Uncategorized

ರೇಬಿಸ್ ಲಸಿಕಾ ಅಭಿಯಾನಕ್ಕೆ ಗೋಮಾತೆಯ ಪೂಜೆ ಸಲ್ಲಿಸಿ ಚಾಲನೆ ನೀಡಿದ ಶಾಸಕ ವಿಠ್ಠಲ ಹಲಗೇಕರ

Share

ಖಾನಾಪೂರದಲ್ಲಿ ರೇಬಿಸ್ ಲಸಿಕಾ ಅಭಿಯಾನ, ನಾಲ್ಕನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಅಭಿಯಾನ ಮತ್ತು ಪಶು ಸಂಜೀವಿನಿ ತುರ್ತು ಸೇವಾ ಘಟಕ ವಾಹನ ಚಾಲನೆ ಅದರಂತೆಯೇ ಪಶು ಸಖಿಯರಿಗೆ ಸಮವಸ್ತ್ರ ಹಾಗೂ ಕಿಟ್ ವಿತರಣೆಯನ್ನು ಶಾಸಕ ವಿಠ್ಠಲ ಹಲಗೇಕರ ಅವರು ಗೋಮಾತೆಗೆ ಪೂಜೆ ಸಲ್ಲಿಸಿ ಚಾಲನೆ ಮತ್ತು ಉದ್ಘಾಟನೆ ಮಾಡಿದರು

ಈ ಸಂದರ್ಭದಲ್ಲಿ ತಾಲೂಕಿನ ಜಾನುವಾರುಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಅದರಂತೆಯೇ ರೈತರಿಗೆ ಗೌರವಪೂರ್ವಕವಾಗಿ ನಡೆದುಕೊಂಡು ಜಾನುವಾರುಗಳಿಗೆ ಸರ್ಕಾರದ ವತಿಯಿಂದ ಬರುವ ಔಷಧಿ,ಚುರ್ಚು ಮುದ್ದುಗಳನ್ನು ನೀಡಿ ರೈತರಿಗೆ ಅನುಕೂಲ ಮಾಡಿಕೊಡಲು ಸಹಕರಿಸಬೇಕೆಂದು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

Tags: