Uncategorized

ಮೋದಿ ಕರೆ ನೀಡಿದ ಸ್ವಚ್ಚತಾ ಅಭಿಯಾನಕ್ಕೆ ಶಾಸಕ ರಮೇಶ ಜಾರಕಿಹೋಳಿ ಚಾಲನೆ

Share

ದೇಶಾದ್ಯಂತ ಶ್ರಮದಾನ ಮಾಡಲು ಪ್ರಧಾನಿ ಮೋದಿ ಕರೆ ನೀಡಿದ ಹಿನ್ನಲ್ಲೆಯಲ್ಲಿ ಗೋಕಾಕ ಶಾಸಕ ರಮೇಶ ಜಾರಕಿಹೋಳಿಯವರು ಕೊಣ್ಣೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದರು
ಗೋಕಾಕ ಶಾಸಕ ರಮೇಶ ಜಾರಕಿಹೋಳಿಯವರು ಕೊಣ್ಣೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದರು. ಪುರಸಭೆ ಕೊಣ್ಣೂರ ,ಆದಾಯ ತೆರಿಗೆ ಇಲಾಖೆ ಗೋಕಾಕ ಸಿಬ್ಬಂದಿಗಳು ಮತ್ತು ಗೋಕಾಕ ಪಾಲ್ಸ್ ಮಿಲ್ಲ ಕಾರ್ಮಿಕರು . ಸ್ವಯಂ ಪ್ರೇರಿತರಾಗಿ ಪ್ರವಾಸಿ ತಾಣವಾದ ಗೋಕಾಕ ಪಾಲ್ಸ್ ಜಲಪಾತದ ಹತ್ತಿರ,ಕಾರ ಪಾರ್ಕಿಂಗ್ ,ಪುರಾತನ ಕಾಲದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡರು.
ಕಾರ್ಯಮನ್ನು ಉದ್ದೇಶಿಸಿ ಕೊಣ್ಣೂರ ಪುರಸಭೆಯ ಮುಖ್ಯಾಧಿಕಾರಿ ಶಿವಾನಂದ ಹೀರೆಮಠ ಮಾತನಾಡಿ ಕೇವಲ‌ ಪೌರಕಾರ್ಮಿಕರಿಂದಲೆ ಸ್ಚಚ್ಚತಾ ಕಾರ್ಯ ಆಗಬೇಕೆಂದರೆ ಅದು ಸಾದ್ಯವಾಗದ ಮಾತು ಅದಕ್ಕೆ ಸಾರ್ವಜನಿಕರು ತಾವೆ ಉತ್ಪತ್ತಿ ಮಾಡುವ ಒಣ ಕಸ,ಹಸಿ ಕಸವನ್ನು ತಾವೆ ವಿಂಗಡಿಸಿ ಮನೆಮನೆಗೆ ಬರುವ ಪೌರಕಾರ್ಮಿರಿಗೆ ನೀಡಿ ಸಹಕರಿಸಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಪುರಸಭೆಯ ಸಿಬ್ಬಂದಿಗಳು,ಆದಾಯ ಇಲಾಖೆಯ ಸಿಬ್ಬಂದಿಗಳು ಮತ್ತು ಗೋಕಾಕ ಮಿಲ್ ಕಾರ್ಮಿಕರು ಭಾಗಿಯಾಗಿದ್ದರು.

Tags: