ಗೋಮಾಂಸ ಸಾಗಟನೆ ಮಾಡುತ್ತಿದ್ದ ವಾಹನವನ್ನು ತಡೆದ ಶ್ರೀರಾಮಸೇನೆ ಕಾರ್ಯಕತ್ರರು ಗೋಮಾಂಸ ಸಾಗಾಟನೆ ಮಾಡುತ್ತಿದ್ದ ವಾಹನಕ್ಕೆ ಬೆಂಕಿ ಇಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ . ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿಯನ್ನು ಕಂಟ್ರೋಲ್ ಮಾಡಿದ್ದಾರೆ
ಹಿಂದೂ ಧರ್ಮದಲ್ಲಿ ಆಕಳನ್ನು ಪೂಜಿಸಿ ಆರಾಧಿಸುವುದು ಪೂಜೆ ಮಾಡುವುದು ನಂಬಿಕೆ ಆಗಿದೆ ಆಕಳಿಗೆ ತಾಯಿಯ ಸ್ಥಾನ ನೀಡಿದ ಧರ್ಮ ಮುಕ್ಕೋಟಿ ದೇವತೆಯನ್ನು ಗೋವಿನಲ್ಲಿ ಕಂಡು ಪೂಜಿಸುತ್ತಾರೆ ತಾಯಿ ೯ ತಿಂಗಳು ಹಾಲು ನೀಡಿದರೆ ಆಕಳು ಜೀವನ ಪರ್ಯಂತ ಹಾಲನ್ನು ನೀಡುತ್ತದೆ ಅಂತಹ ತಾಯಿಯನ್ನು ಕಡೆದು ತಿನ್ನಲು ಗೋಮಾಂಸ ರಫ್ತು ಮಾಡುತ್ತಿದ್ದ ಕಟುಕರನ್ನು ಬಂಧಿಸಿ ಅವರನ್ನು ಪೊಲೀಸ ಠಾಣೆಗೆ ಒಪ್ಪಿಸುವಲ್ಲಿ ದೊಡ್ಡಬಳ್ಳಾಪುರ ಶ್ರೀರಾಮಸೇನೆ ಕಾರ್ಯಕತ್ರರು ಯಶಸ್ವಿಯಾಗಿದ್ದಾರೆ
ಆಂಧ್ರದ ಹಿಂದೂಪುರದಿಂದ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಿಗೆ ಗೋಮಾಂಸ ಸಾಗಟನೆ ಮಾಡುವುದು ಮಾಮೂಲಾಗಿದೆ
ಇದನ್ನು ಸೂಕ್ಷವಾಗಿ ಪರಿಶೀಲಿಸದ ಶ್ರೀರಾಮಸೇನಾ ಕಾರ್ಯಕತ್ರರು ದೊಡ್ಡ ಬಳ್ಳಾಪುರ ಪ್ರವಾಸಿ ಮಂದಿರದ ಬಳಿ ಗೋಮಾಂಸ ಸಾಗಟನೆ ಮಾಡುತ್ತಿದ್ದ ವಾಹನವನ್ನು ತಡೆದಿದ್ದಾರೆ ೫ ವಾಹನಗಳಲ್ಲಿ ತುಂಬಿದ ಗೋಮಾಂಸ ಪತ್ತೆಯಾಗಿದೆ ಇದರಿಂದ ಆಕ್ರೋಶಗೊಂಡ ಕಾರ್ಯಕತ್ರರು ಕಾರಿಗೆ ಬೆಂಕಿ ಇಟ್ಟಿದ್ದಾರೆ ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ .
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀರಾಮಸೇನೆ ಪ್ರಧಾನ ಕಾರ್ಯದರ್ಶಿ ಸುಂದರೇಶ ನಗರಲ್ ಚಿಕ್ಕಬಳಾಪುರ ,ದೊಡ್ಡಬಳ್ಳಾಪುರ ,ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ೭ ಲಾರಿಗಳಿಂದ ಗೋಮಾಂಸ ರಫ್ತುಮಾಡುತ್ತಿದ್ದಾರೆ ಇದನ್ನು ಪ್ರಶ್ನೆ ಮಾಡಿದ ಕಾರ್ಯಕತ್ರನಿಗೆ ಗುಂಡಾಗಳು ಹಲ್ಯೆ ಮಾಡಿದ್ದಾರೆ ,ದೊಡ್ಡಬಳ್ಳಾಪುರ ಐ ಬಿ ಸರ್ಕಲನಲ್ಲಿ ಎಲ್ಲಾ ವಾಹನಗಳನ್ನು ತಡೆದಿದ್ದೇವೆ ,ಈ ನೀಚ ಕೃತ್ಯ ಮಾಡುತ್ತಿರುವ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು, ಸ್ಥಳೀಯ ಶಾಸಕರು ಸಂಸದರು ಮತ್ತು ಸರ್ಕಾರ ಕಣ್ಣು ಮುಚ್ಚಿಕೊಂಡಿದ್ದೀಯಾ ಎಂದು ಪ್ರಶ್ನಿಸಿದರು .
ಶ್ರೀರಾಮ ಸೇನಾ ಬೆಂಗಳೂರು ಗ್ರಾಮಾಂತರ ಅಧ್ಯಕ್ಷರಾದ ರಮೇಶ್ ಗೌಡ , ದೊಡ್ಡಬಳ್ಳಾಪುರ ತಾಲೂಕ ಅಧ್ಯಕ್ಷರಾದ ಪವನ್ ಸ್ವಾಮಿ ಹಾಗೂ ಎಲ್ಲ ಶ್ರೀರಾಮ ಸೇನಾ ಮುಖಂಡರು ನೇತೃತ್ವದಲ್ಲಿ ಅಕ್ರಮವಾಗಿ ಗೋ ಮಾಂಸವನ್ನು ಸಾಗಿಸುತ್ತಿದ್ದ ಆರು ಗಾಡಿ 15 ಟನ್ನ ಕ್ಕೂ ಹೆಚ್ಚು ಗೋ ಮಾಂಸ ತಡೆದು ಪೊಲೀಸರಿಗೆ ಒಪ್ಪಿಸಿದರು .