ಬಿಗ್ ಬಾಸ್ ಕನ್ನಡ ಸೀಸನ್ 10 ಪ್ರಸಾರಕ್ಕೆ ದಿನಗಣನೆ ಪ್ರಾರಂಭವಾಗಿದೆ. ಇದೇ ಅಕ್ಟೋಬರ್ 8 ರಿಂದ ಬಿಗ್ ಬಾಸ್ 10 ನೇ ಆವೃತ್ತಿ ಆರಂಭವಾಗಲಿದೆ. ಪ್ರತಿ ವರ್ಷದಂತೆ ಈ ವರ್ಷ ಕೂಡ ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಬಿಗ್ ಬಾಸ್ ಮೂಡಿಬರಲಿದ್ದು, ಈ ಬಗ್ಗೆ ಮಾಧ್ಯಮ ಗೋಷ್ಠಿ ನಡೆಸಿದ್ದಾರೆ. ಜೊತೆಗೆ ಹಲವಾರು ಸಂಗತಿಯನ್ನು ಹಂಚಿಕೊಂಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ಕಿಚ್ಚ ಸುದೀಪ್ ಬೆಳಗ್ಗೆ ಶೂಟಿಂಗ್ ಇತ್ತು ಹೀಗಾಗಿ ತಡವಾಗಿ ಬಂದೆ. ಬಿಗ್ ಬಾಸ್ ನನ್ನ ಎಮೋಷನ್ ಸ್ಕ್ರಿಪ್ಟ್ ಅಲ್ಲ, ಅದು ನನ್ನ ಒಳಗಿನ ವಿಚಾರ. ನನ್ನ ಫಸ್ಟ್ ಸೀಸನ್ನಲ್ಲಿ ನನ್ನ ಅಗ್ರಿಮೆಂಟ್ ಬೇರೆ. ಆದರೆ ನಾನು ಮಾಡಿದ್ದೇ ಬೇರೆ ಎಂದು ಹೇಳಿದ್ದಾರೆ.
ಬಳಿಕ ಮಾತನಾಡಿದ ಅವರು, ಈ ಬಾರಿ ಪ್ರೋಮೋ ಚೆನ್ನಾಗಿ ಬರೋಕೆ ಕಾರಣ ಟೀಮ್ ವರ್ಕ್. ಸೀಸನ್ 6 ಥರ ಯಾರು ಕಿತ್ತಾಡ್ಕೊಂಡು, ಹೊಡೆದಾಡಿಕೊಳದ್ದಿದ್ದಾರೆ ಸಾಕು. ಎಲ್ಲರೂ ಚೆನ್ನಾಗಿ ಆಟವಾಡಿದ್ರೆ ಸಾಕು. ಜನರ ನಿರೀಕ್ಷೆ ನಾವು ಬೀಟ್ ಮಾಡಿದ್ರೆ ಅಷ್ಟೆ ಸಾಕು ಎಂದು ಹೇಳಿದ್ದಾರೆ
ಕಲರ್ಸ್ ಕನ್ನಡದ ಬ್ಯುಸಿನೆಸ್ ಹೆಡ್ ಪ್ರಶಾಂತ್ ನಾಯ್ಕ್ ಮಾತನಾಡಿದ್ದು, ಈ ಬಾರಿ ಹೊಸದಾಗಿ ಹೊಸ ರೂಪದಲ್ಲಿ ಬಿಗ್ ಬಾಸ್ ಮನೆ ಇರಲಿದೆ. ಈ ಬಾರಿ ವಿಭಿನ್ನ ವಾಗಲಿದೆ. ಕಾರಣ ಈ ಬಾರಿ ಬೇರೆ ಲೋಕೇಷನ್ನಲ್ಲಿ ಮಾಡುತ್ತಿದ್ದೇವೆ. ಇಂಡಿಯಾದಲ್ಲೇ ಅತಿದೊಡ್ಡ ಬಿಗ್ ಬಾಸ್ ಮನೆ ಇರಲಿದೆ ಎಂದು ಹೇಳಿದ್ದಾರೆ.
ನಂತರ ಮಾತನಾಡಿದ ಅವರು, ಬಿಗ್ ಬಾಸ್ ಸಂಜೆ ಆರು ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ಬೇರೆ ಬೇರೆ ಕ್ಷೇತ್ರದ 16 ಜನ ಸ್ಫರ್ಧಿದಾರರು ಬಿಗ್ ಬಾಸ್ ಮನೆ ಸೇರಲಿದ್ದಾರೆ. ಬಿಗ್ ಬಾಸ್ ಹತ್ತು ಶೋಗಳನ್ನ ಒಬ್ಬರೆ ಮಾಡಿರೋದು ಕನ್ನಡದಲ್ಲಿ ಮಾತ್ರ. ಸುದೀಪ್ ಅವರು ಇನ್ ಪುಟ್ ಬಹಳಷ್ಟು ಕೊಟ್ಟಿದ್ದಾರೆ. ಈ ಬಾರಿ ಸುದೀಪ್ ಅವರು ಯಾವ ಲುಕ್ ನಲ್ಲಿ ಇರಲಿದ್ದಾರೆ ಅನ್ನೋ ಕುತೂಹಲ ನನಗೆ ಹೆಚ್ಚಿದೆ ಎಂದು ಹೇಳಿದ್ದಾರೆ.