ಕನಿಷ್ಠ ಸಂಬಳ ಪಡೆದುಕೊಂಡು ಸಮಾಜ ಸ್ವಚತೆಗಾಗಿ ಶ್ರಮಿಸುತ್ತಿರುವ ಪೌರ ಕಾರ್ಮಿಕರ ಕಾರ್ಯ ಅಭಿನಂದನಾರ್ಹ ಎಂದು ಮಾಜಿ ಉಪ ಮುಖ್ಯಮಂತ್ರಿ, ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಪುರಸಭೆ ಆವರಣದಲ್ಲಿ ಆಯೋಜಿಸಿದ್ದ ಪೌರ ಕಾರ್ಮಿಕ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಲಕ್ಷ್ಮಣ ಸವದಿ ಪೌರ ಕಾರ್ಮಿಕರ ಕಾರ್ಯ ಭಗವಂತನ ಕಾರ್ಯ ಇದ್ದಂತೆ ಹೀಗಾಗಿ ಪೌರ ಕಾರ್ಮಿಕರು ಸಂತ, ಮಹಾಂತ ಮತ್ತು ದಾರ್ಶನಿಕರಿಗಿಂತ ಅತ್ಯುನ್ನತ ಸ್ಥಾನದಲ್ಲಿದ್ದಾರೆ ಅವರು ಜನ ಎದ್ದೇಳುವ ಮುನ್ನವೇ ಪೌರ ಕಾರ್ಮಿಕರು ಎದ್ದು ಸ್ವಚ್ಛತೆಗಾಗಿ ಸಿದ್ಧರಾಗುತ್ತಿರುವುದರಿಂದಲೇ ನಾವು ಆರೋಗ್ಯವಂತ ಜೀವನ ನಡೆಸುತ್ತಿದ್ದೇವೆ ಎಂದರು.
ಜಿಡ್ಡು ಗಟ್ಟಿದ್ದ ಅಥಣಿ ಪುರಸಭೆಯ ಮೂಲಕ ಅಮೂಲಾಗ್ರ ಬದಲಾವಣೆ ತರುವ ಮೂಲಕ ಹೊಸ ದಿಕ್ಕು ನೀಡಿದ ಪುರಸಭಾ ಮುಖ್ಯಾಧಿಕಾರಿ ಅಶೋಕ ಗುಡಿಮನಿಯವರ ಕಾರ್ಯ ಅಥಣಿ ಜನತೆ ಮೆಚ್ಚಿಕೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿಯೂ ಸಹ ಮುಖ್ಯಾಧಿಕಾರಿಗಳ ಕಾರ್ಯಕ್ಕೆ ಮತ್ತು ಪೌರ ಕಾರ್ಮಿಕರ ಸ್ವಚ್ಛತಾ ಕಾರ್ಯಕ್ಕೆ ಅಥಣಿ ಜನತೆ ಸಹಕಾರ ನೀಡಬೇಕು ಎಂದ ಅವರು ಕಾಯಕ ಯೋಗಿ ಶರಣ ಮರುಳ ಶಂಕರರ ಪ್ರೇರಣೆಯಿಂದಲೇ ಕಾಯಕವೇ ಕೈಲಾಸ ಎನ್ನುವ ನಾಣ್ಣುಡಿ ರಚಿಸಿದರು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪುರಸಭಾ ಮುಖ್ಯಾಧಿಕಾರಿ ಅಶೋಕ ಗುಡಿಮನಿ, ಯೋಧ, ರೈತ ಮತ್ತು ಸ್ವಚ್ಛತಾ ಸೇನಾನಿಗಳು ದೇಶಕ್ಕಾಗಿ ತಮ್ಮ ಇಡೀ ಜೀವನವನ್ನು ಮೀಸಲಿಡುತ್ತಾರೆ ಇಂತಹ ಮಹನೀಯರನ್ನು ನಾವೆಲ್ಲ ಅಭಿನಂದಿಸಬೇಕು
