ಮಿಸ್ಟರ್ ಡಿ.ಕೆ.ಶಿವಕುಮಾರ್ ಈ ಆಟ ನಡೆಯಲ್ಲ ಅಂತಾ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ನನಗೆ ಎಚ್ಚರಿಕೆ ಕೊಟ್ಟಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ತಾವು ಎಷ್ಟೇ ವಾರ್ನಿಂಗ್ ಕೊಟ್ಟರೂ ಹೆದರಿಸಿದರೂ, ಬೆದರಿಸಿದರೂ ತಮ್ಮ ಸುಪುತ್ರನ ಕ್ಷೇತ್ರದ ಮುಖಂಡರು ಕಾಂಗ್ರೆಸ್ ಪಕ್ಷದ ಕಡೆ ಬಂದಿದ್ದಾರೆ ಎಂದು ಹೆಚ್.ಡಿ.ದೇವೇಗೌಡರ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಈ ಆಟ ನಡೆಯಲ್ಲ ಅಂತಾ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ನನಗೆ ಎಚ್ಚರಿಕೆ ಕೊಟ್ಟಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಜೆಡಿಎಸ್ ಪಕ್ಷದ ಮುಖಂಡರು ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಮಾತು ನನಗೆ ಆಶೀರ್ವಾದ ಇದ್ದಂತೆ. ವಿಸರ್ಜನೆ ಮಾಡುತ್ತೇವೆ ಎಂದಾಗ ಕಾರ್ಯಕರ್ತರು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದ್ದಾರೆ
ಬಿಜೆಪಿ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದರು. ರಾಜಕಾರಣ ಹಾವು ಏಣಿ ಆಟ, ಚೆಸ್ ಗೇಮ್. ಹಿಂದೆ ನೀವೇನು ಮಾಡಿದಿರಿ, ಬಿಜೆಪಿಯವರು ಏನು ಮಾಡಿದರು ಗೊತ್ತಿದೆ. ನೀವು ಹೆದರಿಸಿದರೆ ಡಿಕೆ ಹೆದರಲ್ಲ ಎನ್ನೋದು ನಿಮಗೂ ಗೊತ್ತಿದೆ. ನೀವು ಯಾರನ್ನು ಬೇಕಾದರೂ ಸಹ ಕಟ್ಟಿಹಾಕಿಕೊಳ್ಳಿ, ಹಿಡಿದಿಟ್ಟುಕೊಳ್ಳಿ. ಆದರೆ ಮನೆಮನೆಗೆ ಹೋಗಿ ಕಾರ್ಯಕರ್ತರನ್ನು ಕರೆದುಕೊಂಡು ಬರುತ್ತೇನೆ ಎಂದು ಹೇಳಿದ್ದಾರೆ
ನಾನು ನಮ್ರತೆಯಿಂದ ಕಾರ್ಯಕರ್ತರನ್ನು ಕರೆದುಕೊಂಡು ಬರುತ್ತೇನೆ. 88ರಲ್ಲೂ ರಾಜಕಾರಣ ಮಾಡಿದ್ದೇನೆ, 89ರಲ್ಲೂ ರಾಜಕಾರಣ ಮಾಡಿದ್ದೇನೆ. ಸಾತನೂರಿನಲ್ಲಿ ನಾನು ಏನು ಮಾಡಿದೆ, ತೇಜಸ್ವಿನಿ ಏನು ಮಾಡಿದ್ರು ಗೊತ್ತು.ತಾವು ಎಷ್ಟೇ ವಾರ್ನಿಂಗ್ ಕೊಟ್ಟರೂ ಹೆದರಿಸಿದರೂ, ಬೆದರಿಸಿದರೂ ತಮ್ಮ ಸುಪುತ್ರನ ಕ್ಷೇತ್ರದ ಮುಖಂಡರು ಕಾಂಗ್ರೆಸ್ ಪಕ್ಷದ ಕಡೆ ಬಂದಿದ್ದಾರೆ ಎಂದು ಹೆಚ್.ಡಿ.ದೇವೇಗೌಡರ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿರುವ ಡಿ.ಕೆ.ಶಿವಕುಮಾರ್, ತಾವು ಒಂದೊಂದು ದಿನ ಎಲ್ಲಿ ಬೇಕಾದ್ರೂ ಸಂಬಂಧ ಬೆಳೆಸಿಕೊಳ್ಳಬಹುದು. ದಂಡ ನಾಯಕರಾಗಿ ಎಷ್ಟು ಸಲ ಪಕ್ಷ ವಿಸರ್ಜನೆ ಮಾಡ್ತೀವಿ ಅಂತೀರಾ? ಹಾಗಾದರೆ ಸಿದ್ಧಾಂತ ನಂಬಿಕೊಂಡ ಕಾರ್ಯಕರ್ತರು ಎಲ್ಲಿಗೆ ಹೋಗಬೇಕು. ಎಂದು ಪ್ರಶ್ನಿಸಿದರು