Uncategorized

ಆಡಳಿತ ಸರ್ಕಾರದ ವಿರುದ್ಧ ಹರಿಹಾಯ್ದ ಶಾಸಕ ರಾಜು ಕಾಗೆ

Share

ರಾಜ್ಯ ಸರ್ಕಾರದ ವಿದ್ಯುತ್ ನಿಗಮಗಳಿಂದ ರೈತರಿಗೆ ಪೂರೈಸುತ್ತಿರುವ ವಿದ್ಯುತ್‍ದಲ್ಲಿ ಬಹಳಷ್ಟು ವ್ಯತ್ಯ ಮಾಡಿದ್ದಾರೆ 6 ರಿಂದ 7 ಗಂಟೆ ವಿದ್ಯುತ್ ಪೂರೈಸಬೇಕಾಗಿತ್ತು, ಆದರೆ ಗ್ರಾಮೀಣ ಭಾಗದಲ್ಲಿ 3 ರಿಂದ 4 ಗಂಟೆ ಮಾತ್ರ ವಿದ್ಯುತ್ ಪೂರೈಸುತ್ತಿದ್ದಾರೆ. ಮಳೆಗಾಲದಲ್ಲಿ ಈ ಸ್ಥಿತಿ ಆದರೆ ಬೇಸಿಗೆಯಲ್ಲಿ ಏನಾಗಬಹುದು ? ಎಂದು ಆಡಳಿತ ಸರ್ಕಾರದ ಕಾಗವಾಡ ಶಾಸಕ ರಾಜು ಕಾಗೆ ಇದೊಂದು ಸರ್ಕಾರದ ವೈಫಲ್ಯ ಎಂದು ಹೇಳಿದ್ದಾರೆ.

ಸೋಮವಾರ ರಂದು ಉಗಾರದ ಶಾಸಕರ ಕಚೇರಿಯಲ್ಲಿ ರಾಜು ಕಾಗೆ ಇನ್ ವಾಹಿನಿ ಜೊತೆಗೆ ಮಾತನಾಡಿ, ಸರ್ಕಾರದ ವೈಫಲ್ಯತೆ ಬಗ್ಗೆ ಸ್ಪಷ್ಟವಾಗಿ ತಮ್ಮ ಅಳಲನ್ನು ತೋಡಿಕೊಂಡರು. ಈ ವೈಫಲ್ಯ ಆಡಳಿತ ಸರ್ಕಾರದಲ್ಲಿ ನೀವು ಶಾಸಕರಾಗಿದ್ದೀರಿ ಇದು ನಿಮಗೆ ವೈಫಲ್ಯವಾಗಿದೆ ಎಂದು ಪ್ರಶ್ನಿಸಿದಾಗ ವಿದ್ಯುತ್ ನಿಗಮದ ವೈಫಲ್ಯ ಬಗ್ಗೆ ಸರ್ಕಾರದ ಇಲಾಖೆ ಅಧಿಕಾರಿಗಳೊಂದಿಗೆ ನಾನು ಚರ್ಚಿಸಿದ್ದೇನೆ, ಒಬ್ಬ ರೈತನಗೆ ಪಂಪಸೆಟ ವಿದ್ಯುತ ಕನೆಕ್ಷನ್ ತಗೋಬೇಕಾದರೆ 5 ರಿಂದ 6 ಲಕ್ಷ ರೂಪಾಯಿ ಹಣದ ಜಮಾ ಮಾಡಲು ಅಧಿಕಾರಿಗಳು ಕೇಳಿಕೊಳ್ಳುತ್ತಿದ್ದಾರೆ.
ಎಂದು ಆರೋಪಿಸಿ ಶೇಡಬಾಳದ ಮಾಜಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮಹಾದೇವಿ ಮಾಕ್ಕನವರ್ ಇವರು ಎಸ್.ಟಿ ಸಮಾಜದವರಾಗಿದ್ದು, ಒಂದು ಹಿಟ್ಟಿನ ಗಿರಣಿ ಪ್ರಾರಂಭಿಸಲು ಕಳೆದ ಒಂದು ವರ್ಷಗಳಿಂದ ಪ್ರಯತ್ನಿಸುತ್ತಿದ್ದಾರೆ. ಆದರೂ ಇನ್ನೂವರೆಗೆ ಅವರ ಅರ್ಜಿ ಸ್ವೀಕರಿಸಿಲ್ಲ. ಅಲ್ಲದೆ 40 ರಿಂದ 50 ಸಾವಿರ ರೂಪಾಯಿ ಹಣ ಸಂಗ್ರಹಿಸಲು ಕೇಳುತ್ತಿದ್ದಾರೆ, ಇಷ್ಟೊಂದು ಹಣ ಇವರಿಂದ ಎಲ್ಲಿಂದ ಬರುವುದು ಈ ರೀತಿ ವಿದ್ಯುತ್ ನಿಗಮದವರು ಅನ್ಯಾಯ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಬೈಟ್

ತಾವು ಒಂದು ಆಡಳಿತ ಪಕ್ಷದ ಶಾಸಕರಾಗಿ ಈ ರೀತಿ ಅಸಹಾಯತೆ ತೋರಿಸುತ್ತಿದ್ದೀರಿ ಅಂದರೆ ಮತಕ್ಷೇತ್ರದ ಜನರ ಸ್ಥಿತಿ-ಗತಿ ಹೇಗೆ ಎಂದು ಕೇಳಿದಾಗ, ಈ ಅಧಿಕಾರಿಗಳ ಮೇಲೆ ಮೇಲಾಧಿಕಾರಿಗಳ ಹಿಡಿತ ಇಲ್ಲ, ಈ ಬಗ್ಗೆ ಸಚಿವರಿಗೆ ಮಾತನಾಡಿದ್ದೇನೆ. ನಾಳೆ ಮುಖ್ಯಮಂತ್ರಿಗಳೇ ಬರುತ್ತಿದ್ದಾರೆ ಅವರೊಂದಿಗೆ ಮಾತನಾಡುತ್ತೇನೆಎಂದರು .

ರಾಜ್ಯದಲ್ಲಿ ಶಾಸಕಾಂಗ, ಕಾರ್ಯಂಗ, ನ್ಯಾಯಂಗದ ಅಧಿಕಾರಿಗಳು ಸರಿಯಾಗಿ ತಮ್ಮ ಕಾರ್ಯ ಮಾಡುತ್ತಿಲ್ಲ. ನಾವು ಕೇವಲ ಭಾಷನದಲ್ಲಿ ಸಮಾನತೆ ಬಗ್ಗೆ ಮಾತನಾಡುತಿದ್ದೇವೆ ಇದು ಕೇವಲ ಪುಸ್ತಕಗಳಲ್ಲಿ ಮಾತ್ರ ಉಳಿದಿದೇ. ಪ್ರತಿಒಬ್ಬರು ಪ್ರಾಮನಿಕತೆಯಿಂದ ತಮ್ಮ ಕಾರ್ಯ ಮಾಡಿದರೆ, ಒಳ್ಳೆ ದೇಶ ಕಟ್ಟಲು ಸಾದ್ಯ ಎಂದು ಹೇಳಿ ನಾನು ಸಧ್ಯದ ಸ್ಥಿತಿ-ಗತಿ ಕಂಡು ಅಸಾಯಕನಾಗ್ಗಿದೇನೆ ಎಂದರು.

ಈ ವೇಳೆ ಅಥಣಿ ಕೃಷ್ಣ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ಶಂಕರ್ ವಾಗಮೊಡೆ, ಪ್ರಶಾಂತ ಅಪರಾಜ್, ಬಾಳಾಸಾಹೇಬ್ ವೀಸಾಪುರೆ, ಸರ್ಕಾರಿ ಅಧಿಕಾರಿಗಳು ಇದ್ದರು.

ಸುಕುಮಾರ ಬನ್ನೂರೆ
ಇನ್ ನ್ಯೂಸ್ ಕಾಗವಾಡ

Tags: