ಗ್ರಾಮೀಣ ಭಾಗದ ಯುವಕ ಯುವತಿಯರ ಪ್ರತಿಭೆಗಳನ್ನು ಗುರಿತಿಸುವ ಉದ್ದೇಶದಿಂದ ಅವಕಾಶ ಕಲ್ಪಿಸಲಾಗಿದೆ ಎಂದು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೋಲ್ಲೆ ಹೇಳಿದರು.
ಇಂದು ಹುಕ್ಕೇರಿ ನಗರದಲ್ಲಿ ವಿರಕ್ತ ಮಠದ ಶಿವಬಸವ ಮಹಾಸ್ವಾಮಿಗಳ ಮತ್ತು ಘೋಡಗೇರಿಯ ಕಾಶಿನಾಥ ಮಹಾಸ್ವಾಮಿಗಳ ದಿವ್ಯ ಸಾನಿದ್ಯದಲ್ಲಿ ಜರುಗಿದ ಹ್ಯಾಜ ಟ್ಯಾಲೆಂಟ್ ಸ್ಪರ್ಧೆಯನ್ನು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ವೇದಿಕೆ ಮೇಲೆ ಸಂಗಮ ಸಕ್ಕರೆ ಕಾರ್ಖಾನೆ ಅದ್ಯಕ್ಷ ರಾಜೇಂದ್ರ ಪಾಟೀಲ, ಬಿ ಜೆ ಪಿ ಮಂಡಲ ಅದ್ಯಕ್ಷ ಮಂಡಲ ಅದ್ಯಕ್ಷ ರಾಚಯ್ಯಾ ಹಿರೇಮಠ, ಮುಖಂಡರಾದ ಪರಗೌಡಾ ಪಾಟೀಲ, ಮಹಾವೀರ ನಿಲಜಗಿ, ರವಿಂದ್ರ ಹಿಡಕಲ್, ಗಜಾನನ ಕೊಳ್ಳಿ, ಎ ಕೆ ಪಾಟೀಲ, ಅಜೀತ ಕರ್ಜಗಿ, ಅಮರ ನಲವಡೆ, ಬಂಡು ಹತನೂರೆ ಉಪಸ್ಥಿತರಿದ್ದರು.
ನಂತರ ಸಂಸದರನ್ನು ಹುಕ್ಕೇರಿ ಪುರಸಭೆ ಸದಸ್ಯರು ಸತ್ಕರಿಸಿದರು.
ಸತ್ಕಾರ ಸ್ವೀಕರಿಸಿ ಮಾತನಾಡಿದ ಅಣ್ಣಾಸಾಹೇಬ ಜೋಲ್ಲೆ ಮಾತನಾಡಿ ನಮ್ಮ ನಾಡಿನ ಕಲೆ, ಸಂಸ್ಕೃತಿ, ಜಾನಪದ ಶೈಲಿಯ ಕುಣಿತಗಳು ಸಾಂಪ್ರದಾಯಿಕ ಮನರಂಜನೆಗಳ ನೀಡುವ ಕಲಾವಿದರನ್ನು ಗುರುತಿಸಿ ಅವರಿಗೆ ವೇದಿಕೆ ಕಲ್ಪಿಸಿ ಅವಕಾಶ ನೀಡುವ ನಿಟ್ಟಿನಲ್ಲಿ ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಜೋಲ್ಲೆ ಹ್ಯಾಜ ಟ್ಯಾಲೆಂಟ್ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ, ಮುಂಬರುವ ದಿನಗಳಲ್ಲಿ ಗ್ರಾಮೀಣ ಸೋಗಡಿನ ಆಟಗಳ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತದೆ ಎಂದರು
ಈ ಸಂದರ್ಭದಲ್ಲಿ ಹುಕ್ಕೇರಿ, ಸಂಕೇಶ್ವರ ಪುರಸಭೆ ಸದಸ್ಯರು, ಭಾರತೀಯ ಜನತಾ ಪಕ್ಷದ ಮುಖಂಡರು ಜೊಲ್ಲೆ ಅಭಿಮಾನಿಗಳು ಹಾಜರಿದ್ದರು.
ನಂತರ ವಿವಿಧ ಶಾಲಾ ವಿದ್ಯಾರ್ಥಿಗಳು ಮತ್ತು ಯುವಕ ಯುವತಿಯರ ಹಾಡು, ಕುಣಿತ ಜಾನಪದ ನೃತ್ಯಗಳ ಸ್ಪರ್ಧೆಗಳು ಜರುಗಿದವು.
ರಾಜು ಬಾಗಲಕೋಟಿ
ಇನ್ ನ್ಯೂಸ್ ಹುಕ್ಕೇರಿ