Uncategorized

ಮಂಗಸೂಳಿ ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ

Share

ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮವು 2022-23ನೇ ಸಾಲಿನ ಗಾಂಧಿ ಗ್ರಾಮ ಪ್ರಶಸ್ತಿಗೆ ಆಯ್ಕೆಯಾಗಿದ್ದು ಅಕ್ಟೋಬರ್ 2 ರಂದು ಬೆಂಗಳೂರಿನ ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳು ಪ್ರಶ್ತಸಿ ಕೊಡಲಿದ್ದಾರೆಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮಕ್ಕೆ ಮೂರನೇ ಬಾರಿಗೆ ಗಾಂಧಿ ಗ್ರಾಮ ಪ್ರಶಸ್ತಿ ಲಭಿಸಿದೆ ಗ್ರಾಮದ ಅಭಿವೃದ್ಧಿಗೆ ವಿಶೇಷ ಸಹಕಾರ ನೀಡಿದ ಗ್ರಾ.ಪಂ.ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಪ್ರಶಾಂತ ಪಾಟೀಲ ಪಿಡಿಒ ಸಂಜೀವ್ ಸೂರ್ಯವಂಶಿ ಹಾಗೂ ಸಿಬ್ಬಂದಿ ಹಾಗೂ ಸದಸ್ಯರನ್ನು ಅಭಿನಂದಿಸಿದರು.
ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಸಂಜೀವ ಸೂರ್ಯವಂಶಿ ಮಾತನಾಡಿ, ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಇಲ್ಲಿನ ಎಲ್ಲ ನೌಕರರು ಗ್ರಾಮಸ್ಥರಿಗೆ ವಿಶೇಷ ಸಹಕಾರ ನೀಡಿದ ಕಾರಣಕ್ಕೆ ಪಂಚಾಯಿತಿ ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ.ಎಂದರು

ಹಿರಿಯ ಸದಸ್ಯರಾದ ಬಾಬಾ ಪಾಟೀಲ್, ಪ್ರಶಾಂತ ಪಾಟೀಲ್, ಚಿದಾನಂದ ಮಾಳಿ, ಮಿರ್ಸಾಬ್ ಸನದಿ, ಉದಯ ಪಾಟೀಲ್, ರಾಜು ಕುತ್ವಾಡೆ, ಮಹಿಳಾ ಸದಸ್ಯರಾದ ಸವಿತಾ ಪಾಟೀಲ್, ಸುಜಾತಾ ಇನಾಮದಾರ ಮೊದಲಾದವರು ಉಪಸ್ಥಿತರಿದ್ದರು.

Tags: