Uncategorized

ಬೋಲ್ಡ್ ಬ್ಯೂಟಿಯಾದ ನಟಿ ನಿಧಿ ಅಗರ್ವಾಲ್

Share

ನಿಧಿ ಅಗರ್ವಾಲ್ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆ್ಯಕ್ಟಿವ್ ಆಗಿದ್ದಾರೆ. ನಟಿ ಆಗಾಗ ಬೋಲ್ಡ್ & ಬ್ಯೂಟಿಫುಲ್ ಆಗಿರುವ ಫೋಟೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ನಟಿ ಇತ್ತೀಚೆಗೆ ಗೋಲ್ಡನ್ ಗೌನ್ನಲ್ಲಿ ಕಾಣಿಸಿಕೊಂಡರು.
ನಿಧಿ ಅಗರ್ವಾಲ್ ಅವರ ಸೌಂದರ್ಯವು ಕೆಲವು ಫೋಟೋಗಳಲ್ಲಿ ರಿವೀಲ್ ಆಗಿದೆ. ನಟಿಯ ಫೊಟೋಸ್ಗೆ ಉತ್ತಮ ಬೇಡಿಕೆಯಿದೆ. ನಿಧಿ ಸ್ಮಾರ್ಟ್ ಬ್ಯೂಟಿಯಾಗಿ ಯುವಜನರ ಮನ ಸೆಳೆದಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸುತ್ತಿದ್ದಾರೆ. ನಟಿ ಇತ್ತೀಚೆಗೆ ಹಂಚಿಕೊಂಡ ಕೆಲವು ಫೋಟೋಗಳು ವೈರಲ್ ಆಗುತ್ತಿವೆ.
ಸಿಂಗಲ್ ಶೋಲ್ಡರ್ ಗೌನ್ ಧರಿಸಿದ್ದ ನಿಧಿ ಅಗರ್ವಾಲ್ ಅವರು ಬ್ಯೂಟಿಫುಲ್ ಆಗಿ ಕಾಣಿಸಿದ್ದಾರೆ. ನಟಿ ಇಯರಿಂಗ್ಸ್ ಮಾತ್ರ ಧರಿಸಿದ್ದರು. ಹೈಸ್ಲಿಟ್ ಗೌನ್ ಹರವಿ ಬಿಟ್ಟು ನಟಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.
ನಿಧಿ ಅಗರ್ವಾಲ್ ಅವರು ಬಟ್ಟೆ ಇಳಿಬಿಟ್ಟಿದ್ದನ್ನು ನೋಡಿದ ನೆಟ್ಟಿಗರು ಅಷ್ಟುದ್ದ ಬಟ್ಟೆ ಹರವಿ ಬಿಡುವುದರ ಬದಲು ಮೇಲಾದರೂ ಮುಚ್ಚಿಕೊಳ್ಳಬಹುದಿಲ್ಲ ಎಂದು ಕಮೆಂಟ್ ಮಾಡುತ್ತಿದ್ದಾರೆ. ಆದರೆ ನಟಿಯ ಗ್ಲಾಮರ್ ಟ್ರೀಟ್ ಮೆಚ್ಚಿಕೊಂಡಿದ್ದಾರೆ.
ನಿಧಿ ಅಗರ್ವಾಲ್ ಕಡಿಮೆ ಚಿತ್ರಗಳನ್ನು ಮಾಡಿದರೂ ಯುವ ಪ್ರೇಕ್ಷಕರ ಮಧ್ಯೆ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಅವರ ಫೋಟೋ ಹಾಗೂ ಅಪ್ಡೇಟ್ಗಳಿಗಾಗಿ ಅಭಿಮಾನಿಗಳು ಯಾವಾಗಲೂ ಕಾಯುತ್ತಿರುತ್ತಾರೆ.
ಹೈದರಾಬಾದ್ನ ಮಾರ್ವಾಡಿ ಕುಟುಂಬದಲ್ಲಿ ಜನಿಸಿದ ನಿಧಿ ಅಗರ್ವಾಲ್ ಮೊದಲು ಮಾಡೆಲಿಂಗ್ ಕ್ಷೇತ್ರವನ್ನು ಆರಿಸಿಕೊಂಡರು. ನಂತರ ಸಿನಿಮಾಗಳಿಗೆ ಪ್ರವೇಶಿಸಿದರು. ಹಿಂದಿಯ ‘ಮುನ್ನಾ ಮೈಕೆಲ್’ ಚಿತ್ರದ ಮೂಲಕ ಪ್ರೇಕ್ಷಕರಿಗೆ ಪರಿಚಯವಾದರು ಈ ನಟಿ.
ಸವ್ಯಸಾಚಿ ಚಿತ್ರದ ಮೂಲಕ ಟಾಲಿವುಡ್ಗೆ ಎಂಟ್ರಿ ಕೊಟ್ಟ ನಿಧಿ ಅಗರ್ವಾಲ್ ಕೆಲವೇ ದಿನಗಳಲ್ಲಿ ಒಳ್ಳೆಯ ಹೆಸರು ಗಳಿಸಿದ್ದರು. ನಾಗ ಚೈತನ್ಯ ಅಭಿನಯದ ಸವ್ಯಸಾಚಿ ಚಿತ್ರ ನಿರೀಕ್ಷಿತ ಫಲಿತಾಂಶ ಪಡೆಯದಿದ್ದರೂ ನಿಧಿಯ ಸೌಂದರ್ಯ ಮತ್ತು ನಟನೆ ತೆಲುಗು ಪ್ರೇಕ್ಷಕರನ್ನು ಮೆಚ್ಚಿಸಿತು.

Tags:

Actress Nidhi Aggarwal of Bold Beauty