ಬೆಳಗಾವಿಯ ಸದಾಶಿವನಗರ ಲಿಂಗಾಯತ ಸ್ಮಶಾನ ಭೂಮಿಯಲ್ಲಿ ವಿದ್ಯುತ ದೀಪ ಇಲ್ಲದೇ ಅವ್ಯವಸ್ಥೆಯ ಆಗರವಾಗಿದೆ
ಸ್ಮಾಟ್ ಸಿಟಿ ಬೆಳೆಗಾವಿಯ ಸದಾಶಿವನಗರ ಲಿಂಗಾಯತ ಸ್ಮಶಾನ ಭೂಮಿಯಲ್ಲಿ ಎರಡು ವರ್ಷಗಳಿಂದ ವಿದ್ಯುತ ದೀಪವಿಲ್ಲದೇ ಅವ್ಯವಸ್ಥೆಯ ತಾಣವಾಗಿದೆ ಎಂದು ಸ್ಥಳೀಯರು ಮಹಾನಗರ ಪಾಲಿಕೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು,
ಸ್ಥಳೀಯ ನಿವಾಸಿ ಶಂಕರ ಗುಳೇಸ್ ಮಾತುನಾಡಿ ಇದುವರೆಗೆ ಲೈಟ್ ರಿಪೇರಿ ಆಗಿಲ್ಲ ಯಾರಾದ್ರೂ ರಾತ್ರಿ ವೇಳೆ ಶವ ತೆಗದುಕೊಂಡು ಸ್ಮಶಾನ ಭೂಮಿಗೆ ಬಂದರೆ ತುಂಬಾನೇ ಸಮಸ್ಯೆಯಾಗುತ್ತೇದೆ ಲಿಂಗಾಯತ ಸ್ಮಶಾನ ಭೂಮಿ ಸುಧಾರಣೆ ಸಲುವಾಗಿ 3 ವರ್ಷದ ಹಿಂದೆ ಸರ್ಕಾರ ದಿಂದ 80 ಲಕ್ಷ ಮಂಜೂರಿ ಆಗಿತ್ತು , ಅಧಿಕಾರಿಗಳ ನೀರ್ಲಕ್ಷ್ಯಯಿಂದ ಇನ್ನೂ ಕಾಮಗಾರಿ ಆಗಿತೀಲ್ಲ ಎಂದು ಆರೋಪಿಸಿದರು ಒಂದು ವೇಳೆ ಈ ಕಾರ್ಯವನ್ನು ಸರಿಪಡಿಸದೆ ಹೋದರೆ ಲಿಂಗಾಯತ ಸಮಾಜ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಚ್ಚರಿಸಿದರು.