Uncategorized

ಸ್ವಚ್ಚ ರಾಷ್ಟ್ರ ನಿರ್ಮಾಣಕ್ಕೆ ಪಣತೋಡಿ – ನ್ಯಾಯಾಧೀಶ ಕೆ ಎಸ್ ರೋಟ್ಟೆರ

Share

ಸ್ವಚ್ಚ ಭಾರತ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಹುಕ್ಕೇರಿ ಹಿರಿಯ ನ್ಯಾಯಾಧೀಶ ಕೆ ಎಸ್ ರೋಟ್ಟೆರ ಹೇಳಿದರು.
ಹುಕ್ಕೇರಿ ನಗರದಲ್ಲಿ ಗಾಂಧಿ ಜಯಂತಿ ಅಂಗವಾಗಿ ಹಮ್ಮಿಕೊಂಡ ಶ್ರಮದಾನದಲ್ಲಿ ಹಿರಿಯ ನ್ಯಾಯಾಧೀಶ ಕೆ ಎಸ್ ರೋಟ್ಟೆರ ಮತ್ತು ಕಿರಿಯ ನ್ಯಾಯಾಧೀಶ ಕೆ ಅಂಬಣ್ಣ ಮತ್ತು ನ್ಯಾಯವಾದಿಗಳು ಭಾಗವಹಿಸಿ ಕೋರ್ಟ ಆವರಣದಲ್ಲಿ ಗಿಡಗಂಟಿ ಕಸ ಸ್ವಚ್ಚ ಮಾಡುವ ಮೂಲಕ ಸ್ವಚ್ಚಾತಾ ಹಿ ಸೇವಾ ಅಭಿಯಾನ ನೆರವೇರಿಸಿದರು.

ನಂತರ ಮಾದ್ಯಮಗಳೊಂದಿಗೆ ಮಾತನಾಡುತ್ತಾ ನ್ಯಾಯಾಧೀಶರು ಹುಕ್ಕೇರಿ ನಗರದಲ್ಲಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಸ್ವಚ್ಚತಾ ಕಾರ್ಯ ಮಾಡುವ ಮೂಲಕ ಸದೃಡ ಭಾರತ ನಿರ್ಮಾಣಕ್ಕೆ ಒಳ್ಳೆಯ ಆರೋಗ್ಯ ಮುಖ್ಯವಾಗಿದೆ ಕಾರಣ ಎಲ್ಲರೂ ತಮ್ಮ ಪರಿಸರ ಸ್ವಚ್ಚತೆಗೆ ಆದ್ಯತೆ ಬಲಿಷ್ಟ ಭಾರತ ನಿರ್ಮಾಣ ಮಾಡೋಣ ಎಂದರು

ನ್ಯಾಯವಾದಿಗಳ ಘಟಕದ ಅದ್ಯಕ್ಷ ಆರ್ ಪಿ ಚೌಗಲಾ ಮಾತನಾಡಿ ಹೈ ಕೋರ್ಟ ಆದೇಶದಂತೆ ಇಂದು ಹುಕ್ಕೇರಿ ನಗರದಲ್ಲಿ ಸ್ವಚ್ಚತಾ ಕಾರ್ಯ ನೇರವೇರಿಸಿ ಆರೋಗ್ಯಕರ ಸಮಾಜ ನಿರ್ಮಿಸಲು ಜಾಗ್ರತೆ ಮೂಡಿಸಲಾಯಿತು ಎಂದರು

ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ಎಮ್ ಕೆ ಪಾಟೀಲ, ಕೆ ಎಲ್ ಜಿನರಾಳಿ, ಎಮ್ ಎಮ್ ಪಾಟೀಲ, ಎಸ್ ಆರ್ ಶೇಟ್ಟಿ, ವಿಠ್ಠಲ ಗಸ್ತಿ, ವಿನಯ ಪಾಟೀಲ, ಮಹಾಂತೇಶ ಬೋರಗಲ್ಲಿ, ಕೆ ಬಿ ಕುರಬೆಟ, ಕೆ ಎಮ್ ಬುಗಡಿಕಟ್ಟಿ, ಮತ್ತು ಪೋಲಿಸ್ ಇಲಾಖೆ, ತಾಲೂಕಾ ಪಂಚಾಯತ, ಪುರಸಭೆ ಮತ್ತು ಪೌರ ಕಾರ್ಮಿಕರು ಉಪಸ್ಥಿತರಿದ್ದರು.

ರಾಜು ಬಾಗಲಕೋಟಿ
ಇನ್ ನ್ಯೂಸ್ ಹುಕ್ಕೇರಿ.

Tags: