ಸೆಪ್ಟೆಂಬರ್ 26, 2023 ರಿಂದ ಪ್ರತಿದಿನ ಸಂಚರಿಸುವ ಈ ಎಕ್ಸ್ಪ್ರೆಸ್ ರೈಲು ಸೇವೆಯು ಮೈಸೂರಿನಿಂದ ಬೆಳಗಾವಿ ರೈಲು ನಿಲ್ದಾಣಗಳ ನಡುವೆ ಸಂಚರಿಸಲಿದೆ.
ಉತ್ತರ ಕರ್ನಾಟಕದಿಂದ ಮೈಸೂರು ಕರ್ನಾಟಕಕ್ಕೆ ಸಂಪರ್ಕ ಸೇತುವಾಗಿರುವ ಪ್ರಮುಖ ರೈಲಿನ ಕುರಿತು ಮಹತ್ವದ ಅಪ್ಡೇಟ್ ಹೊರಬಿದ್ದಿದೆ.
ರೈಲು ಸಂಖ್ಯೆ 17301/02 ಮೈಸೂರು-ಧಾರವಾಡ-ಮೈಸೂರು ಡೈಲಿ ಎಕ್ಸ್ಪ್ರೆಸ್ ರೈಲನ್ನು ಬೆಳಗಾವಿಯವರೆಗೆ ವಿಸ್ತರಿಸುವ ಪ್ರಸ್ತಾವನೆಗೆ ರೈಲ್ವೆ ಸಚಿವಾಲಯ ಅನುಮೋದನೆ ನೀಡಿದೆ.
ಸೆಪ್ಟೆಂಬರ್ 26, 2023 ರಿಂದ ಪ್ರತಿದಿನ ಸಂಚರಿಸುವ ಈ ಎಕ್ಸ್ಪ್ರೆಸ್ ರೈಲು ಸೇವೆಯು ಮೈಸೂರಿನಿಂದ ಬೆಳಗಾವಿ ರೈಲು ನಿಲ್ದಾಣಗಳ ನಡುವೆ ಸಂಚರಿಸಲಿದೆ.
ಮೈಸೂರಿನಿಂದ ರಾತ್ರಿ 10.30ಕ್ಕೆ ಹೊರಡುವ ರೈಲು ಸಂಖ್ಯೆ 17301 ಮರುದಿನ ಬೆಳಗ್ಗೆ 10.45ಕ್ಕೆ ಬೆಳಗಾವಿಗೆ ಆಗಮಿಸಲಿದೆ. ಜೊತೆಗೆ ರೈಲು ಸಂಖ್ಯೆ 17302 ಬೆಳಗಾವಿಯಿಂದ ರಾತ್ರಿ 8.00 ಗಂಟೆಗೆ ಹೊರಟು ಮರುದಿನ ಬೆಳಗ್ಗೆ 7.10 ಕ್ಕೆ ಮೈಸೂರು ತಲುಪಲಿದೆ.
IRCTC ವೆಬ್ಸೈಟ್ ಪ್ರಕಾರ ಸ್ಲೀಪರ್ ತರಗತಿಯ ದರವು ರೂ 350 ರಿಂದ ಪ್ರಾರಂಭವಾಗಲಿದ್ದು, ಎಸಿ-3 ಶ್ರೇಣಿಯ ವರ್ಗವು ರೂ 950, ಎಸಿ-2 ಶ್ರೇಣಿಯ ವರ್ಗವು ರೂ 1355, ಎಸಿ-ಫಸ್ಟ್ ಕ್ಲಾಸ್ ರೂ 2255 ವೆಚ್ಚವಾಗಲಿದೆ ಎಂದು ಐಆರ್ಸಿಟಿಸಿ ವೆಬ್ಸೈಟ್ ತಿಳಿಸಿದೆ.
ಜೊತೆಗೆ ಸೆಪ್ಟೆಂಬರ್ 23, 2023 ರಂದು ಹುಬ್ಬಳ್ಳಿಯಿಂದ ವಿಜಯವಾಡಕ್ಕೆ ಹೊರಡುವ ಡೈಲಿ ಎಕ್ಸ್ಪ್ರೆಸ್ ರೈಲು ಸಂಖ್ಯೆ 17226 ಹುಬ್ಬಳ್ಳಿಯಿಂದ 75 ನಿಮಿಷ ತಡವಾಗಿ ಹೊರಡುವ ಸಾಧ್ಯತೆ ಇದೆ ಎಂದು ನೈಋತ್ಯ ರೈಲ್ವೆ ಮಾಹಿತಿ ನೀಡಿದೆ
ರೈಲು ಸಂಖ್ಯೆ 07381/07382 ಹುಬ್ಬಳ್ಳಿ-ಕಾರಟಗಿ ಡೈಲಿ ಪ್ಯಾಸೆಂಜರ್ ವಿಶೇಷ ರೈಲು ಸೆಪ್ಟೆಂಬರ್ 23, 2023 ರವರೆಗೆ ರದ್ದುಗೊಂಡಿದೆ.
Uncategorized
ಹೊರಬಿತ್ತು ಗುಡ್ ನ್ಯೂಸ್! ಮೈಸೂರು-ಉತ್ತರ ಕರ್ನಾಟಕದ ಸಂಪರ್ಕ ಸೇತು ಬೆಳಗಾವಿವರೆಗೆ ವಿಸ್ತರಣೆ
