Uncategorized

ಶಾಸಕ ವಿನಯ್ ಕುಲಕರ್ಣಿಗೆ ಮತ್ತೆ ಸಂಕಷ್ಟ

Share

ಧಾರವಾಡ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದ ಯೋಗೀಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ಸಾಕ್ಷಿ ನಾಶದ ಆರೋಪದ ಮೇಲೆ ಸಿಬಿಐನಿಂದ ಬಂಧಿತರಾಗಿ ಇದೀಗ ಜಾಮೀನಿನ ಮೇಲೆ ಹೊರಗಡೆ ಇರುವ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

ಹೌದು! ಯೋಗೀಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ಸಾಕ್ಷಿ ನಾಶ ಮಾಡಿದ್ದಾರೆ ಎಂಬ ಆರೋಪದ ಮೇಲೆ ಸಿಬಿಐ ಅಧಿಕಾರಿಗಳು ಶಾಸಕ ವಿನಯ್ ಕುಲಕರ್ಣಿಯವರನ್ನು ಬಂಧಿಸಿದ್ದರು.
ಇದೀಗ ಜಾಮೀನು ಪಡೆದುಕೊಂಡು ಧಾರವಾಡ ಜಿಲ್ಲೆಯಿಂದ ಹೊರಗಡೆ ಇರುವ ಶಾಸಕ ವಿನಯ್ ಕುಲಕರ್ಣಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ತಮಗೆ ಧಾರವಾಡ ಜಿಲ್ಲಾ ಪ್ರವೇಶಕ್ಕೆ ಅನುಮತಿ ನೀಡಬೇಕು ಎಂದು ವಿನಯ್ ಕುಲಕರ್ಣಿ ನ್ಯಾಯಾಲಯದ ಮೊರೆ ಹೋಗುತ್ತಿದ್ದರೂ ಅವರಿಗೆ
ಅವಕಾಶ ಮಾತ್ರ ಸಿಗುತ್ತಿಲ್ಲ. ಮೊನ್ನೆಯಷ್ಟೇ ಇವರು ಸಲ್ಲಿಸಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ. ಇದೀಗ ಅದೇ ನ್ಯಾಯಾಲಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣದ ಸಾಕ್ಷಿ ನಾಶಕ್ಕೆ ಸಂಬಂಧಿಸಿದಂತೆ ಮರು ತನಿಖೆ ನಡೆಸುವಂತೆ ಆದೇಶ ನೀಡಿದೆ.

ಯೋಗೀಶಗೌಡ ಗೌಡರ ಕೊಲೆಗೆ ಸಂಬಂಧಿಸಿದ ಸಾಕ್ಷಿಗಳನ್ನು 2019ರಲ್ಲಿ ನಾಶಪಡಿಸಲಾಗಿದ್ದು, ಇದರ ಸಂಪೂರ್ಣ ತನಿಖೆಯನ್ನು ಸಿಬಿಐನಿಂದ ನಡೆಸಬೇಕು ಎಂದು ಯೋಗೀಶಗೌಡರ ಅಣ್ಣ ಗುರುನಾಥಗೌಡ ನ್ಯಾಯಾಲಯದ ಮೊರೆ ಹೋಗಿದ್ದರು. ಗುರುನಾಥಗೌಡರು ಸಲ್ಲಿಸಿದ್ದ ಈ ಅರ್ಜಿಗೆ ಅಂದಿನ ಪೊಲೀಸರು ಬಿ ಫಾಲ್ಸ್ ಕೂಡ ಹಾಕಿದ್ದರು. ಯೋಗೀಶಗೌಡರ ಹತ್ಯೆಗೆ ಸಂಬಂಧಿಸಿದ ಎಲ್ಲಾ ಪ್ರಕರಣಗಳು ಬೆಂಗಳೂರಿನ ಜನಪ್ರತಿಧಿನಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದು, ಈ ಪ್ರಕರಣವನ್ನೂ ಅದೇ ನ್ಯಾಯಾಲಯಕ್ಕೆ ವರ್ಗಾವಣೆ ಮಾಡುವಂತೆ ಧಾರವಾಡ ಹೈಕೋರ್ಟ್‌ಗೆ ಯೋಗೀಶಗೌಡರ ಅಣ್ಣ ಗುರುನಾಥಗೌಡ ಮನವಿ ಮಾಡಿಕೊಂಡಿದ್ದರು.

ಹೀಗಾಗಿ ಗುರುನಾಥಗೌಡ ಸಲ್ಲಿಸಿದ್ದ ಸಾಕ್ಷಿ ನಾಶ ಪ್ರಕರಣದ ಅರ್ಜಿ ಕೂಡ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲೇ ವಿಚಾರಣೆ ನಡೆಯುತ್ತಿತ್ತು. ಯೋಗೀಶಗೌಡರ ಕೊಲೆ ಪ್ರಕರಣದಲ್ಲಿ ಇಬ್ಬರು ಡಿವೈಎಸ್‌ಪಿಗಳು ಹಾಗೂ ಶಾಸಕ ವಿನಯ್ ಕುಲಕರ್ಣಿ ಸಾಕ್ಷಿ ನಾಶಪಡಿಸಿದ್ದಾರೆ. ಈ ಸಂಬಂಧ ಮರು ತನಿಖೆ ನಡೆಸುವಂತೆ ಗುರುನಾಥಗೌಡರ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಇವರ ಮನವಿ ಪುರಸ್ಕರಿಸಿರುವ ನ್ಯಾಯಾಲಯ ಇದೀಗ ಸಾಕ್ಷಿ ನಾಶ ಪ್ರಕರಣದ ಮರು ತನಿಖೆ ನ್ಯಾಯಾಲಯ ಇದೀಗ ಸಾಕ್ಷಿ ನಾಶ ಪ್ರಕರಣದ ಮರು ತನಿಖೆ ನಡೆಸುವಂತೆ ಆದೇಶ ಮಾಡಿದೆ.

ಒಂದೆಡೆ ಧಾರವಾಡ ಜಿಲ್ಲಾ ಪ್ರವೇಶಕ್ಕೆ ಅನುಮತಿ ಸಿಗದೇ ಜಿಲ್ಲೆಯಿಂದ ಹೊರಗಡೆ ಇರುವ ಶಾಸಕ ವಿನಯ್ ಕುಲಕರ್ಣಿಯವರಿಗೆ ಇದೀಗ ನ್ಯಾಯಾಲಯ ಮತ್ತೊಂದು ಶಾಕ್ ನೀಡಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಇದ್ದು, ಅವರ ಶಾಸಕರ ವಿರುದ್ಧವೇ ತನಿಖೆ ನಡೆಯುತ್ತಿದ್ದು, ಈ ಬಗ್ಗೆ ನಿಸ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಎಂದು ಗುರುನಾಥಗೌಡ ಗೌಡರ ಆಗ್ರಹಿಸಿದ್ದಾರೆ.

Tags: