ಪ್ರತಿಭಾವಂತ ಉದ್ಯೋಗಾಕಾಂಕ್ಷಿ ಉತ್ತಮ ಔದ್ಯೋಗಿಕ ನೆಲೆ ಒದಗಿಸುವ ನಿಟ್ಟಿನಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಅ.೬ ಮತ್ತು ೭ ರಂದು ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ವಿದ್ಯಾಗಿರಿ ಕಾಲೇಜು ಆವರಣದಲ್ಲಿ ಆಳ್ವಾಸ್ ಪ್ರಗತಿ-೨೦೨೩ ಉದ್ಯೋಗ ಮೇಳೆ ಆಯೋಜಿಸಲಾಗಿದೆ ಎಂದು ಆಳ್ವಾಸ್ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರಸಾದ ಶೆಟ್ಟಿ ತಿಳಿಸಿದರು.
ನಗರದ ಖಾಸಗಿ ಹೊಟೇಲ್ ನಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2007 ರಿಂದ ಆಳ್ವಾಸ ಶಿಕ್ಷಣ ಪ್ರತಿಷ್ಠಾನವು ಉದ್ಯೋಗ ಮೇಳ ಆಯೋಜಿಸಿತ್ತಿದೆ. ಈ ಭಾಗದ ಆಕಾಂಕ್ಷಿಗಳು ಹಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಯೋಜನ ಪಡೆಯಬೇಕು. 13 ನೇ ಉದ್ಯೋಗ ಮೇಳದಲ್ಲಿ ಬಿಎಫ್ಎಸ್ಐ, ಐಟಿ ಕಂಪನಿಗಳು, ಉತ್ಪಾದನೆ, ಮಾರಾಟ ಮತ್ತು ಚಿಲ್ಲರೆ, ಹಾಸ್ಪಿಟಾಲಿಟಿ, ಟೆಲಿಕಮ್ಯುನಿಕೇಶನ, ಆರೋಗ್ಯ, ಮಾಧ್ಯಮ, ನಿರ್ಮಾಣ, ಶಿಕ್ಷಣ, ಸರಕಾರೇತರ ಸಂಸ್ಥೆಗಳು ಸೇರಿದಂತೆ 200 ಕ್ಕೂ ಹೆಚ್ಚಿನ ಕಂಪನಿಗಳು ಪಾಲ್ಗೊಳ್ಳಲಿವೆ ಎಂದು ಮಾಹಿತಿ ನೀಡಿದರು.
ಈಗಾಗಲೇ 182 ಕಂಪನಿಗಳು ನೋಂದಾಯಿಸಿಕೊಂಡಿದ್ದು, ಹೆಚ್ಚುವರಿಯಾಗಿ 18 ಕಂಪನಿಗಳು ಉದ್ಯೋಗಾವಕಾಶ ನೀಡಲಿವೆ. ಪದವೀಧರರು, ಸ್ನಾತಕೋತ್ತರ ಪದವೀಧರರಿಗೆ ಐಸಿಐಸಿಐ, ಆ್ಯಕ್ಸಿಸ್, ಉದ್ಧವನ್ ಫೈನಾನ್ಸ್ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್, ಕರೂರ್‌ವೈಶ್ಯ ಬ್ಯಾಂಕ್ ನಂತಹ ಪ್ರತಿಷ್ಠಿತ ಬ್ಯಾಂಕ್‌ಗಳು ಬಹು ಅವಕಾಶಗಳನ್ನು ನೀಡುವ ಭರವಸೆ ನೀಡಿವೆ. ಉತ್ಪಾದನಾ ವಲಯದ ಎಸ್‌ಡಿಸೈನರ್, ವೊಲ್ಲೊ ಸನ್ನರಾ ಎಂಜಿನಿಯರಿಂಗ್ ಲಿಮಿಟೆಡ್, ಭೌರೆಸಿಯಾ ಎಮಿಷನ್ ಕಂಟ್ರೋಲ್ ಟೆಕ್ನಾಲಜೀಸ್ ಇಂಡಿಯಾ ಪ್ರೈ.