ಒಂದೇ ಒಂದು ದಿನ ಯೋಧ ದೇಶದ ಗಡಿ ಕಾಯುವುದನ್ನು ನಿಲ್ಲಿಸಿದಲ್ಲಿ ದೇಶದಲ್ಲಿ ಅರಾಜಕತೆ ಮೂಡುತ್ತದೆ ಅದೇ ರೀತಿ ರೈತ ಒಂದು ದಿನ ಬಿಡುವು ಮಾಡಿಕೊಂಡಲ್ಲಿ ಆಹಾರಕ್ಕಾಗಿ ಹಾಹಾಕಾರ ಉಂಟಾಗುತ್ತದೆ. ಪೌರ ಕಾರ್ಮಿಕನೂ ಕೂಡ ಒಂದೇ ಒಂದು ದಿನ ರಜೆ ಹಾಕಿದರೆ ಸಾಕು ದೇಶದ ಆರೋಗ್ಯ ಹದಗೆಡುತ್ತದೆ ಹೀಗಾಗಿ ಈ ಮೂವರು ಕೂಡ ದೇಶದ ಆಸ್ತಿ ಇವರನ್ನು ಅಭಿನಂದಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಕಾರ್ಯಕ್ರಮದಲ್ಲಿ ಪೊಲೀಸ್ ಅಧಿಕಾರಿಗಳಾದ ಶ್ರೀಪಾದ ಜಲ್ದೆ, ರವೀಂದ್ರ ಬಾಯ್ಕೋಡಿ, ತಹಶೀಲ್ದಾರ ರಾಜೇಶ್ ಬುರ್ಲಿ, ಪುರಸಭಾ ಸದಸ್ಯರು, ಪುರಸಭಾ ಸಿಬ್ಬಂದಿ ಹಾಗೂ ಪೌರ ಕಾರ್ಮಿಕರು ಹಾಗೂ ಪತ್ರಕರ್ತರ ರಮೇಶ ಬಾದವಾಡಗಿ ಅವರಿಗೆ ಸನ್ಮನಿಸಿದರು
ಕಾರ್ಯಕ್ರಮಕ್ಕಿಂತ ಮೊದಲು ಶಾಸಕ ಲಕ್ಷ್ಮಣ ಸವದಿ ಮತ್ತು ಅತಿಥಿಗಳು ಡಾ.ಅಂಬೇಡ್ಕರರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು
ಈ ಸಂದರ್ಭದಲ್ಲಿ ಚನ್ನಪ್ಪಾ ಜಿರಗ್ಯಾಳ,ಮಹೇಶ ಜಿರಗ್ಯಾಳ, ಉದಯ ಸಿಂಗೆ,ಬಾಬು ಚಲವಾದಿ,ಬಸವರಾಜ ಕಾಂಬಳೆ,ಅನಿಲ ಘಟಕಾಂಬಳೆ,ಚಾಂದಶೌಕತ ಮಲಂಗಶಾ,ಅನಂದ ಕಾಂಬಳೆ,ಚಂದು ಹಳದಮಾಳ,ಉಮೇಶ ಮೈಗೂರ,ಮಹಾತೇಶ ಮಡ್ಡಿ,ಗೌಸ್ ಮಹಾಂತ,ಸಿದ್ರಾಯ ಕೊರವ,ಅಣ್ಣಪ್ಪಾ ಕಾಂಬಳೆ, ಮಹಮ್ಮದ ಮುದೋಳ,ದಿಪಕ ಬೋಹಿತ,ಲಕ್ಷ್ಮಣ ಭಜಂತ್ರಿ,ಶ್ರೀಕಾಂತ ಭಜಂತ್ರಿ, ಕುಮಾರ ಹೆಗ್ಗಣವರ,ಸಿದ್ರಾಯ ಭಜಂತ್ರಿ,ಸುರೇಶ ವಾಗಮೋರೆ,ಭೀಮರಾವ ಘಟಕಾಂಬಳೆ,ಸೇರಿದಂತೆ ಉಪಸ್ಥಿತರಿದ್ದರು