Uncategorized

ಬೆಳಗಾವಿಯಲ್ಲಿ ಹಿಂದೂ ಮುಸ್ಲಿಂ ಭಾವೈಕತೆಯಿಂದ ಈದ್ ಮಿಲಾದ್ ಆಚರಿಸುತ್ತೇವೆ:ಶಾಸಕ ರಾಜು ಶೇಠ

Share

ಬೆಳಗಾವಿಯ ಬಾರಾ ಇಮಾಮ ಮೊಹಲ್ಲಾ ಮಾಳಿ ಗಲ್ಲಿ ವತಿಯಿಂದ ಈದ್ ಮಿಲಾದ್ ಪ್ರಯುಕ್ತ ಬೃಹತ್ ಶೋಭಾ ಯಾತ್ರೆ ಆಯೋಜಿಸಲಾಗಿತ್ತು

ಮುಸ್ಲಿಂರ ಅತಿ ದೊಡ್ಡ ಹಬ್ಬ ಈದ್ ಮಿಲಾದ ರಾಜ್ಯದಲ್ಲಿ ಅನೇಕ ಸ್ಥಳಗಳಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಆದರೆ ಬೆಳಗಾವಿ ನಗರದಲ್ಲಿ ಮುಸ್ಲಿಂ ಭಾಂದವರು ವಿಶೇಷ ವಾಗಿ ಆಚರಿಸುತ್ತಾರೆ ಕಾರಣ ಈದ್ ಮಿಲಾದ್ ಹಬ್ಬ ಗಣೇಶನ ವಿಸರ್ಜನೆ ದಿನ ಇದ್ದರು ಕೂಡಾ ಹಿಂದೂ ಧರ್ಮದ ಪವಿತ್ರ ಹಬ್ಬ ಯಶಸ್ವಿಯಾಗಿ ನಡೆಬೇಕೆಂಬ ಮಹದಾಶೆಯಿಂದ ಮುಸ್ಲಿಂರು ಹಬ್ಬವನ್ನು ಮುಂದೂಡಿ ಇವತ್ತು ಆಚರಿಸಿದ್ದು ವಿಶೇಷವಾಗಿತ್ತು.
ನಗರದ ಪೋರ್ಟ್ ರೋಡ,ಬಸ ನಿಲ್ದಾಣ ,ಆರ್ ಟಿ ಓ ವೃತ್ತ ,ಕಾಲೇಜು ರೋಡ ,ಸಂಬಾಜಿ ವೃತ್ತ ,ಕ್ಯಾಂಪ್ ರೋಡ ಸೇರಿದಂತೆ ಹಲವೆಡೆ ಬೃಹತ್ ಶೋಭಾ ಯಾತ್ರೆ ಮೆರವಣಿಗೆ ಮೆರವಣಿಗೆ ಮಾಡಲಾಯಿತು

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ರಾಜು ಶೇಠ್ ಬೆಳಗಾವಿ ಮೊದಲಿಂದಲೂ ವಿವಿಧತೆಯಲ್ಲಿ ಏಕತೆ ಕಾಣುವ ಜಿಲ್ಲೆಯಾಗಿದೆ ನಮ್ಮ ಮುಸ್ಲಿಂರು ಹಿಂದೂಗಳು ಯಾವುದೇ ಹಬ್ಬಗಳನ್ನು ಅದ್ದೂರಿಯಿಂದ ಅಷ್ಟೇ ಬಾವೈಕತೆಯಿಂದ ಆಚರಿಸುತ್ತಾರೆ ನಮ್ಮ ಭಾಗದಲ್ಲಿ ಇನ್ನು ವರೆಗೂ ಹಿಂದೂ ಮುಸ್ಲಿಂ ರ ನಡುವೆ ವೈಶ್ಯಮ್ಯ ಬಂದಿಲ್ಲ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಫಿರೋಜ್ ಶೇಠ ಅನೇಕ ವರ್ಷಗಳಿಂದ ಪವಿತ್ರ ಹಬ್ಬಗಳನ್ನು ಎಲ್ಲರು ಸೇರಿ ಆಚರಿಸುತ್ತಿದೆ ಸಹೋದರರೆಲ್ಲ ಇವತ್ತು ತುಂಬಾ ಪ್ರೀತಿಯಿಂದ ಈದ್ ಮಿಲಾದ್ ಆಚರಣೆ ಮಾಡುತ್ತಿದ್ದಾರೆ ಸಹೋದರ ಶಾಸಕ ರಾಜು ಶೇಠ್ ಹಾಗು ನಮ್ಮ ಕುಟುಂಬದ ಮೇಲೆ ಎಲ್ಲರ ಆಶೀರ್ವಾದವಿದೆ ಎಂದರು.

ಮಾಜಿ ಕಾರ್ಪೊರೇಟರ್ ರಂಜಿತ್ ಚವ್ವಾಣ ಮಾತನಾಡುತ್ತಾ ಸರ್ವರಿಗೂ ಈದ್ ಮಿಲಾದ್ ಹಬ್ಬದ ಶುಭಕೋರಿ ಇವತ್ತು ಪೋರ್ಟ ರೋಡ ಚನ್ನಮ್ಮ ವೃತ್ತದಿಂದ ನಮ್ಮೆಲ್ಲ ಯುವಕರು ಹಿಂದೂಗಳು ಒಗ್ಗೂಡಿ ಬೃಹತ್ ಶೋಭಾ ಯಾತ್ರೆ ಮಾಡಿದ್ದೇವೆ ಮಾಜಿ ಶಾಸಕ ಫಿರೋಜ್ ಶೇಠ ಶಾಸಕ ರಾಜು ಶೇಠ್ ಎಲ್ಲರು ಸಹಕರಿಸಿದ್ದಾರೆ.

ಈ ಸಂದರ್ಭದಲ್ಲಿ ಡಿಸಿಪಿ ರೋಹನ್ ಜಗದೀಶ, ಮುಪ್ತಿ ಮನುಜರ್ ಅಹ್ಮದ್, ಸಂಜಯ ಬಂಡಾರಿ ವಿಕಾಸ ಕಲಘಟಗಿ ಸಂತೋಷ ಪೇಡ್ನೆಕಾರ ,ದೀಪಕ ,ನಿಶಾರ ಹಜರತ್ ,ರಸೂಲಪಿ ರಜೇಡಾ ,ಅಕ್ಬರ್ ಬಾಗವಾನ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳು ,ಹಿಂದೂ ಮುಸ್ಲಿಂ ಬಾಂದವರು ಉಪಸ್ಥಿತರಿದ್ದರು

Tags: