Uncategorized

ಹಿರಿಯ ನಾಗರಿಕರ ಹಿತರಕ್ಷಣೆಗೆ ಸಮಾಜ ಬದ್ದವಾಗಿರಬೇಕು:ಶಿವಮೂರ್ತಯ್ಯ ಹಿರೇಮಠ

Share

ಇಡೀ ಜೀವನವನ್ನು ಕುಟುಂಬ ರಕ್ಷಣೆ, ಸರಕಾರ, ಸಾಮಾಜಿಕ ಸೇವೆಯಲ್ಲಿ ಕಳೆಯುವ ಹಿರಿಯ ನಾಗರಿಕರ ಹಿತರಕ್ಷಣೆಗೆ ಸಮಾಜ ಬದ್ದವಾಗಿದ್ದು, ಹಿರಿಯರನ್ನು ಗೌರವಯುತವಾಗಿ ನೋಡಬೇಕು. ವಯೋವೃದ್ದರಿಗೆ ಸರಕಾರವು ಕಲ್ಪಸಿರುವ ಉತ್ತಮ ಚಿಕಿತ್ಸೆ, ಔಷಧಿ, ಆರ್ಥಿಕ ಸಹಾಯದ ಯೋಜನೆಗಳನ್ನು ಹೆಚ್ಚಿಸಬೇಕು ಎಂದು ಧಾರವಾಡ ಕೇಂದ್ರ ಕಾರಾಗೃಹದ ಬಾಲ ಅಪರಾಧಿಗಳ ಶಾಲೆಯ ನಿವೃತ್ತ ಶಿಕ್ಷಕ, 87 ವರ್ಷ ವಯಸ್ಸಿನ ಹಿರಿಯ ನಾಗರಿಕ ಶಿವಮೂರ್ತಯ್ಯ ಜೆ.ಹಿರೇಮಠ ಹೇಳಿದರು.

ಧಾರವಾಡ ವೀರಶೈವ ಜಂಗಮ ಸಂಸ್ಥೆಯಿಂದ ಜಿ.ಜಿ.ಹಿರೇಮಠ ಅವರ ಸತ್ಯಕುಂಜ ನಿವಾಸದ ಆವರಣದಲ್ಲಿ ಹಿರಿಯ ನಾಗರಿಕರ ದಿನಾಚರಣೆ ನಿಮಿತ್ತ ಆಯೋಜಿಸಿದ್ದ ಸಂಸ್ಥಾಪಕ ಹಿರಿಯ ಸದಸ್ಯರ ಸನ್ಮಾನ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ, ಮಾತನಾಡಿದರು.
ಸನ್ಮಾನ ಸ್ವೀಕರಿಸಿದ ಇನ್ನೊರ್ವ 95 ವಯಸ್ಸಿನ ಹಿರಿಯ ಸದಸ್ಯ ಜಿ.ಜಿ.ಹಿರೇಮಠ ಅವರು ಮಾತನಾಡಿ, ಹಿರಿಯ ನಾಗರಿಕರು ಎಂದು ಗುರುತಿಸಿ, ನಮ್ಮ ಮನೆಯವರೆಗೆ ಬಂದು ಗೌರವಿಸುವ ಸಂಸ್ಕೃತಿ, ಸಂಸ್ಕಾರವೇ ಭಾರತೀಯರ ವಿಶೇಷತೆ ಆಗಿದೆ. ಮತ್ತು ಇಂತ ಕೌಟಂಬಿಕ ಸಾಮರಸ್ಯದ ಮೌಲ್ಯಗಳನ್ನು ನಮ್ಮಸಮಾಜ ಜಗತ್ತಿಗೆ ಎತ್ತಿ ತೋರಿಸಿದೆ.ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಎಸಿಪಿ ಜಿ.ಆರ್.ಹಿರೇಮಠ, ಕೃಷಿ ಇಲಾಖೆ ನಿವೃತ್ತ ಅಧಿಕಾರಿಗಳಾದ ಮೃತ್ಯುಂಜಯ ಎಸ್. ಕೋರಿಮಠ, ಸಿ.ಎಸ್.ವಿರಕ್ತಮಠ, ಕವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ಜಗದೀಶ ಕಾಡದೇವರಮಠ, ಎಸ್.ಎಸ್.ಹಿರೇಮಠ, ಸಹ ಶಿಕ್ಷಕಿಯರಾದ ಸುಮಿತಾ ಹಿರೇಮಠ, ದ್ರಾಕ್ಷಾಯಿಣಿ ಹಿರೇಮಠ ಸೇರಿದಂತೆ ಜಂಗಮ ಸಂಸ್ಥೆಯ ಪದಾಧಿಕಾರಿಗಳು ಮಾತನಾಡಿದರು.
ಕಾರ್ಯಕ್ರಮದಲ್ಲಿ ನಿವೃತ್ತ ತಹಸಿಲ್ದಾರ ವಿ.ಎಚ್.ಕಲ್ಮಠ, ನಿವೃತ್ತ ಕೃಷಿ ಅಧಿಕಾರಿ ಎಂ.ಕೆ.ಹಿರೇಮಠ, ವೀಣಾ ಕಲ್ಮಠ, ಶ್ವೇತಾ ಪ್ರವೀಣ ಕಲ್ಮಠ, ರತ್ನಾ ಬಸವರಾಜ ಕುಲಕರ್ಣಿ, ಭಾರತಿ ಮಹೇಶ ಹಿರೇಮಠ, ಸುಶ್ಮಿತಾ ಉಮೇಶ ಹಿರೇಮಠ, ಶ್ವೇತಾ ವಿಶ್ವನಾಥ ಹಿರೇಮಠ, ನಿರ್ಮಲಾ ಮಂಜೇಶ್ವರ ತೆಗ್ಗಿನಮಠ, ಸುವರ್ಣಾ ಸುರೇಶ ತಾಳಿಕೋಟಿ ಹಾಗೂ ಸನ್ಮಾನಿತರ ಕುಟುಂಬ ಸದಸ್ಯರು ಸೇರಿದಂತೆ ಇತರರು ಇದ್ದರು.

Tags:

Society should be committed to protecting the welfare of senior citizens Shivamurthaiah Hiremath