ಮಕ್ಕಳಿಗೆ ಒತ್ತಾಯದ ಕಲಿಕೆಗೆ ಒತ್ತು ನೀಡದೆ ಸ್ಫೂರ್ತಿ ತುಂಬುವ ಶಿಕ್ಷಕರಾಗಿ ಶಿಕ್ಷಣ ಕ್ಷೇತ್ರ ಸಂಪನ್ನಗೊಳಿಸಿ ಎಂದು ನಿವ್ರತ್ತ ಪ್ರಾದೇಶಿಕ ಆಯುಕ್ತರಾದ ಮಹಾಂತೇಶ ಹಿರೇಮಠ ಅವರು ಹೇಳಿದರು.
ಮಾರಿಹಾಳ ಗ್ರಾಮದಲ್ಲಿ ಜರುಗಿದ ನಾಗಪ್ಪ ಮಿಸಾಳೆ ಗುರುಗಳ ಪ್ರತಿಷ್ಠಾನದಿಂದ ಆಯೋಜಿಸಿದ ಜೀವನ ಗೌರವ ಪುರಸ್ಕಾರ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರಧಾನ ಹಾಗು ಸಾಧಕರ ಅಭಿನಂದನಾ ಸಮಾರಂಭ ದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಶಿಕ್ಷಕರನ್ನು, ಸಾಧಕರನ್ನು ಪ್ರತಿಷ್ಠಾನದ ಪರ ಸನ್ಮಾನಿಸಿ ಗೌರವಿಸಿ ಮಾತನಾಡಿದರು
ನಮ್ಮ.ಸೇವೆಯಲ್ಲಿ ಪ್ರಾಮಾಣಿಕತೆಯೊಂದಿಗೆ ನಿಷ್ಠೆ, ದಕ್ಷತೆ, ಅತ್ಯವಶ್ಯಕ. ಮಕ್ಕಳಲ್ಲಿ ಕಲಿಕಾ ಆಸಕ್ತಿ ಮತ್ತು, ಸ್ಫೂರ್ತಿ ತುಂಬುವವರು ಮಾತ್ರ ನಿಜವಾದ ಶಿಕ್ಷಕರು ಎಂದರಲ್ಲದೆ, ಎಂಜಿನೀಯರರು, ವೈದ್ಯರು, ಸೇರಿದಂತೆ ಐ.ಎ.ಎಸ್, ಐ.ಪಿ.ಎಸ್ ಅಧಿಕಾರಿಗಳನ್ನು, ಮಾಡುವ ಶಕ್ತಿ ಕೇವಲ. ಶಿಕ್ಷಕರಲ್ಲಿದೆ. ಈ. ನಿಟ್ಟಿನಲ್ಲಿ ಮಿಸಾಳೆ ಪರಿವಾರ ತಮ್ಮ.ತಮ್ಮ ತಂದೆ ನಾಗಪ್ಪ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪಿಸಿ, ಆ ಪ್ರತಿಷ್ಠಾನದ ಮೂಲಕ. ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ. ಶಿಕ್ಷಕರನ್ನು, ಸಾಧಕರನ್ನು ಗುರುತಿಸಿ ಗೌರವಿಸುವ ಇವರ ಸಮಾಜ ಸೇವೆ ಅತ್ಯಂತ ಶ್ಲ್ಯಾಘನೀಯ ಎಂದರು.
ಉದ್ಘಾಟಕರಾಗಿದ್ದ. ಶಿವಾಜಿ ಕಾಗಣೀಕರ ಮಾತನಾಡಿ, ಮಿಸಾಳೆ ಅವರ ಮನೆತನದ. ಸಮಾಜಮುಖಿ ಸೇವೆ ಇತರರಿಗೆ ಸ್ಪೂರ್ತಿಯಾಗಿದೆ ಎಂದರಲ್ಲದೆ, ನಾನು ಬದುಕಿನುದ್ದಕ್ಕೂ ಸಮಾಜದ. ಸೇವೆ ಮಾಡುವೆ ಎಂದರು.ಬೈಟ್
ಅತಿಥಿಗಳಾಗಿದ್ದ, ರಾಮು ಗುಗವಾಡ . ರಾಜು ಸೊಗಲಿ , ಎಮ್. ಬಿ.ಮಾನಕೋಜಿ, ಆರ್.ವ್ಹಿ.ಕುಲಕರ್ಣಿ, ದಿ.ಜಿ.ಬೇವಿನಕೊಪ್ಪಮಠ ಮುಂತಾದವರು ಮಾತನಾಡಿದರು.
ಈ ಸಂದರ್ಭದಲ್ಲಿ ಸುರೇಖಾ ಮಿಸಾಳೆ ರಮೇಶ ಮಿಸಾಳೆ, ವಿಠ್ಠಲ ಮಿಸಾಳೆ, ರಾಮಚಂದ್ರ ಚವ್ಹಾಣ, ವಿಷ್ಣುಪಂತ ಮಿಸಾಳೆ, ಡಾ. ಮಿಸಾಳೆ, ಶಾಮಲಾ ದಳವಾಯಿ, ಬಸು ಚವಗುಲೆ, ಸುಭಾಷ ಓವುಳಕರ, ವೀರನ ಗೌಡ. ಈಶ್ವರಪ್ಪಗೋಳ, ಡಾ. ಡಿ.ಎನ್. ಮಿಸಾಳೆ ಆನಂದ ತುಪ್ಪದ, ಜಗದೀಶ ಮಠದ ಸೇರಿದಂತೆ ಶಿಕ್ಷಕರು, ಅಭಿಮಾನಿಗಳು, ಗ್ರಾಮದ ಯುವಕರು, ವಿವಿಧ ಸಂಘಗಳ ಪ್ರತಿನಿಧಿಗಳು ಮಹಿಳೆಯರು ಉಪಸ್ಥಿತರಿದ್ದರು
ವರದಿ, ಸುರೇಶ