ಲಿ, ಮೈನಿ ಪ್ರಿಸಿಷನ್ ಇಂಡಿಯಾ ಪ್ರೈ.ಲಿ, ಸ್ವಿಚ್‌ಗೇರ್ ಆ್ಯಂಡ್ ಕಂಟ್ರೋಲ್ ಟೆಕ್ನಿಕ್ಸ್ ಸುಮಾರು 200 ಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ಬಿಇ ಮೆಕ್ಯಾನಿಕಲ್ ಎಂಜಿನಿಯರಿಂಗ್ ಆಕಾಂಕ್ಷಿಗಳಿಗೆ ನೀಡಲಿದೆ. ಗಲ್ಫ್ ಬಹುರಾಷ್ಟ್ರೀಯ ಕಂಪನಿಗಳು ಆಳ್ವಾಸ್ ಪ್ರಗತಿಯಲ್ಲಿ ಪಾಲ್ಗೊಳ್ಳಲಿವೆ. ಎಕ್ಸ್ ಪರ್ಟಸ್ಟ್ ಸಿವಿಲ್ ಮತ್ತು ಮೆಕ್ಯಾನಿಕಲ್ ಎಂಜಿನಿಯರ್‌ಗಳನ್ನು ಸೌದಿ ಅರೇಬಿಯಾಕ್ಕೆ, ಬುರ್ಜೀಲ್ ಹೋಲ್ಡಿಂಗ್ಸ್ ವೈದ್ಯರು, ನರ್ಸ್ ಮತ್ತು ವೈದ್ಯಕೀಯ ತಂತ್ರಜ್ಞರನ್ನು ಒಮನ್‌ಗೆ ಹಾಗೂ ಭವಾನಿ ಶಿಪ್ಪಿಂಗ್ ಪ್ರೈ.ಲಿ ನಲ್ಲಿ ಹಲವಾರು ಹುದ್ದೆಗಳ ಅವಕಾಶವನ್ನು ನೀಡುತ್ತಿದೆ. ಟೊಯೊಟೊ ಇಂಡಸ್ಟ್ರೀಸ್ ಎಂಜಿನ್ ಇಂಡಿಯಾ ಪ್ರೈ.ಲಿ. ಹೋಂಡಾ, ಕೋಟಿನ್ ಮಿಂಡಾ, ಐಟಿಐ ಮತ್ತು ಓರ್ಲಿರಾವ್ ಬವೇರ್ಸ್ ಇಂಡಿಯಾ ಪ್ರೈ.ಲಿ, ವೊನೋ ಒ ಸ್ಮಿತ್ ಇಂಡಿಯಾ ವಾಟರ್‌ಪ್ರೊಡಕ್ಟ್ ಪ್ರೈ.ಲಿ, ಮತ್ತಿತರ ಕಂಪೆನಿಗಳು ಡಿಪ್ಲೊಮಾ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಿದೆ. ವೊಲ್ಲೋ ಟ್ರಕ್ಸ್ ಸನ್ ಎಲೆಕ್ಟ್ರಿಸಿನ್ ಎಂಜಿನಿಯರ್‌ಗಳಿಗೆ ಉದ್ಯೋಗ ಕಲ್ಪಿಸಲಿದೆ.
ವಸತಿ ವ್ಯವಸ್ಥೆ : ಹೊರ ಜಿಲ್ಲೆಗಳಿಂದ ಬರುವ ಉದ್ಯೋಗಾಕಾಂಕ್ಷಿಗಳಿಗೆ ಅ.5 ರಿಂದ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಅಭ್ಯರ್ಥಿಗಳು https://alvaspragati.com/ CandidateRegiaration – Page ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು ಎಂದು ಪ್ರಸಾದ ಶೆಟ್ಟಿ ತಿಳಿಸಿದರು. ಈ ವೇಳೆ ಆಳ್ವಾಸ್ ಪ್ರಗತಿ ಸಂಯೋಜಕ ಡಾ.ಗುರುಶಾಂತ ವಗ್ಗರ್ , ವಿಠ್ಠಲ ಹಗಡೆ ಉಪಸ್ಥಿತರಿದ್ದರು