ಮಹಾತ್ಮಾಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಚತಾ ಸಪ್ತಾಹದ ಅಂಗವಾಗಿ ಧಾರವಾಡ ನಗರದ ಕಲಾಭವನದ ಬಳಿಯ ಜಗಜ್ಯೋತಿ ಬಸವೇಶ್ವರ ಪ್ರತಿಮೆ ಆವರಣವನ್ನು ಎನ್ ಸಿ ಸಿ ವಿದ್ಯಾರ್ಥಿಗಳು ಸ್ವಚ್ಚಗೊಳಿಸಿದರು.
5 ಕರ್ನಾಟಕ ಬಾಲಕಿಯರ ಬೆಟಾಲಿಯನ್ ಎನ್‌ಸಿಸಿ ಧಾರವಾಡದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಜೆಎಸ್ಎಸ್ ಕಾಲೇಜು, ಪ್ರೆಸೆಂಟೇಶನ್ ಬಾಲಕಿಯರ ಶಾಲೆ, ಕೆಎನ್‌ಕೆ ಬಾಲಕಿಯರ ಶಾಲೆ ಎನ್ ಸಿ ಸಿ ಕೆಡೆಟ್‌ಗಳು ಸ್ವಚ್ಚತಾ ಸಪ್ತಾಹದಲ್ಲಿ ಭಾಗವಹಿಸಿದ್ದರು.
ನಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿ ಮತ್ತು ಅಚ್ಚುಕಟ್ಟಾಗಿ ಇಡುವ ಬಗ್ಗೆ ಜಾಗೃತಿ ಮೂಡಿಸಿದರು. ಕಾರ್ಯಕ್ರಮದಲ್ಲಿ ಎನ್ ಸಿ ಸಿ ಅಧಿಕಾರಿಗಳಾದ ಲೆಫ್ಟಿನೆಂಟ್ ವಿದ್ಯಾ ರಾಯ್ಕರ್, ಪ್ರಥಮ ಅಧಿಕಾರಿ ವಿಕ್ಟೋರಿಯಾ ಝಲ್ಕೆ, ದ್ವಿತೀಯ ಅಧಿಕಾರಿ ಸುಜಾತಾ ತುಪ್ಪದ್, ಸಿಟಿಒ ಕವಿತಾ ಸುಬೇದಾರ್ ಮೇಜರ್ ಸುಖರಾಮ್, ಹವಾಲ್ದಾರ್ ಚಂದ್ರಪಾಲ್ ಸಿಂಗ್ ಸೇರಿದಂತೆ ಹಲವರು ಇದ್ದರು.
Uncategorized
ಎನ್ ಸಿ ಸಿ ವಿದ್ಯಾರ್ಥಿಗಳಿಂದ ಸ್ವಚ್ಚತಾ ಅಭಿಯಾನ
