ಹುಕ್ಕೇರಿ ತಾಲೂಕಿನ ಸಂಕೇಶ್ವರ ನಗರದಲ್ಲಿ ನಿಡಸೋಸಿ ಮಠದ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ಒಂದು ವರ್ಷದ ವರೆಗೆ ಸ್ವಚ್ಚ ಸಂಕೇಶ್ವರ ನಿರ್ಮಾಣಕ್ಕೆ ಕರೆ ನೀಡಿದ ಹಿನ್ನಲೆಯಲ್ಲಿ ಇಂದು ಅವರ ದಿವ್ಯ ಸಾನಿದ್ಯದಲ್ಲಿ ಒಂದನೆ ಹಂತದ ಉದ್ಘಾಟನಾ ಸಮಾರಂಭ ಜರುಗಿತು.
ಸಂಕೇಶ್ವರ ನಗರದ ಬಸ್ ನಿಲ್ದಾಣದಲ್ಲಿ ಆಯೋಜಿಸಿದ ಕಾರ್ಯಕ್ರಮವನ್ನು ಶಾಸಕ ನಿಖಿಲ್ ಕತ್ತಿ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು
ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ನಿಡಸೋಸಿ ಮಠದ ನೂತನ ಸ್ವಾಮಿಜಿ ನಿಜಲಿಂಗೇಶ್ವರ ಸ್ವಾಮಿಜಿ ಮಹಾತ್ಮಾ ಗಾಂಧಿಜಿ ಯವರ 134 ನೇ ಜನ್ಮ ದಿನದ ಅಂಗವಾಗಿ ಶ್ರೀ ಮಠದಿಂದ ಸ್ವಚ್ಚ ಸಂಕೇಶ್ವರ ಅಭಿಯಾನ ಹಮ್ಮಿಕೊಂಡು ಪ್ರತಿ ರವಿವಾರ ಪಟ್ಟಣದ ವಿವಿಧ ಭಾಗಗಳಲ್ಲಿ ನಾಗರಿಕರ ಮತ್ತು ವಿದ್ಯಾರ್ಥಿಗಳ ಸಹಕಾರದುಂದ ಶ್ರಮದಸನ ಮಾಡುವ ಮೂಲಕ ಜಾಗ್ರತಿ ಮೂಡಿಸಲಾಗುವದು ಕಾರಣ ಎಲ್ಲರೂ ಕೈ ಜೋಡಿಸಿ ಯಶಸ್ವಿಯಾಗಿ ನಿರ್ವಹಿಸ ಬೇಕು ಎಂದರು
ವೇದಿಕೆ ಮೇಲೆ ಶಾಸಕ ನಿಖಿಲ್ ಕತ್ತಿ, ಮಯಖಂಡರಾದ ಅಪ್ಪಾಸಾಹೇಬ ಶಿರಕೋಳಿ, ರಾಜೇಂದ್ರ ಪಾಟೀಲ, ಬಂಡು ಹತನೂರೆ, ಅಮರ ನಲವಡೆ, ಗಜಾನನ ಕೋಳ್ಳಿ, ಮಹಾದೇವ ನಾಗರಾಳೆ, ಸಂಜಯ ಶಿರಕೋಳಿ, ಸುನಿಲ ಪರ್ವತರಾವ ಅಜೀತ ಕರಜಗಿ, ಡಾ, ಜೈ ಪ್ರಕಾಶ ಕರಜಗಿ ಪಿ ಎಸ್ ಆಯ್ ನರಸಿಂಹರಾಜು ಉಪಸ್ಥಿತರಿದ್ದರು.
ನಂತರ ಪಟ್ಟಣದ ಹಳೆ ಪಿ ಬಿ ರಸ್ತೆ,ಬಸ್ ನಿಲ್ದಾಣದಲ್ಲಿ ಶ್ರಮದಾನ ಮಾಡುವ ಮೂಲಕ ಸ್ವಚ್ಚತೆ ಕೈಗೊಂಡರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸ್ವಚ್ಚ ಭಾರತ ನಿರ್ಮಾಣಕ್ಕೆ ಕರೆ ನಿಡಿವೆ ಆದರೆ ಕಾಟಾಚಾರಕ್ಕೆ ಮಾತ್ರ ಗಾಂಧಿ ಜಯಂತಿ ಯಂದು ಅಧಿಕಾರಿಗಳು ಜನ ಪ್ರತಿನಿಧಿಗಳು ಪೋಟೋ ಪೋಸ್ ಕೋಡುತ್ತಾರೆ ಆದರೆ ಯಾವುದೇ ಪ್ರಯೋಜನೆ ಆಗಿಲ್ಲಾ ಆದರೆ ಇಂದು ಹುಕ್ಕೇರಿ ತಾಲೂಕಿನ ನಿಡಸೋಸಿ ಮಠದಿಂದ ಶ್ರೀ ಗಳು ಸ್ವಚ್ಚ ಸಂಕೇಶ್ವರ ನಿರ್ಮಾಣಕ್ಕೆ ಒಂದು ವರ್ಷದ ವರೆಗೆ ಪ್ರತಿ ರವಿವಾರ ಶ್ರಮದಾನಕ್ಕೆ ಕರೆ ನೀಡಿದ್ದಾರೆ ಈಗಲಾದರೂ ಜನರು ಜಾಗ್ರತೆ ವಹಿಸಿ ಪರಿಸರ ಸ್ವಚ್ಚತೆಗೆ ಸ್ಪಂದಿಸುತ್ತಾರೆಯೋ ಕಾದು ನೋಡೋಣ .
ರಾಜು ಬಾಗಲಕೋಟಿ
ಇನ್ ನ್ಯೂಸ್ ಹುಕ್ಕೇರಿ.