾಮಸ್ಥರೆಲ್ಲರೂ ಸೇರಿ ದಾಖಲಾತಿಗಳೊಂದಿಗೆ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಭೇಟಿ ನೀಡಿ ಸ್ಮಶಾನ ಭೂಮಿ ನಿರ್ಮಿಸದಿದ್ದರೆ ತಹಶಿಲ್ದಾರ ಕಚೇರಿ ಮುಂದೆ ಶವ ಇಟ್ಟು ಪ್ರತಿಭಟಿಸುವ ಎಚ್ಚರಿಕೆ ನೀಡಿದ್ದಾರೆ .

ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮಸ್ಥರು ನಮ್ಮ ಊರಿನಲ್ಲಿ ಸುಮಾರು ವರ್ಷದಿಂದ ಮೃತವಾದವರನ್ನು ಮಣ್ಣುಕೊಡಲು ,ಸುಡಲು ಜಾಗವಿಲ್ಲ ಗ್ರಾಮದ ಸರ್ವೆ ನಂಬರ್ ೭೩ ರಲ್ಲಿ ಒಂದುವರೆ ಎಕರೆ ಜಾಗವನ್ನು ಸುಮಿತ್ರಾ ಸಿದ್ದಗೌಡಾ ಪಾಟೀಲ ಎಂಬುವರು ಸ್ಮಶಾನ ಭೂಮಿ ನಿರ್ಮಾಣಕ್ಕೆ ನೀಡಿದ್ದಾರೆ ,ಭೂಮಿ ನಿರ್ಮಾಣಕ್ಕೆ ಸುಮಾರು ೩೪ ಲಕ್ಷ ಅನುದಾನ ಬಿಡುಗಡೆಯಾದರೂ ಕೂಡಾ ಅಧಿಕಾರಿಗಳು ಸುಕಾ ಸುಮ್ಮನೆ ನಮ್ಮನ್ನು ಓಡಾಡಿಸುತ್ತಿದ್ದಾರೆ ,ನಮ್ಮ ಹತ್ತಿರ ಎಲ್ಲ ದಾಖಲೆಗಳಿವೆ ,ಗ್ರಾಮ ಲೆಕ್ಕಾಧಿಕಾರಿ ,ಪಿಡಿಒ ,ತಹಶೀಲ್ದಾರ ,ಎಸಿ ,ಡಿಸಿ ಎಲ್ಲಾ ಅಧಿಕಾರಿಗಳು ಪೈಲಗೆ ಸಹಿ ಹಾಕಿದರೂ ಕೂಡಾ ಯಾವ ಕಾರಣಕ್ಕೆ ಸ್ಮಶಾನ ಭೂಮಿ ನಿರ್ಮಾಣ ವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ .

ಮತ್ತೋರ್ವ ಗ್ರಾಮದ ಹಿರಿಯರು ಮಾತನಾಡುತ್ತ ನನಗೆ ಸುಮಾರು ೫೫ ವರ್ಷಗಳಾಗಿವೆ ನಾನು ಇಲ್ಲಿಯವರೆಗೆ ನಮ್ಮ ಊರಲ್ಲಿ ಸ್ಮಶಾನ ಭೂಮಿ ನೋಡಿಯೇಇಲ್ಲ ಯಾರಾದರೂ ಸತ್ತರೆ ಅವರನ್ನು ರಸ್ತೆಯ ಪಕ್ಕದಲ್ಲಿ ಸುಡುವ ಪರಿಸ್ಥಿತಿ ನಮ್ಮ ಗ್ರಾಮದಲ್ಲಿದೆ . ಮೊನ್ನೆಯೆಷ್ಟೇ ನಾವಿ ಸಮಾಜದವರು ಮೃತರಾದಾಗ ಅವರಿಗೆ ಮಣ್ಣು ಕೊಡಲು ತುಂಬಾ ಅಸ್ಥವ್ಯಸ್ಥವಾಗಿದೆ ,ಈ ಸ್ಮಶಾನ ಭೂಮಿ ನಿರ್ಮಾಣಕ್ಕೆ ಪಕ್ಕದ ಜಮೀನಿನವರು ತಕರಾರು ಮಾಡುತ್ತಿದ್ದಾರೆ ಸ್ಮಶಾನ ಭೂಮಿಗಾಗಿ ತಕರಾರು ಮಾಡುವುದು ಸಾಮಾನ್ಯ ವಾಗಿದೆ ಆದರೆ ಇದರಲ್ಲಿ ರಾಜಕೀಯ ಬೆರೆಸದೆ ನಮಗೆ ನ್ಯಾಯ ದೊರಕಿಸಿ ಎಂದು ಮನವಿ ಮಾಡಿಕೊಂಡರು .

ಈ ಸಂದರ್ಭದಲ್ಲಿ ಮಂಗಾವತಿ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು .

 

Tags: