ಸರ್ಕಾರಿ ಆಸ್ಪತ್ರೆಯ ಪಕ್ಕದಲ್ಲಿರುವ ಶವಾಗಾರವನ್ನು ಬೇರೆಡೆ ಸ್ಥಳಾಂತರ ಮಾಡುವಂತೆ ಬಡಾವಣೆಯ ನಿವಾಸಿಗಳ ಒತ್ತಾಯವಾಗಿದೆ. ಶವಾಗಾರದ ಪಕ್ಕದಲ್ಲಿ ಯಾವುದೇ ಕಂಪೌಂಡ್ ಇಲ್ಲ ರಾತ್ರೀ ಯಾವಾಗ ಬೇಕಾದರೂ ಪೋಸ್ಟ್ ಮಾಟಮ್ ಮಾಡುತ್ತಾರೆ ಇದರಿಂದ ಬಡಾವಣೆಯ ನಿವಾಸಿಗಳು ಹೆದರುವಂತಾಗಿದೆ, ಶವಾಗಾರ ಬೇರೆಡೆ ಸ್ಥಳಾಂತರ ಮಾಡುವಂತೆ ಒತ್ತಾಯ ಆರಂಭವಾಗಿದೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ
ಹೌದು ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಕಂಪೌಂಡ್ ಇಲ್ಲ, ಇನ್ನೂ ಆಸ್ಪತ್ರೆಯ ಹಿಂಬಾಗದಲ್ಲೇ ಶವಾಗಾರ ಇದೆ. ಪ್ರತಿದಿನ ಮೂರ್ನಾಲ್ಕಾದರೂ ಪೋಸ್ಟ್ ಮಾಟಮ್ ಅಲ್ಲಿ ಮಾಡುತ್ತಾರೆ. ಸರ್ಕಾರಿ ಆಸ್ಪತ್ತೆಯ ಪಕ್ಕದಲ್ಲಿನ ಬಡಾವಣೆಯ ನಿವಾಸಿಗಳು ಶವಾಗಾರವನ್ನು ಬೇರೆಡೆ ಸ್ಥಳಾಂತರ ಮಾಡುವಂತೆ ಒತ್ತಾಯ ಮಾಡುತ್ತಿದ್ದಾರೆ…ಬೈಟ್
ಗೌಂಟಾಣಾ ಜಾಗದಲ್ಲಿ ಸರ್ಕಾರಿ ಆಸ್ಪತ್ರೆ ಇದೆ. ಆದರೆ ಈ ಆಸ್ಪತ್ರೆಯ ಸುತ್ತಲೂ ಕಂಪೌಂಡ್ ಇಲ್ಲ, ಇನ್ನೂ ಶವಾಗಾರದ ಪಕ್ಕದಲ್ಲೇ ಅಥಣಿ ಗಲ್ಲಿ ಇದೆ. ಅಲ್ಲಿಈಗ ಸಾಕಷ್ಟು ಜನರು ಮನೆಗಳನ್ನು ಕಟ್ಟಿಸಿಕೊಂಡಿದ್ದು ಜನರು ವಾಸಿಸುತ್ತಿದ್ದಾರೆ. ರಾತ್ರೀ ಯಾವುದಾದರೂ ಶವ ಬಂದರೆ ಅಲ್ಲಿ ಮೃತರ ಸಂಬಂಧಿಕರು ಆಕ್ರಂದನ ಹೆಚ್ಚಾಗಿರುತ್ತದೆ. ಇದರಿಂದಾಗಿ ಶವಾಗಾರದ ಪಕ್ಕದ ಮನೆಯವರು ಆತಂಕದಲ್ಲೇ ಬದುಕುತ್ತಿದ್ದಾರೆ. ಜೊತೆಗೆ ಮನೆಯಲ್ಲಿನ ಸಣ್ಣ ಪುಟ್ಟ ಮಕ್ಕಳು ಹೆದರುತ್ತಿದ್ದಾರೆ. ಈ ಪ್ರಯುಕ್ತ ಶವಾಗಾರ ಬೇರೆಡೆ ಸ್ಥಳಾಂತರ ಮಾಡುವಂತೆ, ಇರದಿದ್ದರೆ ಇಡೀ ಸರ್ಕಾರಿ ಆಸ್ಪತ್ರೆಗೆ ಸುತ್ತಲೂ ಒಂದು ಎತ್ತರದ ಕಂಪೌಂಡ್ ನಿರ್ಮಾಣ ಮಾಡುವಂತೆ ಒತ್ತಾಯವನ್ನು ಬಡಾವಣೆಯ ನಿವಾಸಿಗಳು ಮಾಡುತ್ತಿದ್ದಾರೆ…ಬೈಟ
ಇನ್ನೂ ಆಸ್ಪತ್ರೆಯ ಹಿಂಬಾಗದಲ್ಲಿ ಎಲ್ಲಂದರಲ್ಲಿ ಸಿರಂಜಿಗಳನ್ನು ಬೇಕಾಬಿಟ್ಟಿಯಾಗಿ ಎಸೆದಿದ್ದಾರೆ ಎಂಬುದು ಬಡಾವಣೆಯ ನಿವಾಸಿಗಳ ಮಾತು. ಇನ್ನೂದರೂ ಈ ಕುರಿತು ಲಕ್ಷ ವಹಿಸಿ ಸೂಕ್ತ ಕ್ರಮ ಕೈಗೊಳ್ಳುವದರ ಜೊತೆಗೆ ಶವಾಗಾರ ಬೇರೆಡೆ ಸ್ಥಳಾಂತರವಾದರೂ ಮಾಡಬೇಕು ಇರದಿದ್ದರೆ ಎತ್ತರದ ಕಂಪೌಂಡ್ ಆದರೂ ನಿರ್ಮಿಸಿ ಬಡಾವಣೆಯ ನಿವಾಸಿಗಳು ನೆಮ್ಮದಿಯಿಂದ ಕಾಲ ಕಳೆಯುವಂತೆ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಕ್ರಮ ಕೈಗೊಳ್ಳಬೇಕಿದೆ ,ಪ್ಲೊ
ವಿಜಯಕುಮಾರ ಸಾರವಾಡ
ಇನ್ ನ್ಯೂಸ್
ವಿಜಯಪುರ…