ಪುಣೆ ಮತ್ತು ಮುಂಬೈ ನಂತರ ಸಾರ್ವಜನಿಕ ಗಣೇಶೋತ್ಸವದ ಸಂಪ್ರದಾಯವನ್ನು ಹೊಂದಿರುವ ಬೆಳಗಾವಿ ನಗರವು ತನ್ನ ಪ್ರೀತಿಯ ಗಣೇಶನನ್ನು ಅದ್ಧೂರಿ ಭಕ್ತಿಯದಿಂದ ಮತ್ತು ಸಂಭ್ರಮದಲ್ಲಿ ಬೀಳ್ಕೊಟ್ಟಿತು. ಬೆಳಗಾವಿ ನಗರದಲ್ಲಿಯೂ 28 ಗಂಟೆಗೂ ಹೆಚ್ಚು ಕಾಲ ಗಣೇಶ ವಿಸರ್ಜನೆ ನಡೆಯಿತು.
ಲೋಕಮಾನ್ಯ ತಿಲಕರ ಪ್ರೇರಣೆಯಿಂದ ಬೆಳಗಾವಿಯಲ್ಲಿ ಆರಂಭವಾದ ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕೆ ಈ ವರ್ಷ ಭಕ್ತರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನಂತ ಚತುರ್ದರ್ಶಿ ನಿಮಿತ್ತ ಬೆಳಗಾವಿಯಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ನಡೆಯುತ್ತದೆ. ಸಂಜೆ ನಾಲ್ಕು ಗಂಟೆಗೆ ಹುತಾತ್ಮ ವೃತ್ತದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಯನ್ನು ಬೆಳಗಾವಿ ಮೇಯರ್ ಶೋಭಾ ಸೋಮನಾಚೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ಅಭಯ ಪಾಟೀಲ, ಶಾಸಕ ರಾಜು ಸೇಠ್, ಪೊಲೀಸ್ ಆಯುಕ್ತ ಸಿದ್ಧರಾಮಪ್ಪ, ಉಪ ಮೇಯರ್ ರೇಷ್ಮಾ ಪಾಟೀಲ್, ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಸಾರ್ವಜನಿಕ ಗಣೇಶ ನಿಗಮದ ಅಧ್ಯಕ್ಷ ರಂಜಿತ್ ಚವ್ಹಾಣ ಪಾಟೀಲ್, ಲೋಕಮಾನ್ಯ ಗಣೇಶೋತ್ಸವ ಮಂಡಳಿ ಅಧ್ಯಕ್ಷ ವಿಜಯ ಜಾಧವ್ ಇದ್ದರು.
ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ರಾತ್ರಿ ಎಂಟು ಗಂಟೆಗೆ ವಿಸರ್ಜನೆ ಮೆರವಣಿಗೆ ಪರಿಶೀಲಿಸಿದರು.ವಿಸರ್ಜನೆ ಮೆರವಣಿಗೆ ವೀಕ್ಷಿಸಲು ಮಹಿಳೆಯರ ದಂಡೇ ನೆರೆದಿತ್ತು. ರಾತ್ರಿ ಎಂಟರ ನಂತರ ಸಂಭಾಜಿ ವೃತ್ತದಲ್ಲಿ ಒಂದರ ಹಿಂದೆ ಒಂದರಂತೆ ಗಣಪತಿ, ಡಿಜೆ, ಝಂಜಪಥಕ್, ಧೋಲ್ ತಾಶಾ ಪಥಕ್, ವಾರಕರಿ ಮಂಡಲ, ಭಜನೆ ಮಂಡಲ ಹಾಗೂ ಸಾಂಪ್ರದಾಯಿಕ ಜಿಮ್ಮಾ ಫುಗ್ಡಿಯನ್ನು ಒಂದರ ಹಿಂದೆ ಒಂದರಂತೆ ಸಂಭಾಜಿ ವೃತ್ತಕ್ಕೆ ತರಲಾಯಿತು. ಮಹಿಳೆಯರು ಹುರುಪಿನಿಂದ ಡ್ಯಾನ್ಸ್ ಮಾಡಿದರು
ಮರುದಿನ ಸಂಜೆ ಆರು ಗಂಟೆಯವರೆಗೆ ವಿಸರ್ಜನೆ ಮೆರವಣಿಗೆ ಮುಂದುವರೆಯಿತು. ಬೆಳಗಾವಿ ಮಹಾನಗರ ಪಾಲಿಕೆಯ ಗಣಪತಿಯನ್ನು ಕೊನೆಯಲ್ಲಿ ವಿಸರ್ಜನೆ ಮಾಡಿ ಮೆರವಣಿಗೆಯನ್ನು ಮುಕ್ತಾಯಗೊಳಿಸಲಾಯಿತು.
ಎಲ್ಲಾ ಗಣೇಶ ಭಕ್ತರು ತಮ್ಮ ಪ್ರೀತಿಯ ಗಣನಾಯಕನಿಗೆ “ಮುಂದಿನ ವರ್ಷ ಬೇಗ ಬಾ” ಎಂದು ಭಾವನಾತ್ಮಕವಾಗಿ ಬೀಳ್ಕೊಟ್ಟರು. ವಿಸರ್ಜನೆ ಮೆರವಣಿಗೆ ಹಿನ್ನೆಲೆಯಲ್ಲಿ ಬೆಳಗಾವಿ ಪೊಲೀಸ್ ಕಮಿಷನರೇಟ್ ವತಿಯಿಂದ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.